ಶರಣೆ ಅಕ್ಕಮಹಾದೇವಿ ಮನುಕುಲಕ್ಕೇ ಮಾದರಿ: ಸ್ವಾಮೀಜಿ
Team Udayavani, Mar 31, 2018, 4:32 PM IST
ದಾವಣಗೆರೆ: ವೈರಾಗ್ಯದ ಪ್ರತೀಕವಾಗಿರುವ ಮಹಾನ್ ಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಮಾದರಿ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಶುಕ್ರವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಅಕ್ಕಮಹಾದೇವಿ ಜಯಂತ್ಯುತ್ಸವ ಮತ್ತು ವಚನೋತ್ಸವದ ಮೊದಲ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಾರಮಾರ್ಥಿಕ ಜೀವನವೇ ನಿಜವಾದ ಸುಖ ಎಂದು ಅಕ್ಕಮಹಾದೇವಿ ಅರಸೊತ್ತಿಗೆಯನ್ನೇ ಕಿತ್ತೂಗೆದವರು. ಅವರು ತುಳಿದ ವೈರಾಗ್ಯದ ಹಾದಿ ಸರ್ವರಿಗೆ ಮಾದರಿ ಎಂದರು.
ಇಂದಿಗೂ ಅನೇಕರು ಸುಖ, ಸಂಪತ್ತನ್ನು ಅರಸುತ್ತಾ ಸಾಗುತ್ತಾರೆ. ಆದರೆ, ಅಕ್ಕಮಹಾದೇವಿ ನಿರಾಯಾಸವಾಗಿ ಬಂದೊದಗಿದ ಅರಸೊತ್ತಿಗೆಯನ್ನು ಧಿಕ್ಕರಿಸಿ ಪಾರಮಾರ್ಥಿಕ ಸುಖ ಅರಸುತ್ತಾ ಸಾಗಿದವರು. ಅಂತಹ ಅಕ್ಕನ ಜೀವನ ನಿಜವಾಗಿಯೂ ಪ್ರತಿಯೊಬ್ಬರಿಗೆ ಪ್ರೇರಣಾದಾಯಕ ಎಂದು ತಿಳಿಸಿದರು.
ಪ್ರತಿಯೊಬ್ಬರ ಜೀವನದಲ್ಲಿ ಸುಖ-ದುಃಖ ಇರುತ್ತವೆ. ದುಃಖವನ್ನು ಸಮರ್ಥವಾಗಿ ಎದುರಿಸುವಂತದ್ದನ್ನು ನಾವೆಲ್ಲರೂ ಅಕ್ಕಮಹಾದೇವಿಯಿಂದ ಕಲಿಯಬೇಕಿದೆ. ಮಹಾನ್ ಸಾಧನೆಯ ಮಾಡಿರುವ ಅಕ್ಕಮಹಾದೇವಿ ಜೀವನ ಮಾದರಿ ಎಂದು ಬಣ್ಣಿಸಿದರು.
ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಗುಡಿ-ಗುಂಡಾಂತರ, ಜ್ಯೋತಿಷಿ, ಭವಿಷ್ಯ ಕೇಳುವುದು ಎಂದು ಸುತ್ತಾಡುವುದ ಬಿಟ್ಟು ಅಕ್ಕಮಹಾದೇವಿ ಜೀವನ ಚರಿತೆ, ವಚನಗಳ ಓದಿದರೆ ಸಾಕು. ಸಂಕಷ್ಟಗಳ ಸಮರ್ಥವಾಗಿ ಎದುರಿಸುವ ಮನೋಬಲ ಸಿಕ್ಕುತ್ತದೆ ಎಂದು ಕಿವಿಮಾತು ಹೇಳಿದರು.
ಶ್ರೀ ಅಕ್ಕ ಪ್ರಶಸ್ತಿ ಸ್ವೀಕರಿಸಿದ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ ಉಪಾಧ್ಯಕ್ಷೆ ಸರೋಜ ಮಹಾಲಿಂಗಪ್ಪ ಮುಂಡಾಸ ಮಾತನಾಡಿ, ಪ್ರಕೃತಿಯೇ ಮಹಿಳೆಯರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಶಕ್ತಿ ನೀಡಿದೆ. ಆ ಮನೋಬಲದಿಂದಲೇ ನೇತ್ರದಾನ ಪ್ರೇರಣಾ ಸಮಿತಿ ಉಪಾಧ್ಯಕ್ಷೆಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರು ನೇತ್ರದಾನದ ಮೂಲಕ ಇತರರ ಬಾಳಲ್ಲಿ ಬೆಳಕಾಗಬೇಕು ಎಂದು ಮನವಿ ಮಾಡಿದರು.
ಶ್ರೀ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ನೀಲಗುಂದ ಜಯಮ್ಮ, ಉಮಾ ವೀರಭದ್ರಪ್ಪ ಇತರರು ಇದ್ದರು. ದೊಗ್ಗಳ್ಳಿ ಸುವರ್ಣ ಸ್ವಾಗತಿಸಿದರು. ಪುಟ್ಟಮ್ಮ ಮಹಾರುದ್ರಯ್ಯ ನಿರೂಪಿಸಿದರು. ಐನಳ್ಳಿ ಪುಷ್ಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.