ಸ್ವಸಹಾಯ-ರೈತ ಸಂಘದಿಂದ ಪ್ರತಿಭಟನೆ
Team Udayavani, Jan 3, 2017, 12:07 PM IST
ಜಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳು ಸಾಲ ವಸೂಲಾತಿ ಮಾಡುವ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಧಿಕ್ಕಾರ ಘೋಷಣೆ ಕೂಗಿದರು. ನಂತರ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಸಾಲ ಮರು ಪಾವತಿಸದಿದ್ದರೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಅವಮಾನ ಮಾಡುವುದು, ಪದೇ ಪದೇ ಕಿರುಕುಳ ನೀಡುವುದು. ಸಾಲ ಪಡೆಯುವಾಗ ಜಾಮೀನಿಗೆ ಸಹಿ ಮಾಡಿದವರಿಂದ ಒತ್ತಡ ಹಾಕುವುದಲ್ಲದೇ ಅವರಿಂದ ಜಗಳಕ್ಕೆ ಪ್ರಚೋದನೆ ನೀಡುವುದು,
ದೇವರ ಹೆಸರಿನಲ್ಲಿ ಹೆದರಿಸುತ್ತಾರೆಂದು ಪ್ರತಿಭಟನಾ ನಿರತ ಮಹಿಳೆಯರು ಆರೋಪಿಸಿದರು. ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಜಗಳೂರು ತಾಲೂಕು ಸತತ ಬರಗಾಲಕ್ಕೆ ತುತ್ತಾಗುತ್ತಿದೆ.
ಈ ನಡುವೆ ಅಣಬೆ ಕೊಡೆಗಳಂತೆ ತಲೆ ಎತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಸ್ವಸಹಾಯಗಳಿಗೆ ಸಾಲ ನೀಡಿ ಬೆಳೆ ಇಲ್ಲದ ಈ ಕಾಲದಲ್ಲಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸರ್ಕಾರ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಸಾಲ ಮರುಪಾವತಿ ಮಾಡಲು 10 ತಿಂಗಳ ಕಾಲಾವಕಾಶ ನೀಡಿಬೇಕೆಂದು ಒತ್ತಾಯಿಸಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳೂ ನಿಯಮ ಮೀರಿ ದೌರ್ಜನ್ಯದಿಂದ ಸಾಲ ವಸೂಲಾತಿ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ, ಚಿರಂಜೀವಿ, ನಾಗರತ್ನಮ್ಮ, ಮಾರನಾಯಕ, ಹನುಮಂತಪ್ಪ, ಲೋಕೇಶ್, ಪೆದ್ದಸೂರಯ್ಯ, ದಳವಾಯಿ ನಿಂಗಪ್ಪ, ಗುರುಸಿದ್ದಪ್ಪ, ಮಂಜುನಾಥ್, ಡಿ.ಟಿ.ಗೌರಮ್ಮ, ಇಂದ್ರಮ್ಮ, ಶಾಂತಮ್ಮ, ಪ್ರಿಯಾಂಕ, ಸುಜಾತ, ವಿಜಯಮ್ಮ, ತಿಪ್ಪಮ್ಮ, ಬಸಮ್ಮ, ಹನುಮಕ್ಕ, ಸೌಜನ್ಯ, ಚಂದ್ರಮ್ಮ, ಒಬಮ್ಮ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.