ತುಂಗಭದ್ರೆ ಮಡಿಲಲ್ಲಿ ಸಂಕ್ರಾಂತಿ ಸಂಭ್ರಮ
Team Udayavani, Jan 15, 2021, 2:41 PM IST
ಹರಿಹರ: ಸಂಕ್ರಾಂತಿ ಹಬ್ಬದ ನಿಮಿತ್ತ ಗುರುವಾರ ನಗರದ ತುಂಗಭದ್ರಾ ನದಿ ದಡದಲ್ಲಿ ಸಾವಿರಾರು ಜನರು ಗಂಗಾಪೂಜೆ ನೆರವೇರಿಸಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ದಾವಣಗೆರೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಟ್ರ್ಯಕ್ಟರ್, ಕಾರು, ಆಟೋ, ದ್ವಿಚಕ್ರ ವಾಹನಗಳಲ್ಲಿ ಕುಟುಂಬ ಸ್ನೇಹಿತರೊಂದಿಗೆ ಬಂದ ಸಾವಿರಾರು ಜನರು ನದಿ ದಡದಲ್ಲಿ ಜಮಾಯಿಸಿದ್ದರು. ನದಿಯ ಪಶ್ಚಿಮ ಭಾಗವಾದ ಅಯ್ಯಪ್ಪಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಎಂದಿನಂತೆ ಹೆಚ್ಚಿನ ಜನಸಂದಣಿ ಇತ್ತು. ಪೂರ್ವ ಭಾಗದ ವಾಟರ್ ವರ್ಕ್ಸ್, ರೈಲ್ವೆ ಸೇತುವೆ, ರಾಘವೇಂದ್ರ ಮಠದ ಸಮೀಪವೂ ಜನರು ಸೇರಿದ್ದರು.
ವಿಶಿಷ್ಟ ಭಕ್ಷ್ಯ ಭೋಜನ: ಬಿರು ಬಿಸಿಲಿನ ಚುರುಕಿನಲ್ಲೂ ಮರಳಿನ ಮೇಲೆ ಜನರು ಗುಂಪು ಗುಂಪಾಗಿ ಕುಳಿತು ಭೋಜನ ಸವಿದರು. ಜೋಳ-ಸಜ್ಜೆಯ ಖಡಕ್ ರೊಟ್ಟಿ, ಬಿಸಿ ಚಪಾತಿ, ಮುಳುಗಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕಡ್ಲೆ, ಹೆಸರುಕಾಳು, ಬಟಾಣಿ, ಮಡಿಕೆ ಮತ್ತಿತರೆ ಪಲ್ಯಗಳು ಜೊತೆಗೆ ಶೇಂಗಾ, ಎಳ್ಳು, ಕೊಬ್ಬರಿ, ಹಸಿಮೆಣಸು, ಕೆಂಪುಮೆಣಸು, ಕುರುಶಿಣಿ ಚಟ್ನಿಗಳು, ಅಲ್ಲದೆ ಬಿಳಿ ಅನ್ನ, ಚಿತ್ರಾನ್ನ, ಒಗ್ಗರಣೆ ಬುತ್ತಿ ಜೊತೆಗೆ, ಈರುಳ್ಳಿ, ಸಾಂಬಾರು, ಮೊಸರು, ಮಜ್ಜಿಗೆ ಒಳಗೊಂಡ ರುಚಿ ರುಚಿ ಊಟ ಮಾಡಿದರು.
ಪವಿತ್ರ ಸ್ನಾನ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸಾಧಾರಣವಾಗಿತ್ತು. ಅಯ್ಯಪ್ಪಸ್ವಾಮಿ ದೇವಸ್ಥಾನದ ಭಕ್ತ ಜನರು ಪವಿತ್ರ ಸ್ನಾನ ಮಾಡಿದರು. ಯುವಕ-ಯುವತಿಯರು, ಹಿರಿ-ಕಿರಿಯರೆಲ್ಲಾ ನದಿ ನೀರಿನಲ್ಲಿ ಈಜಾಡಿದರು. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಗಂಗಾಪೂಜೆ ನೆರವೇರಿಸಿದರು. ಅಯ್ಯಪ್ಪ ಸ್ವಾಮಿ ದೇವಾಲಯ, ರಾಘವೇಂದ್ರ ಮಠ, ಚಿತ್ರಾ ಟಾಕೀಸ್ ಹಿಂಭಾಗ, ರೈಲ್ವೆ ಸೇತುವೆ, ಹಳೆಯ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ಜನರು ಕುಳಿತು ಊಟ ಮಾಡಿದರು. ಬಿಸಿಲಿನ ತಾಪ ಹೆಚ್ಚಿಲ್ಲದಿದ್ದರೂ ನೆರಳಿಗಾಗಿ ಜನರು ಅಲ್ಲಲ್ಲಿ ಡೇರೆಗಳನ್ನು ಹಾಕಿಕೊಂಡಿದ್ದರು.
ಇದನ್ನೂ ಓದಿ:ಒಂದಾಗಿ ಶಾಲೆಗೆ ಹೋದವರು ಒಟ್ಟಿಗೆ ಮಸಣ ಸೇರಿದರು: ಗುರುತಿಸಲಾಗದಷ್ಟು ಜರ್ಜರಿತವಾದ ಮೃತದೇಹಗಳು
ನದಿ ತೀರದುದ್ದಕ್ಕೂ ಐಸ್‌ಕ್ರೀಮ್, ಮಂಡಕ್ಕಿ, ಗಿರ್ಮಿಟ್, ಕಡ್ಲೆಗಿಡ, ಹುರಿದ ಶೇಂಗಾ, ಬಲೂನ್ ಹಾಗೂ ಮಕ್ಕಳ ಆಟಿಕೆಗಳ ವ್ಯಾಪಾರ ಜೋರಾಗಿತ್ತು. ವಾಹನ ನಿಯಂತ್ರಣದ ಜೊತೆಗೆ ನದಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ ಇತರೆ ಭಾಗದಿಂದ ಜನರು ಆಗಮಿಸಿದ್ದರು. ತುಂಗ, ಭದ್ರ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮದ ಛಾಪು ಇಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ.
ಚಿಕ್ಕಬಿದರಿ, ಸಾರಥಿ, ಗುತ್ತೂರು, ಹರ್ಲಾಪುರ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ನಂದಿಗುಡಿ, ಉಕ್ಕಡಗಾತ್ರಿ ಮುಂತಾದ ನದಿ ಸಾಲಿನ ಗ್ರಾಮಗಳಲ್ಲಿ, ತಾಲೂಕಿನ ಕೊಂಡಜ್ಜಿ ಬೆಟ್ಟ ಹಾಗೂ ಕೊಮಾರನಹಳ್ಳಿ, ದೇವರಬೆಳೆಕೆರೆ ಕೆರೆಯಂಗಳದಲ್ಲೂ ಜನ ಸಂಕ್ರಾಂತಿ ಹಬ್ಬದಾಚರಣೆ ಮಾಡಿದರು. ಹರಿಹರ ನಗರದ ಶ್ರೀ ಹರಿಹರೇಶ್ವರಸ್ವಾಮಿ, ಗ್ರಾಮದೇವತೆ, ಉಕ್ಕಡಗಾತ್ರಿಯ ಕರಿಬಸವೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ಸಂಕ್ರಾಂತಿ ನಿಮಿತ್ತ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ
Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್: ಮಹಾನಗರ ಪಾಲಿಕೆಯ ಹೊಸ ಕ್ರಮ
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.