Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
Team Udayavani, Oct 15, 2024, 6:52 PM IST
ದಾವಣಗೆರೆ: ಬೋನಾಪೈಡ್ ಪ್ರಮಾಣಪತ್ರಕ್ಕಾಗಿ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಮಂಗಳವಾರ (ಅ.15) ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಸಂತೇಬೆನೂರು ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು.
ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ಎಸ್.ಆರ್. ಕುಮಾರ್ ಎಂಬುವರು ಸಹೋದರ ಗಿರೀಶ್ ಅವರೊಂದಿಗೆ ಸೆ.26 ರಂದು ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಗುರುತಿನ ಚೀಟಿ ಒದಗಿಸಲಾಗಿಲ್ಲ ಎಂಬ ಹಿಂಬರಹದೊಂದಿಗೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಅ.10 ರಂದು ಮತ್ತೊಮ್ಮೆ ಬೋನಾಪೈಡ್ ಪ್ರಮಾಣಪತ್ರಕ್ಕಾಗಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದ ಕುಮಾರ್ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ಯಾವ ಕಾರಣಕ್ಕಾಗಿ ಬೋನಾಪೈಡ್ ಪ್ರಮಾಣಪತ್ರದ ಕೆಲಸ ಆಗುತ್ತಿಲ್ಲ ಎಂಬುದಾಗಿ ಕೇಳಿದಾಗ ಎರಡು ಸಾವಿರ ರೂಪಾಯಿ ನೀಡಿದರೆ ಪ್ರಮಾಣಪತ್ರ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ಕುಮಾರ್ ಮುಂಗಡವಾಗಿ 500 ರೂಪಾಯಿ ನೀಡಿದ್ದರು.
ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಬೋನಾಪೈಡ್ ಪ್ರಮಾಣಪತ್ರಕ್ಕೆ 2 ಸಾವಿರ ರೂಪಾಯಿ ಕೇಳಿರುವ ಬಗ್ಗೆ ಲೋಕಾಯುಕ್ತರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಇನ್ನುಳಿದ ಹಣವನ್ನು ಪಡೆಯುತ್ತಿರುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರನ್ನು ಬಂಽಸಿದರು.
ಲೋಕಾಯುಕ್ತ ಅಧಿಕ್ಷಕ ಎಂ.ಎಲ್. ಕೌಲಾಪುರೆ, ಉಪಾಧ್ಯಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ನಿರೀಕ್ಷಕ ಸಿ. ಮಧುಸೂಧನ್, ಪ್ರಭು ಬಿ. ಸೂರಿನ, ಪಿ. ಸರಳ ಹಾಗೂ ಸಿಬ್ಬಂದಿಗಳಾದ ಆಂಜನೇಯ, ವೀರೇಶಯ್ಯ, ಸುಂ ದರೇಶ್, ಆಶಾ, ಎನ್.ಬಿ. ಮಲ್ಲಿಕಾರ್ಜುನ್, ಎಸ್.ಎನ್. ಲಿಂಗೇಶ್, ಎನ್. ಧನರಾಜ್, ಎಸ್.ಎಚ್. ಗಿರೀಶ್, ಕೃಷ್ಣ, ವಿನಾಯಕ, ಬಸವರಾಜ್ ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.