ಧಾರ್ಮಿಕ ಶ್ರದ್ಧಾ ಕೇಂದ್ರಸಂಸ್ಕಾರದ ಮೂಲ: ರಾಮಪ್ಪ
Team Udayavani, Jul 7, 2020, 4:55 PM IST
ಹರಿಹರ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಂಸ್ಕಾರ ಬೆಳೆಸುವ ಮೂಲವಾಗಿವೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಬಜಾರ್ ಮೊಹಲ್ಲಾದ ಖದೀಮ್ ಮಸೀದಿಯಲ್ಲಿ ಸೋಮವಾರ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯ ಪ್ರಗತಿಯಲ್ಲಿರುವ 3 ಲಕ್ಷ ರೂ. ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಮಂದಿರ, ಮಸೀದಿ, ಚರ್ಚ್, ಗುರುದ್ವಾರದಂತಹ ಶ್ರದ್ಧಾ ಕೇಂದ್ರಗಳು ಮನುಷ್ಯನಲ್ಲಿ ಮನುಷ್ಯತ್ವ ತುಂಬುತ್ತಿವೆ. ಶಾಲೆ, ಕಾಲೇಜು, ಮನೆಯಲ್ಲಿ ಸಿಗದಂತಹ ಮೌಲ್ಯಗಳನ್ನು ಶ್ರದ್ಧಾ ಕೇಂದ್ರಗಳಲ್ಲಿಕಲಿಸಲಾಗುತ್ತದೆ. ವಿದ್ಯಾವಂತ, ಅವಿದ್ಯಾವಂತ, ಬಡವ, ಬಲ್ಲಿದ, ಮಕ್ಕಳು, ಪುರುಷ, ಮಹಿಳೆ ಎನ್ನದೆ ಎಲ್ಲರಲ್ಲೂ ಸಂಸ್ಕಾರ ಮೂಡಿಸುವಮಹತ್ವದ ಕಾರ್ಯವನ್ನು ಮಾಡುತ್ತಿವೆ. ಈ ಮಸೀದಿಯಲ್ಲಿ ಪ್ರಾರ್ಥನೆಗೆ ಮುನ್ನ ನೆರವೇರಿಸುವ ವಜೂ ಖಾನಾ (ಮುಖ, ಕೈಕಾಲು ತೊಳೆಯುವ ಸ್ಥಳ) ನಿರ್ಮಾಣಕ್ಕಾಗಿ ಆಡಳಿತ ಮಂಡಳಿಯವರು ಬಹು ಹಿಂದೆಯೇ ಬೇಡಿಕೆ ಇಟ್ಟಿದ್ದರು.ಆ ಕಾಮಗಾರಿಗಾಗಿ ನನ್ನ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ನಜೀರ್ ಹುಸೇನ್, ರೆಹಮಾನ್, ಸ್ವಾಲೇಹ, ಮಸೀದಿ ಸಮಿತಿ ಅಧ್ಯಕ್ಷ ಶೇಖ್ ಜಹೀರುದ್ದೀನ್, ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಪತ್ತಾರಿ, ಇರ್ಷಾದ್ ಅಹ್ಮದ್ ಖಾದ್ರಿ, ಅಬ್ದುಲ್ ಬಾರಿ, ಪಿ. ಜಿಯಾಉಲ್ಲಾ, ಅಬ್ದುಲ್ ರೆಹಮಾನ್ ಪಂಜಾಬಿ, ಕುಲುಮಿ ಬಾಬುಸಾಬ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.