ಷಟಲ್ ಬ್ಯಾಡ್ಮಿಂಟನ್: ಕೇರಳ ಜೋಡಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ
Team Udayavani, Feb 24, 2017, 12:25 PM IST
ದಾವಣಗೆರೆ: ಅಖೀಲ ಭಾರತ ಹಿರಿಯರ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ್‍ಯಾಂಕಿಂಗ್‌ನ ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಮಹಾರಾಷ್ಟ್ರದ ಅಕ್ಷಯ್ ರಾವತ್, ರೈಲ್ವೇಸ್‌ನ ಕಬೀರ್ ಖಂಜರ್‌ಕರ್ ಪ್ರಶಸ್ತಿ ಪಡೆದಿದ್ದಾರೆ.
ದಾವಣಗೆರೆಯ ನೇತಾಜಿ ಸುಭಾಶ್ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಅಕ್ಷಯ್ ರಾವತ್ ಮತ್ತು ಕಬೀರ್ ಖಂಜರ್‌ಕರ್ ಜೋಡಿ ತಮಿಳುನಾಡಿನ ಆರ್. ಮೊಹಮ್ಮದ್ ರೆಹಾನ್ ಹಾಗೂ ವಿ. ವೆಲವನ್ ಜೋಡಿ ವಿರುದ್ಧ 21-10, 21-10 ರಲ್ಲಿ ಜಯಗಳಿಸಿ, ಪ್ರಶಸ್ತಿ ಗಳಿಸಿತು.
ಮಹಿಳಾ ವಿಭಾಗದ ಪ್ರಶಸ್ತಿ ಕೇರಳದ ಆಗ್ನ ಆ್ಯಂಟೋ, ಸ್ನೇಹಾ ಶಾಂತಿಲಾಲ್ ಪಾಲಾಯಿತು. ಪ್ರಶಸ್ತಿ ಸುತ್ತಿನಲ್ಲಿ ಆಗ್ನ ಆ್ಯಂಟೋ ಮತ್ತು ಸ್ನೇಹಾ ಶಾಂತಿಲಾಲ್ ಜೋಡಿ ಮಹಾರಾಷ್ಟ್ರದ ಸಂಯೋಗಿತಾ ಘೋರ್ಪಡೆ ಹಾಗೂ ರೈಲ್ವೇಸ್‌ನ ಧನ್ಯಾ ನಾಯರ್ ಜೋಡಿ ವಿರುದ್ಧ 24-22, 21-19 ರಲ್ಲಿ ಗೆಲುವು ಸಾಧಿಸಿದರು. ಪ್ರಥಮ ಸೆಟ್ ತೀವ್ರ ಹಣಾಹಣಿಯಿಂದ ಕೂಡಿತ್ತು. ಪ್ರತಿ ಪಾಯಿಂಟ್‌ಗೆ ಭಾರೀ ಪೈಪೋಟಿ ನಡೆಯಿತು.
ಎರಡನೇ ಸುತ್ತಿನಲ್ಲಿ ಆಗ್ನ ಆ್ಯಂಟೋ, ಸ್ನೇಹಾ ಶಾಂತಿಲಾಲ್ ನಿರಾಯಾಸ ಜಯ ಸಾಧಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಉತ್ತಮ ಆಟವಾಡಿದ ದೆಹಲಿಯ ಉತ್ಕರ್ಷ್ ಅರೋರಾ ಮತ್ತು ಮಹಾರಾಷ್ಟ್ರದ ಕರೀಷ್ಮಾ ವಾಡಕರ್ ಜೋಡಿಯು ದೆಹಲಿಯ ವಿಶಾಂತ್ ದುವಾ, ಅನಾಮಿಕ ಕಶ್ಯಪ್ ವಿರುದ್ಧ 21-7, 21-17 ರಲ್ಲಿ ಗೆಲುವಿನ ನಗೆ ಬೀರಿ, ಪ್ರಶಸ್ತಿ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.