ಸರ್ ಎಂ.ವಿಶ್ವೇಶ್ವರಯ್ಯ ಮೇಧಾವಿ ವಿಜ್ಞಾನಿ
Team Udayavani, Sep 16, 2017, 10:19 AM IST
ಹೊನ್ನಾಳಿ: ಸರ್ ಎಂ.ವಿಶ್ವೇಶ್ವರಯ್ಯ ಒಬ್ಬಮೇಧಾವಿ ವಿಜ್ಞಾನಿಯಾಗಿದ್ದರು ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರಾಷ್ಟ್ರೀಯ ಭಾವೈಕ್ಯತಾ ಸಮಿತಿ ಹಾಗೂ ತಾಲೂಕು ಗುತ್ತಿಗೆದಾರರ ಸಂಘ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಇಲ್ಲಿನ ತುಂಗಭದ್ರಾ ಸೇತುವೆ ಬಳಿ ಹಮ್ಮಿಕೊಂಡಿದ್ದ ಇಂಜಿನಿಯರ್ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ ಎಂ.ವಿ ಅವರ ಕೊಡುಗೆ ಕೇವಲ ಕರ್ನಾಟಕಕ್ಕಲ್ಲದೆ ದೇಶದುದ್ದಗಲಕ್ಕೂ ಇದ್ದು, ಅವರೊಬ್ಬ ಸಾಧನೆಯ ಮೇರು ಪರ್ವತವಾಗಿ ಕಾರ್ಯ ನಿರ್ವಹಿಸಿ ತಾಂತ್ರಿಕತೆಯ ಅನರ್ಘ್ಯ ರತ್ನ ಎನಿಸಿದ್ದರು ಎಂದು ಹೇಳಿದರು.
ಹೊನ್ನಾಳಿ ತುಂಗಭದ್ರಾ ಸೇತುವೆ ಸರ್. ಎಂ.ವಿಶ್ವೇಶ್ವರಯ್ಯ ಅವರ ಮೇಲುಸ್ತುವಾರಿಯಲ್ಲಿ ರಚಿಸಲ್ಪಟ್ಟು ಇಂದಿಗೆ 95 ವರ್ಷಗಳು ಗತಿಸಿವೆ. ಸೇತುವೆ ಇಂದಿಗೂ ಗಟ್ಟಿಯಾಗಿದೆ. ಅಂದಿನ ಜನ ಯಾವುದೇ ಸ್ವಾರ್ಥವಿಲ್ಲದೇ ಒಳಿತನ್ನು ಮಾಡಿದ್ದಾರೆ. ಆದರೆ ಅದೇ ಸೇತುವೆಯ ಎರಡು ಬದಿಯ ತಡೆ ಗೋಡೆಯ ಮೇಲಿನ ಹಾಸು ಕಲ್ಲುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಮಾತ್ರ ವಿಷಾದನೀಯ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವಿಶ್ವೇಶ್ವರಯ್ಯನವರು ದೇಶ ಕಂಡ ಅಪರೂಪದ ಇಂಜಿನಿಯರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಮಹಾನ್ ಚೇತನ. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ನಡೆದ ಎಲ್ಲಾ ಸೇತುವೆ, ಆಣೆಕಟ್ಟುಗಳು, ದೊಡ್ಡ ಕಟ್ಟಡಗಳು ಇಂದಿಗೂ ಸುಭದ್ರವಾಗಿವೆ ಎಂದರು.
ಉಪನ್ಯಾಸಕ ಡಿ.ಸಿ.ಪಾಟೀಲ್ ಉಪನ್ಯಾಸ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರಗೌಡ, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮನಾಗಪ್ಪ, ಪಪಂ ಸದಸ್ಯರಾದ ಹೊಸಕೇರಿ ಸುರೇಶ್, ತಾಪಂ ಇಒ ಡಾ| ಹುಲಿಕೇರಿ ಶಿವಪ್ಪ, ಯುವಶಕ್ತಿ ಒಕ್ಕೂಟ ಅಧ್ಯಕ್ಷ ಕತ್ತಿಗೆ ನಾಗರಾಜ್ ಮಾತನಾಡಿದರು.
ಜಿಪಂ ಸದಸ್ಯ ಎಂ.ಆರ್. ಮಹೇಶ್, ಸರಳಿನಮನೆ ಮಂಜುನಾಥ್, ವಿಜೇಂದ್ರಪ್ಪ, ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಎಚ್.ಪಿ. ರಾಮಮೂರ್ತಿ, ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ, ಇಂಜಿನಯರ್‌ಗಳು, ಗುತ್ತಿಗೆದಾರರು ಇದ್ದರು. ಗುತ್ತಿಗೆದಾರ ನರಸಿಂಹಮೂರ್ತಿ ನಿರೂಪಿಸಿದರು. ಇಂಜಿನಿಯರ್ ಜಿ.ಪಿ.ರಾಜು, ಗುತ್ತಿಗೆದಾರರಾದ ಎಂ.ಉಮರ್, ಚಂದ್ರಪ್ಪ, ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.