ಜಾತ್ಯತೀತ ಸಮಾಜ ನಿರ್ಮಾಣ ಅಗತ್ಯ
Team Udayavani, Jan 4, 2017, 12:41 PM IST
ದಾವಣಗೆರೆ: ಪ್ರತಿಯೊಬ್ಬರೂ ಭಾರತವೇ ಧರ್ಮ ಮತ್ತು ಸಂವಿಧಾನವೇ ಶ್ರೇಷ್ಠ ಗ್ರಂಥ ಎಂದರಿತು ಸಮಾನತೆ, ವಿಶ್ವ ಭಾತೃತ್ವ, ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಶ್ರೀ ಶಿವಯೋಗಿ ಮಂದಿರದಲ್ಲಿ ಶರಣ ಸಂಗಮ ಮತ್ತು ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲ ಧರ್ಮಯರಿಗೆ ಭಾರತವೇ ಶ್ರೇಷ್ಠ ಧರ್ಮ. ಸಂವಿಧಾನವೇ ಶ್ರೇಷ್ಠಾತಿಶ್ರೇಷ್ಠ ಗ್ರಂಥ ಎಂದರು. ಈಗ ಎಲ್ಲರೂ ನಮ್ಮ ಧರ್ಮವೇ ಶ್ರೇಷ್ಠ ಎಂದು ಸಂವಿಧಾನವನ್ನೇ ಮರೆಯುತ್ತಿದ್ದೇವೆ.
ಅದರ ಆಶಯಗಳನ್ನು ಪಾಲನೆ ಮಾಡುತ್ತಿಲ್ಲ. ನಮ್ಮೆಲ್ಲರ ಧರ್ಮಕ್ಕಿಂತಲೂ ಸಂವಿಧಾನವೇ ಶ್ರೇಷ್ಠ ಎಂದು ತಿಳಿದು ಅಲ್ಲಿರುವ ಅಶಗಳನ್ನು ಪಾಲಿಸುವ ಮೂಲಕ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು. ಜಗತ್ತಿನ ಮೊಟ್ಟ ಮೊದಲ ಪ್ರಜಾಪ್ರಭುತ್ವದ ಪಿತಾಮಹಾರಾದ ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಈಗಿನ ಸಂಸತ್‌ನ ಪರಿಕಲ್ಪನೆ ನೀಡಿದ್ದಾರೆ.
ಬಸವಾದಿ ಶರಣರ ವಚನಗಳಲ್ಲಿ ಸಂವಿಧಾನದಲ್ಲಿ ಅಡಕವಾಗಿರುವ ಎಲ್ಲ ಆಶಯಗಳನ್ನು ಕಾಣಬಹುದು. ಬಸವಕಲ್ಯಾಣದಲ್ಲಿ ಜಗತ್ತಿನ ಪ್ರಪ್ರಥಮ ಸಂಸತ್ತು ಅನುಭವ ಮಂಟಪ ಇತ್ತು. ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹತ್ತರ ಕಾಣಿಕೆ ನೀಡಿರುವ ಬಸವ ಕಲ್ಯಾಣ, ಬಸವಣ್ಣನವರು ನಮ್ಮ ಕರ್ನಾಟಕದವರು ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಬಸವಾದಿ ಶರಣರ ವಚನದಲ್ಲಿ ಸಮಾನತೆ, ವಿಶ್ವಭಾತೃತ್ವ, ಸರ್ವ ಧರ್ಮ ಪೀÅತಿ, ಸ್ವಾತಂತ್ರÂ ಎಲ್ಲವೂ ಇವೆ. ಬಸವಣ್ಣನವರ ಸಪ್ತಶೀಲಗಳು ಸಂವಿಧಾನದಲ್ಲಿವೆ. ಆದರೂ, ಇಂದಿನ ವಾತಾವರಣದಲ್ಲಿ ಸಮಾನತೆ ಕಂಡು ಬರುತ್ತಿಲ್ಲ. ಲಿಂಗ, ಜಾತಿ ತಾರತಮ್ಯ, ಒಳ ಪಂಗಡ ಭಾವನೆ ದೂರವಾಗಬೇಕು. ಎಲ್ಲರೂ ಸಂವಿಧಾನವೇ ದೊಡ್ಡದು ಎಂದರಿತು ಬಾಳಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಧರ್ಮ ಸಂಸತ್ತು ಉದ್ಘಾಟನೆಗೊಂಡಿದ್ದೇ ಅಂಬೇಡ್ಕರ್‌ರವರ ಸಮಾಧಿ ಇರುವ ಮುಂಬೈನ ದಾದರ್‌ನಲ್ಲಿ ಎಂಬುದು ಸಂತಸದ ವಿಚಾರ. ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕ ಪ್ರಜ್ಞೆ ಜಾಗೃತಿ, ಸಮ ಸಮಾಜ ನಿರ್ಮಾಣದ ಮಹತ್ತರ ಉದ್ದೇಶದಿಂದ ಧರ್ಮ ಸಂಸತ್ತು ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ಭಾರತೀಯ ಸಂವಿಧಾನ ಮತ್ತು ಧರ್ಮ ನಿರಪೇಕ್ಷೆ… ವಿಷಯ ಕುರಿತು ಉಪನ್ಯಾಸ ನೀಡಿದ ವಕೀಲ ಎಲ್. ಎಚ್. ಅರುಣ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ರವರು ವಿಶ್ವದ ಅತ್ಯುತ್ತಮ ಸಂದೇಶ ಅಭ್ಯಾಸ ಮಾಡಿ ಈ ದೇಶದ ನೆಲಕ್ಕೆ ಹೊಂದಿಕೆಯಾಗುವಂಥಹ ಸಂವಿಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಆಂಗ್ಲ ಭಾಷೆಯಲ್ಲಿ 1,17,369 ಪುಟ ಹೊಂದಿದೆ. 100ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಕಂಡಿದೆ. ಭಾರತದ ಅಖಂಡತೆ ಮತ್ತು ಸಹಬಾಳ್ವೆಯನ್ನು ಎತ್ತಿ ಹಿಡಿದಿರುವಂಥಹ ಮಹಾನ್ ಧರ್ಮಗ್ರಂಥ ಎಂದರೆ ಸಂವಿಧಾನ ಎಂದು ತಿಳಿಸಿದರು. ಸಂವಿಧಾನ ಪ್ರಭುತ್ವ ಮತ್ತು ಧರ್ಮದ ನಡುವೆ ಸಣ್ಣದಾದ ಲಕ್ಷ್ಮಣರೇಖೆ ಹಾಕಿದೆ.
ಆದರೂ, ಆ ಲಕ್ಷ್ಮಣರೇಖೆ ದಾಟಿ ಪ್ರಭುತ್ವ ಧರ್ಮದ ಅಂಗಳದಲ್ಲಿ, ಧರ್ಮದ ಅಂಗಳದಲ್ಲಿ ಪ್ರಭುತ್ವ ಇರುವುದು ಕಂಡು ಬರುತ್ತದೆ. ಸಂವಿಧಾನ ಆಶಯದ ವಿರುದ್ಧ ನಡೆ ಸಾಮಾನ್ಯ ಎನ್ನುವಂತಾಗಿದೆ. ಧರ್ಮ, ಭಾಷೆ, ವರ್ಗ, ಜಾತಿಯ ಹೆಸರಲ್ಲಿ ಆಕ್ರಮಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಧಾರವಾಡದ ನಗೆ ಭಾಷಣಕಾರ ಬಿ.ಜಿ. ಪಾಟೀಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.