ಬಾಕಿ ವೇತನ ಪಾವತಿಗೆ ಆಗ್ರಹ
Team Udayavani, Oct 22, 2019, 11:13 AM IST
ಜಗಳೂರು: ಏಳು ತಿಂಗಳು ಕಳೆದರೂ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ದಿನಗೂಲಿ ನೌಕರರು ಸಂಜೆ ಕಚೇರಿ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಗ್ಗೆಯಿಂದ ವಲಯ ಅರಣ್ಯಾ ಧಿಕಾರಿಗಾಗಿ ನೌಕರರು ಕಾದರೂ ಸಹ ಈಗ ಬರುತ್ತೇನೆ, ಆಗ ಬರುತ್ತೇನೆ ಎಂದು ಹೇಳುತ್ತ ಸಂಜಾಯದರೂ ಅಧಿಕಾರಿ ಬಾರದ್ದರಿಂದ ನೌಕರರು ದಿಢೀರ್ ಪ್ರತಿಭಟನೆ ನಡೆಸಿದರು.
ಇಲಾಖೆಯ ಸುಮಾರು 30 ದಿನಗೂಲಿ ನೌಕರರರಿಗೆ ಕಳೆದ ಏಳು ತಿಂಗಳುಗಳಿಂದ ಸರಿಯಾಗಿ ವೇತನ ದೊರೆತಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಂಬಳ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ನೌಕರರು ದೂರಿದರು. ಅರಣ್ಯದಲ್ಲಿ ಮತ್ತು ಸಸ್ಯ ಕ್ಷೇತ್ರಗಳಲ್ಲಿ ಹಗಲಿರುಳೆನ್ನೆದೆ ಕಷ್ಟ ಪಟ್ಟು ದುಡಿಯುತ್ತಿದ್ದರೂ ಸಹ ವೇತನ ನೀಡದೇ ಇರುವುದರಿಂದ ಊಟಕ್ಕೂ ಸಹ ಕಷ್ಟಪಡುತ್ತಿದ್ದೇವೆ.
ಇಲಾಖೆಯ ನಿಯಮದಂತೆ 9600 ರೂ. ಸಂಬಳವಿದ್ದರೂ ಕೂಡ ವಲಯ ಅರಣ್ಯ ಅಧಿಕಾರಿಗಳು 7 ಸಾವಿರ ರೂ. ನೀಡುತ್ತಿದ್ದಾರೆ. ಈ ವೇತನವನ್ನೂ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.