ಗಡಿ ಭದ್ರತಾ ಪಡೆ ನಿವೃತ್ತ ಸೈನಿಕರಿಗೆ ಅದ್ದ ರಿ ಸ್ವಾಗತ
Team Udayavani, Jan 6, 2022, 10:19 PM IST
ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ 27 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಬುಧವಾರ ನಗರಕ್ಕೆ ಆಗಮಿಸಿದ ನಾಗರಾಜ ಶೆಟ್ಟಿ ಮತ್ತು ರಾಘವೇಂದ್ರ ಅವರಿಗೆ ಮೇಯರ್ ಎಸ್.ಟಿ. ವೀರೇಶ್ ಒಳಗೊಂಡಂತೆ ಮತ್ತಿತರರು ಭವ್ಯ ಸ್ವಾಗತ ಕೋರಿದರು.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ವೀರ ಯೋಧರ ಸ್ವಾಗತಕ್ಕಾಗಿ ಅನೇಕರು ನೆರೆದಿದ್ದರು. ಇಬ್ಬರು ಯೋಧರು ಆಗಮಿಸುತ್ತಿದ್ದಂತೆ ನಾಗರಾಜ ಶೆಟ್ಟಿ, ರಾಘವೇಂದ್ರ ಅವರಿಗೆ ಜಯವಾಗಲಿ, ಭಾರತ್ ಮಾತಾಕೀ ಜೈ ಎಂಬ ಘೋಷಣೆ ಮೊಳಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಕೋಟ್ಯಂತರ ಭಾರತೀಯರ ನೆಮ್ಮದಿಯ ಜೀವನಕ್ಕೆ ಕಾರಣವಾಗಿರುವ ವೀರಯೋಧರ ಕರ್ತವ್ಯ ಎನ್ನುವುದು ಅವರ ಮರಣದವರೆಗೂ ಇರುತ್ತದೆ.
ಸೈನಿಕರು ತಮ್ಮ ಕುಟುಂಬದಿಂದ ಸಾವಿರಾರು ಕಿಲೋಮೀಟರ್ ದೂರವಿದ್ದು, ವೈಯಕ್ತಿಕ ಹಾಗೂ ಕುಟುಂಬದ ಆಸೆಗಳನ್ನು ಬದಿಗೊತ್ತಿ ಭಾರತಮಾತೆಯ ರಕ್ಷಣೆಗೋಸ್ಕರ ಗಡಿ ಭಾಗದಲ್ಲಿ ಕಾವಲು ಕಾಯುತ್ತಿರುತ್ತಾರೆ. ಅವರ ಸೇವೆ ಸದಾ ಸ್ಮರಣೀಯ ಎಂದರು. ನೆರೆಯ ಪಾಕಿಸ್ತಾನ ಹಾಗೂ ಚೀನಾ ಪದೆ ಪದೇ ಕುತಂತ್ರ ಮಾಡುತ್ತಲೇ ಬರುತ್ತಿವೆ. ನಮ್ಮ ಭಾರತೀಯ ವೀರ ಯೋಧರು ತಕ್ಕ ಉತ್ತರ ನೀಡುತ್ತಾ ಬಂದಿದ್ದಾರೆ. ಅಂತಹ ಯೋಧರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ಗಡಿ ಭದ್ರತಾ ಪಡೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ನಂತರ ದಾವಣಗೆರೆಗೆ ಆಗಮಿಸಿರುವ ನಾಗರಾಜ ಶೆಟ್ಟಿ, ರಾಘವೇಂದ್ರ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು. ಇಬ್ಬರೂ ಯೋಧರು, ತಮ್ಮೂರಿನ ಜನರು ಕೋರಿದ ಸ್ವಾಗತಕ್ಕೆ ಸಂತಸ ವ್ಯಕ್ತಪಡಿಸಿದರು. ಯುವ ಸಮೂಹ ಸೇನೆ ಸೇರುವ ಮೂಲಕ ಭಾರತ ಮಾತೆಯ ಸೇವೆ ಮಾಡಬೇಕು ಎಂದು ತಿಳಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಮಂಜುನಾಥ ನಾಯ್ಕ, ನಗರ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ, ಮಂಜುನಾಥ್, ಬಿ.ಎಸ್. ಬಸವರಾಜ್, ಎಂ. ನಾರಾಯಣಸ್ವಾಮಿ, ನಾಗರಾಜ್, ನೀಲಮ್ಮನ ತೋಟದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾ ಸಮಿತಿ, ವಂದೇಮಾತರಂ ಕ್ರೀಡಾ ಸಮಿತಿ, ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಕಬಡ್ಡಿ ಕ್ರೀಡಾ ಸಮಿತಿ, ಜಿಲ್ಲಾ ಪ್ಯಾರಾ ಮಿಲಿಟರಿ ಯೋಧರ ಸಂಘ, ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಪದಾಧಿ ಕಾರಿಗಳು, ಇತರೆ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಕುಟುಂಬ ಸದಸ್ಯರು ಇದ್ದರು. ತೆರೆದ ಜೀಪಿನಲ್ಲಿ ಇಬ್ಬರು ಯೋಧರ ಮೆರವಣಿಗೆ ನಡೆಸಲಾಯಿತು. ಮೇಯರ್ ಎಸ್.ಟಿ. ವೀರೇಶ್ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.