ಖಾಕಿ ಅಂಗಿ ತೊಟ್ಟು 60 ಕಿ.ಮೀ.ಬಸ್ ಚಾಲನೆ ಮಾಡಿದ ರೇಣು
Team Udayavani, Jan 5, 2020, 9:49 PM IST
ಹೊನ್ನಾಳಿ: ಈ ಹಿಂದೆ ಎತ್ತಿನಗಾಡಿ, ಟ್ರ್ಯಾಕ್ಟರ್ ಚಲಾಯಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭಾನುವಾರ ಸಾರಿಗೆ ಸಂಸ್ಥೆ ಬಸ್ ಚಾಲಕರಾಗಿ ಗಮನ ಸೆಳೆದರು.
ಮೊದಲೆಲ್ಲ ಬಸ್ ಸ್ಟಾರ್ಟ್ ಮಾಡಿ ಅಥವಾ ಸ್ವಲ್ಪ ದೂರ ಡ್ರೈವಿಂಗ್ ಮಾಡಿ ಹೊಸ ವಾಹನಕ್ಕೆ ಚಾಲನೆ ನೀಡುತ್ತಿದ್ದ ರೇಣುಕಾಚಾರ್ಯ ಭಾನುವಾರ ಮಾತ್ರ ಖಾಕಿ ಅಂಗಿ ತೊಟ್ಟು ಚಾಲಕನ ಸೀಟಲ್ಲಿ ಕೂತು ಬರೋಬ್ಬರಿ 60 ಕಿ.ಮೀ. ಬಸ್ ಚಲಾಯಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಅವರು, ಬಸ್ ಯಾವ ಮಾರ್ಗದಲ್ಲಿ ಸಂಚರಿಸಬೇಕಿತ್ತೋ ಆ ಎಲ್ಲ ಹಳ್ಳಿಗಳಿಗೂ ತೆರಳಿ ಪ್ರಯಾಣಿಕರನ್ನು ಕರೆತಂದರು. ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಿಂದ ಗೊಲ್ಲರಹಳ್ಳಿ, ಬೆನಕನಹಳ್ಳಿ, ಉಜ್ಜನೀಪುರ, ಉಜ್ಜನೀಪುರ ತಾಂಡಾ, ಹೊಟ್ಯಾಪುರ, ಬೀರಗೊಂಡನಹಳ್ಳಿ, ರಾಂಪುರ ಮೂಲಕ ಸಾಸ್ವೆಹಳ್ಳಿ ತಲುಪಿ ಮತ್ತೆ ಇದೇ ಮಾರ್ಗವಾಗಿ ಹೊನ್ನಾಳಿಗೆ ವಾಪಸ್ ಬಂದರು.
ಶಾಸಕರು ಬಸ್ ಚಲಾಯಿಸುತ್ತ ಬಂದಾಗ ಪ್ರತಿ ಹಳ್ಳಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ ಬಸ್‌ಗೆ ಪೂಜೆ ಸಲ್ಲಿಸಿ, ಶಾಸಕರಿಗೆ ಹೂವಿನ ಮಾಲೆ ಹಾಕಿ ಸ್ವಾಗತಿಸಿದರು. ಅಲ್ಲದೆ ಹೊಸ ಬಸ್ ಆಗಮನದಿಂದ ಎಲ್ಲ ಹಳ್ಳಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.