ಭರ್ಜರಿ ಕುರಿ ವ್ಯಾಪಾರ
Team Udayavani, Jan 15, 2019, 8:14 AM IST
ಹೊನ್ನಾಳಿ: ಪಟ್ಟಣದ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಸಾಲು ಸಾಲಾಗಿ ಗ್ರಾಮ ದೇವತೆಗಳ ಹಬ್ಬ ಮತ್ತು ಜಾತ್ರೆಗಳಿರುವುದರಿಂದ ಪಟ್ಟಣದಲ್ಲಿ ರವಿವಾರ ವಿಶೇಷ ಕುರಿ ಸಂತೆ ನಡೆಯಿತು. ಸಾಮಾನ್ಯ ದಿನಗಳಲ್ಲಿ ಕೇವಲ ಪ್ರತಿ ಬುಧವಾರ ಮಾತ್ರ ಕುರಿ ಸಂತೆ ಸೇರುತ್ತದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ನಡೆವ ಸಂತೆಯಲ್ಲಿ ಕುರಿ ಸಾಕಾಣಿಕೆ ಮಾಡುವ ಸುತ್ತಮುತ್ತಲ ಗ್ರಾಮಗಳ ರೈತರು ಸಾವಿರಾರು ಕುರಿಗಳೊಂದಿಗೆ ಆಗಮಿಸಿ ಭರ್ಜರಿ ವಹಿವಾಟು ನಡೆಸಿದರು. ಇದೇ ತಿಂಗಳ 21 ಮತ್ತು 22ರಂದು ಪಟ್ಟಣದ ಗ್ರಾಮ ದೇವತೆ ದುರ್ಗಾಂಬಿಕೆ ಜಾತ್ರೆ ನಡೆಯಲಿರುವುದರಿಂದ ಕುರಿ ವ್ಯಾಪಾರಕ್ಕೆ ಮತ್ತಷ್ಟು ಮೆರಗು ಬಂದಿತ್ತು. ಗಾತ್ರ ಮತ್ತು ವಯಸ್ಸಿಗನುಗುಣವಾಗಿ ಕುರಿಗಳು 6 ಸಾವಿರದಿಮದ 20 ಸಾವಿರ ರೂ. ವರೆಗೆ ಮಾರಾಟವಾದವು.
ಪಟ್ಟಣ ಪಂಚಾಯಿತಿ ಸದಸ್ಯ ಹೊಸಕೇರಿ ಸುರೇಶ್ ಈ ಕುರಿತು ಮಾತನಾಡಿ, ಹೊನ್ನಾಳಿ ತಾಲೂಕು ಕೇಂದ್ರಕ್ಕೆ ಸುತ್ತಮುತ್ತಲ ಪ್ರದೇಶಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಈ ಭಾಗದಲ್ಲಿ ಕುರಿ, ಮೇಕೆ, ಅಡುಗಳ ಸಾಕಾಣಿಕೆ ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ದೂರದ ಶಿವಮೊಗ್ಗ, ಭದ್ರಾವತಿ, ಸಾಗರ, ಹಿರೇಕೆರೂರು, ಹರಿಹರ, ದಾವಣಗೆರೆ ಆಯನೂರು, ತಿಮ್ಮಿನಕಟ್ಟ, ಸೇರಿದಂತೆ ಹತ್ತಾರು ಪ್ರದೇಶಗಳಿಂದ ಕುರಿ ಖರೀದಿಗೆ ಜನ ಇಲ್ಲಿಗೆ ಅಗಮಿಸುತ್ತಾರೆ. ಇಲ್ಲಿನ ಕುರಿ ಮಾರುಕಟ್ಟೆಗೆ ವ್ಯವಸ್ಥಿತ ರೂಪ ನೀಡಬೇಕಾದ ಅಗತ್ಯವಿದೆ. ಕುರಿಗಳ ಬೇಡಿಕೆ ಸರಿದೂಗಿಸಲು ಬುಧವಾರದೊಂದಿಗೆ ಪ್ರತಿ ಭಾನುವಾರ ಕೂಡ ಕುರಿ ಸಂತೆ ನಡೆಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.