![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 18, 2022, 3:00 PM IST
ಶಿವಮೊಗ್ಗ: ಹಿಜಾಬ್ ವಿವಾದ ಮುಂದುವರಿದಿದ್ದು, ಗುರುವಾರಸಹ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆಬಂದು ಅವಕಾಶ ನಿರಾಕರಿಸಿದ್ದಕ್ಕೆ ವಾಪಸ್ ತೆರಳಿದ್ದಾರೆ.ಈ ಮಧ್ಯೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲುಅವಕಾಶ ನೀಡಬೇಕು. ಶಾಲಾ-ಕಾಲೇಜ್ ಆವರಣದಲ್ಲಿ ಮಾಧ್ಯಮದವರು ಮತ್ತು ಸಮವಸ್ತ್ರಧಾರಿ ಪೊಲೀಸರಪ್ರವೇಶಕ್ಕೆ ನಿಷೇ ಧ ಹೇರಬೇಕು ಎಂದು ಒತ್ತಾಯಿಸಿ ನಿಷೇಧಾಜ್ಞೆಮಧ್ಯೆಯೂ ವಿವಿಧ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರುಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ರಾಜ್ಯ ಉತ್ಛನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಫೆ.17ರಂದುಉತ್ಛ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ಕಾಲೇಜುಅಭಿವೃದ್ಧಿ ಸಮಿತಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರಸೀಮಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ.
ಉನ್ನತ ಶಿಕ್ಷಣಸಚಿವರು ಹೇಳಿರುವ ಪ್ರಕಾರ ಇದು ಪದವಿ ಕಾಲೇಜುಗಳಿಗೆಅನ್ವಯವಾಗುವುದಿಲ್ಲ. ಆದ್ದರಿಂದ ನಮಗೆ ಶಿವಮೊಗ್ಗದಪದವಿ ಕಾಲೇಜುಗಳಲ್ಲಿ ಕೋರ್ಟ್ ಆದೇಶ ಬರುವವರೆಗೆತರಗತಿಯಲ್ಲಿ ಹಿಜಾಬ್ ಹಾಕಿಕೊಂಡು ಕೂರಲು ಅನುವುಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.ಇದಕ್ಕೂ ಮೊದಲು ನಗರದ ಸಹ್ಯಾದ್ರಿ ವಾಣಿಜ್ಯ ಕಾಲೇಜ್,ಡಿವಿಎಸ್ ಕಾಲೇಜ್ ಸೇರಿದಂತೆ ವಿವಿಧ ಕಾಲೇಜುಗಳವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲುಮುಂದಾದರು. ಹಿಜಾಬ್ ತೆಗೆಯುವುದಿಲ್ಲ ಎಂದುವಿದ್ಯಾರ್ಥಿನಿಯರು ಪಟ್ಟು ಹಿಡಿದರು.
ಹಿರಿಯ ಪೊಲೀಸ್‌ಅ ಧಿಕಾರಿಗಳು ಮತ್ತು ಕಾಲೇಜ್ ಆಡಳಿತ ಮಂಡಳಿ ಸದಸ್ಯರು,ಪ್ರಾಂಶುಪಾಲರು ಎಷ್ಟೇ ಮನವಿ ಮಾಡಿದರೂ ಹಿಜಾಬ್‌ತೆಗೆದು ಬರಲು ವಿದ್ಯಾರ್ಥಿನಿಯರು ಒಪ್ಪಿಲ್ಲ. ಈ ಸಂದರ್ಭದಲ್ಲಿವಿದ್ಯಾರ್ಥಿನಿಯರ ಪೋಷಕರಿಗೆ ಮತ್ತು ಕಾಲೇಜ್ ಆಡಳಿತಮಂಡಳಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಅಂತಿಮವಾಗಿ ಕೋರ್ಟ್ ಆದೇಶದಂತೆ ತರಗತಿಯೊಳಗೆಹಿಜಾಬ್‌ಗ ಅವಕಾಶ ಇಲ್ಲವೆಂದು ಹೇಳಿದಾಗ ವಿದ್ಯಾರ್ಥಿನಿಯರುತರಗತಿ ಬಹಿಷ್ಕರಿಸಿ ಕಾಲೇಜ್ ಆವರಣದಿಂದ ಹೊರ ನಡೆದರು.ಕೆಲ ವಿದ್ಯಾರ್ಥಿನಿಯರು ಪೋಷಕರೊಂದಿಗೆ ತೆರಳಿದರೆ,ಮತ್ತೆ ಕೆಲವರು ಬೇರೆ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆಒಟ್ಟಾಗಿ ಸೇರಿ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು, ಸೆಕ್ಷನ್ 144 ಜಾರಿಯಲ್ಲಿ ಇರುವುದರಿಂದ ಎಲ್ಲರೂಒಟ್ಟಾಗಿ ಸೇರುವಂತಿಲ್ಲ. ನಿಮ್ಮ ಮನವಿಯನ್ನು ಸರ್ಕಾರದಗಮನಕ್ಕೆ ತರುವುದಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.