ಶಿವಸಿಂಪಿ ಸಮಾಜದ ಹಾಸ್ಟೆಲ್‌, ಸಮುದಾಯ ಭವನಕ್ಕೆ ಅನುದಾನ


Team Udayavani, Jul 30, 2018, 3:23 PM IST

dvg-2.jpg

ದಾವಣಗೆರೆ: ಶಿವಸಿಂಪಿ ಸಮಾಜದ ಹಾಸ್ಟೆಲ್‌, ಸಮುದಾಯ ಭವನಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಭರವಸೆ ನೀಡಿದ್ದಾರೆ. ಭಾನುವಾರ ಶಿವಯೋಗಿ ಮಂದಿರದಲ್ಲಿ ದಾವಣಗೆರೆ ಜಿಲ್ಲಾ ಶಿವಸಿಂಪಿ ಸಮಾವೇಶ, ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಏನನ್ನಾದರೂ ಸಾಧಿಸಲು ಸಾಧ್ಯ. ಶಿವಸಿಂಪಿ ಸಮಾಜದವರು ಹಾಸ್ಟೆಲ್‌, ಸಮುದಾಯ ಭವನ ಮಾಡಿದರೆ ಅಗತ್ಯ ಅನುದಾನ ನೀಡುವುದಾಗಿ ಹೇಳಿದರು.

ಸಾಕ್ಷಾತ್‌ ಶಿವನಿಗೇ ಬಟ್ಟೆ ಹೊಲಿದು ಕೊಟ್ಟಿರುವ ಇತಿಹಾಸ ಹೊಂದಿರುವ ಶಿವಸಿಂಪಿ ಸಮಾಜ ಬಾಂಧವರು ಹಿಂದಿನಿಂದಲೂ ಬಟ್ಟೆ ಹೊಲೆಯುವ ವೃತ್ತಿ ಮಾಡುತ್ತಿದ್ದವರು. ಅವರಿಂದಲೇ ಬಟ್ಟೆ ಹೊಲಿಸುವುದೂ ಇತ್ತು. ಕಾಲಾನುಕ್ರಮೇಣ ಬೇರೆ ಬೇರೆ ವೃತ್ತಿ, ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ಸಮಾಜದಲ್ಲಿ ಅಭಿವೃದ್ಧಿ ಆಗಬೇಕು ಎಂದಾದರೆ ಶಿಕ್ಷಣ ಅತಿ ಮುಖ್ಯ. ಹಾಗಾಗಿ ಶಿವಸಿಂಪಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. 

ದೇಶದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್‌ ಕಲಾಂರವರು ಬಡತನದಲ್ಲಿ ಬೆಳೆದವರು. ಬೀದಿ ದೀಪದ ಬೆಳಕಿನಲ್ಲಿ ಓದಿ, ಮುಂದೆ ದೊಡ್ಡ ವಿಜ್ಞಾನಿಯಾದವರು. ಪ್ರಧಾನಿ ನರೇಂದ್ರ ಮೋದಿಯವರು ಸಹ ಬಡ ಕುಟುಂಬದಿಂದ ಬಂದವರು. ಅವರ ತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೋದಿ ಅವರು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದವರು. ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಬಡತನ, ಸಿರಿತನ ಶಾಶ್ವತ ಅಲ್ಲ, ವಿದ್ಯೆಯೇ ಶಾಶ್ವತ ಎಂದು ತಿಳಿಸಿದರು. 

ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ. ಕೊಟ್ರೇಶ್‌, ಶಿವದಾಸಿಮಯ್ಯನವರೇ ಶಿವಸಿಂಪಿ ಸಮಾಜದ ಕುಲಗುರು ಎನ್ನುವುದಕ್ಕೆ ಸಾಕ್ಷ್ಯ ದೊರೆತಿದೆ. ಶಿವದಾಸಿಮಯ್ಯ ನಮ್ಮ ಸಮಾಜದ ಕುಲಗುರು ಎಂದು ಸಾಬೀತುಪಡಿಸುವ 16ನೇ ಶತಮಾನ ಹಸ್ತಪ್ರತಿ ದೊರೆತಿದೆ. ಆ ಪ್ರಕಾರ ಶಿವದಾಸಿಮಯ್ಯ ಬಸವಪೂರ್ವ ಅಂದರೆ 11ನೇ ಶತಮಾನದವರು. ವೇದಗಳಲ್ಲೂ ಚಿಂಪಿಗರು… ಎನ್ನುವ ಉಲ್ಲೇಖ ಇದೆ. ಇದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಚಾರ. ಈ ಎಲ್ಲ ವಿಚಾರಗಳ ಆಧಾರವಾಗಿಟ್ಟುಕೊಂಡು ಶಿವದಾಸಿಮಯ್ಯನವರ ಕುರಿತಾಗಿ ಹೊಸ ಚರಿತ್ರೆಯ ಕಟ್ಟಬೇಕಾಗಿದೆ ಎಂದರು.

ನಾಗರಿಕತೆಯ ಹುಟ್ಟಿನೊಂದಿಗೆ ಕಂಡು ಬರುವ ಶಿವಸಿಂಪಿ ಸಮಾಜದ ಕುಲಗುರು ಶಿವದಾಸಿಮಯ್ಯನವರ ಜಯಂತಿ ಸರ್ಕಾರ ಮಾಡಬೇಕು ಎಂದು ಭಿಕ್ಷೆ ಬೇಡುವ ಅಗತ್ಯ ಇಲ್ಲ. ಸರ್ಕಾರವೇ ಮುಂದಾಗಿ ಶಿವದಾಸಿಮಯ್ಯನವರ ಜಯಂತಿ ಉತ್ಸವವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಮಾಡಬೇಕು. ಶಿವಸಿಂಪಿ ಸಮಾಜವನ್ನು ಪ್ರವರ್ಗ2 ಎ ಅಡಿ ಸೇರಿಸುವ ಮೂಲಕ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಆಶಿಸಿದರು. 

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ, ಶಿವಸಿಂಪಿ ಸಮಾಜದ ಜಿಲ್ಲಾ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಮಲ್ಲಿಕಾರ್ಜುನ್‌ ಪ್ರಸ್ತಾವಿಕ ಮಾತುಗಳಾಡಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಯುವ ಮುಖಂಡ ಎಚ್‌.ಎಸ್‌. ನಾಗರಾಜ್‌, ಚಿಂದೋಡಿ ಚಂದ್ರಧರ್‌, ಜಗದೀಶ್‌ ಬಾವಿಕಟ್ಟಿ, ಎಸ್‌. ಷಣ್ಮುಖಪ್ಪ, ವಸಂತ್‌ಕುಮಾರ್‌, ಪಿ.ಎಸ್‌. ಲಕ್ಕುಂಡಿ, ಇ.ಸಿ.ಎಸ್‌. ಮೂರ್ತಿ, ಎಸ್‌.ಡಿ. ಕೊಟ್ರೇಶ್‌, ಮೂರಲ್‌ ರಾಜು, ಲೋಕೇಶ್‌, ಉಮಾಪತಿ ಇತರರು ಇದ್ದರು. ಸುಜಾತ
ಬೂಸ್ನೂರ್‌ ಪ್ರಾರ್ಥಿಸಿದರು. ಜ್ಞಾನೇಶ್ವರ್‌ ಜವಳಿ ನಿರೂಪಿಸಿದರು. ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ನಡೆಯಿತು.

ಟಾಪ್ ನ್ಯೂಸ್

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.