ಎಸ್‌ಡಿಪಿ ಯೋಜನೆ ಮಾಹಿತಿಯೇ ಗೊತ್ತಿಲ್ಲ!
Team Udayavani, Mar 24, 2017, 1:00 PM IST
ದಾವಣಗೆರೆ: ಡಾ|ಡಿ.ಎಂ.ನಂಜುಂಡಪ್ಪ ವರದಿ ಆಧರಿಸಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ರಚಿಸಲಾದ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ! ಗುರುವಾರ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸತ್ಯ ಬೆಳಕಿಗೆ ಬಂತು.
ಎಸ್‌ಡಿಪಿ ಅನುದಾನ ಕುರಿತು ಮಾಹಿತಿ ಕೇಳಿದರೆ, ಇಡೀ ಇಲಾಖೆಯ ಮಾಹಿತಿ ಇಲ್ಲವೇ ಟಿಎಸ್‌ಪಿ, ಎಸ್‌ಸಿಪಿ ಯೋಜನೆಯ ಮಾಹಿತಿ ನೀಡಿದರು. ಅಷ್ಟೇ ಅಲ್ಲ, ಕೆಲ ಇಲಾಖೆ ಅಧಿಕಾರಿಗಳು ಯೋಜನೆಯ ಕಟ್ಟುಪಾಡುಗಳನ್ನು ಮೀರಿ ಮನಬಂದ ಹಾಗೆ ಖರ್ಚು ಮಾಡಿದ್ದ ಲೆಕ್ಕ ಬಯಲಾಯ್ತು. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ ಚನ್ನಗಿರಿ, ಹರಪನಹಳ್ಳಿ ಅತ್ಯಂತ ಹಿಂದುಳಿದ, ಹೊನ್ನಾಳಿ, ಜಗಳೂರು ಅತೀ ಹಿಂದುಳಿದ ತಾಲ್ಲೂಕುಗಳಾಗಿ ಗುರುತಿಸಲ್ಪಟ್ಟಿವೆ.
ಇದಕ್ಕಾಗಿ ವಿವಿಧ ಇಲಾಖೆಗಳ ಮೂಲಕ ವಿಶೇಷ ಅನುದಾನ ನೀಡಿ, ಪ್ರದೇಶ, ಜನರ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಆದರೆ, ಸಭೆಯಲ್ಲಿ ಪಾಲ್ಗೊಂಡ ಈ ಕೆಲ ಅಧಿಕಾರಿಗಳಿಗೆ ಈ ಕುರಿತ ಕನಿಷ್ಠ ಮಾಹಿತಿ ಇದ್ದಂತೆ ಕಾಣಲಿಲ್ಲ. ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಜಂಟಿ ನಿರ್ದೇಶಕ ಸದಾಶಿವ ಯೋಜನೆ ಕುರಿತು ಯಾವುದೇ ಮಾಹಿತಿ ಇಲ್ಲದೇ ಇರುವುದನ್ನು ಬಹಿರಂಗವಾಗಿ ತೋರಿಸಿಕೊಂಡರು.
ಅವರು ಈ ಮೊದಲು ಜಿಪಂ ಅಧಿಕಾರಿಗಳಿಗೆ ಕೊಟ್ಟಿದ್ದ ಮಾಹಿತಿ, ಸಭೆಗೆ ಕೊಟ್ಟ ಮಾಹಿತಿ ಸಂಪೂರ್ಣ ಭಿನ್ನವಾಗಿತ್ತು. ಇದರಿಂದ ಕೊಂಚ ಕೋಪಗೊಂಡ ಸಿಇಒ ಎಸ್. ಅಶ್ವತಿ, ನೀವು ಸಭೆಗೆ ಕೊಡುತ್ತಿರುವ ಮಾಹಿತಿಯೇ ಬೇರೆ ಇದೆ. ವಾಸ್ತವದ ಮಾಹಿತಿಯೇ ಬೇರೆ ಇದೆ. ಇದೇನಿದು? ಎಂದು ತರಾಟೆಗೆ ತೆಗೆದುಕೊಂಡರು. ಇದೇ ರೀತಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ಇಲಾಖೆಯ ವರದಿ ಓದಲಾಗದೆ ಪರದಾಡಿದರು.
ಕೊನೆಗೆ ಅಶ್ವತಿ, ಇದೇನಿದು? ನೀವೇ ಕೊಟ್ಟ ವರದಿ ಓದಲು ನಿಮಗೆ ಬಾರದೇ ಇದ್ದರೆ ಹೇಗೆ? ನೀವೆಲ್ಲಾ ಸಭೆಗೆ ಬರುವಾಗ ಸಮರ್ಪಕ ಮಾಹಿತಿ ಇಟ್ಟುಕೊಂಡು ಬರಬೇಕು ಎಂಬುದು ಗೊತ್ತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಆಗ ಅಧಿಕಾರಿ, ನಾನು 2 ದಿನಗಳ ಹಿಂದಷ್ಟೇ ಅಧಿಕಾರ ಸೀಕರಿಸಿದ್ದೇನೆ. ಪೂರ್ಣ ಮಾಹಿತಿ ಇಲ್ಲ ಎಂದಾಗ, ಜಿಪಂ ಮುಖ್ಯ ಯೋಜನಾಧಿಕಾರಿ ಪಿ. ಬಸವನಗೌಡ, ಮಾಹಿತಿ ಇಲ್ಲ ಎಂದು ಹೇಳಬಾರದು.
ಮಾಹಿತಿ ಪಡೆದುಕೊಂಡು ಬರಬೇಕು. ನಿಮ್ಮ ನಿರ್ದೇಶಕರಿಗೆ ಮಾಹಿತಿ ಕೊಡಲು ಹೇಳಿ ಎಂದು ತಿಳಿಸಿದರು. ಬೆಸ್ಕಾಂನ ಪ್ರಗತಿ ಪರಿಶೀಲನೆ ವೇಳೆ ಸಹ ಇಂತಹುದ್ದೇ ಸನ್ನಿವೇಶ ನಡೆಯಿತು. ಸಹಾಯಕ ಕಾರ್ಯಪಾಲಕ ಅಭಿಯಂತರ ಸುಭಾಷ್ ಚಂದ್ರ ಇಲಾಖೆಯ ಪ್ರಗತಿ ಕುರಿತು ತಿಳಿಸುವಾಗ, ನಾವು ಅನುದಾನವನ್ನು ಎಲ್ಲಾ ತಾಲೂಕುಗಳಿಗೆ ಬಳಸಿಕೊಂಡಿದ್ದೇವೆ. ಎಲ್ಲಿ ಅಗ್ಯವಿದೆಯೋ ಅಲ್ಲಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರು.
ಮಧ್ಯ ಪ್ರವೇಶಿಸಿದ ಬಸವನಗೌಡ, ನೀವು ಆ ರೀತಿ ಎಲ್ಲಾ ತಾಲೂಕಿಗೆ ಈ ಅನುದಾನ ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಕೇವಲ ವರದಿಯಲ್ಲಿ ಹೆಸರಿಸಲಾಗಿರುವ ತಾಲೂಕುಗಳಲ್ಲಿ ಮಾತ್ರ ಬಳಕೆಮಾಡಿಕೊಳ್ಳಬೇಕು ಎಂದರು. ಸಿ. ಅಶ್ವತಿ, ನೀವು ಸರ್ಕಾರಕ್ಕೆ ದುಡ್ಡು ಖರ್ಚಾಗಿದೆ ಎಂದು ವರದಿ ನೀಡಿದೀರಿ. ಇಲ್ಲಿ ನೋಡಿದರೆ ಹಣ ಖರ್ಚು ಆಗಿಲ್ಲ. ಏನಿದು? ಎಂದು ತರಾಟೆಗೆ ತೆಗೆದುಕೊಂಡು. ಸುಭಾಷ್‌ಚಂದ್ರ, ಸರಿಪಡಿಸುವುದಾಗಿ ಹೇಳಿದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುಲಾಂಬ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್.ಎಂ. ಪ್ರೇಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೇದಮೂರ್ತಿ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.