ಸಮಾಜವಾದಿ ಭಾರತ ಭಗತ್ ಸಿಂಗ್ ಕನಸು
Team Udayavani, Mar 24, 2021, 9:10 PM IST
ದಾವಣಗೆರೆ: ವಿದ್ಯಾರ್ಥಿ ಹಾಗೂ ಯುವ ಸಮೂಹ ಭಗತ್ ಸಿಂಗ್‌ರವರ ತತ್ವಾದರ್ಶವನ್ನು ಅಳವಡಿಸಿಕೊಳ್ಳ ಬೇಕು ಎಂದು ಅಖೀಲ ಭಾರತ ಯುವಜನ ಫೆಡರೇಷನ್(ಎಐವೈಎಫ್) ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಕರೆ ನೀಡಿದರು.
ಮಂಗಳವಾರ ರೈಲ್ವೆ ನಿಲ್ದಾಣ ಮುಂದಿನ ಭಗತ್ ಸಿಂಗ್ ಪ್ರತಿಮೆ ಬಳಿ ನಡೆದ ಬಲಿದಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಅವರ ಸಂಗಡಿಗರಾದ ಸುಖದೇವ್, ರಾಜಗುರು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿ 90 ವರ್ಷ ಕಳೆದಿದೆ. ಅವರೆಲ್ಲರೂ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಕೆಲವೇ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂತಹ ವಿರಳಾತಿ ವಿರಳರ ಸಾಲಿನಲ್ಲಿ, ಭಗತ್ ಸಿಂಗ್, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ. ತಲೆಮಾರಿನಿಂದ ತಲೆಮಾರಿಗೆ ಬೆಳಕು ನೀಡುತ್ತಾ, ನಿತ್ಯ ಸ್ಫೂರ್ತಿಯಾಗುತ್ತಾ ನಮ್ಮ ನಡುವೆಯೇ ಇದ್ದಾರೆ ಎಂದು ತಿಳಿಸಿದರು.
ಭಗತ್ ಸಿಂಗ್ ತಮ್ಮ 24ನೇ ವಯಸ್ಸಿನಲ್ಲೇ ನಗು ನಗುತ್ತಾ ನೇಣುಗಂಬಕ್ಕೇರಿದರು. ಅವರು ಓದಿದ್ದು, ರಚಿಸಿದ ಸಾಹಿತ್ಯ, ಬೌದ್ಧಿಕ ಮಟ್ಟ, ಆಲೋಚನಾ ಕ್ರಮ, ಪ್ರಕಟವಾಗದೇ ಉಳಿದ ಜೈಲಿನ ದಿನಚರಿಗಳನ್ನು ನೋಡಿದರೆ ಅಚ್ಚರಿ ಉಂಟಾಗುತ್ತದೆ. ಭಗತ್ ಸಿಂಗ್ ಗಲ್ಲಿಗೇರಿದ ಆರೇಳು ದಶಕಗಳ ನಂತರ ಅವರು ಬರೆದ ಲೇಖನಗಳು, ಪತ್ರಗಳು, ದಿನಚರಿಯ ಪುಟಗಳು ಒಂದೊಂದಾಗಿ ಹೊರ ಬರುತ್ತಿವೆ. ಭಗತ್ ಸಿಂಗ್ ಕನಸು ಕೇವಲ ಸ್ವತಂತ್ರ ಭಾರತ ಮಾತ್ರವಲ್ಲ, ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಹಂಬಲಿಸಿದ್ದರು ಎಂದು ಸ್ಮರಿಸಿದರು.
ಭಗತ್ ಸಿಂಗ್ ಕೋಮುವಾದ ಮತ್ತು ಜಾತಿವಾದಗಳನ್ನು ಕಟುವಾಗಿ ವಿರೋ ಧಿಸುತ್ತಿದ್ದರು. ಗಲ್ಲಿಗೇರಿದ ದಿನ ಅವರನ್ನು ಭೇಟಿಯಾಗಲು ಬಂದ ಜೈಲರ್ ಗಮನಕ್ಕೆ ಭಗತ್ ಸಿಂಗ್ ಲೆನಿನ್ ಪುಸ್ತಕ ಓದುತ್ತಿರುವುದು ಕಂಡು ಬಂತು. ಗಲ್ಲಿಗೇರಿಸುವ ಸಮಯವಾಯಿತು ಎಂದು ಹೇಳಿದಾಗ ಕೊಂಚ ತಡೆಯಿರಿ, ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಭೇಟಿಯಾಗುತ್ತಿದ್ದಾನೆ ಎಂದು ಲೆನಿನ್ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ನೇಣುಗಂಬದತ್ತ ಸಾಗಿದಂತಹ ಮಹಾನ್ ಕ್ರಾಂತಿಕಾರಿ ಭಗತ್ ಎಂದು ಬಣ್ಣಿಸಿದರು. ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಎ. ತಿಪ್ಪೇಶಿ, ಜೀವನ ನಿಟುವಳ್ಳಿ , ಫಜಲುಲ್ಲಾ, ಗದಿಗೇಶ್ ಪಾಳೇದ್, ಇರ್ಫಾನ್, ಎಚ್.ಎಂ. ಮಂಜುನಾಥ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.