ಜಿಪಂ ವಿಶೇಷ ಸಾಮಾನ್ಯ ಸಭೆ ಮತ್ತೆ ಮುಂದಕ್ಕೆ
Team Udayavani, Jun 3, 2017, 1:31 PM IST
ದಾವಣಗೆರೆ: 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆ ಶುಕ್ರವಾರ ಕರೆಯಲಾಗಿದ್ದ ಜಿಲ್ಲಾ ಪಂಚಾಯತ್ ವಿಶೇಷ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಲ್ಪಟ್ಟಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನು ವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆ ಕರೆಯಲಾಗಿದ್ದ ಮಹತ್ವದ ವಿಶೇಷ ಸಾಮಾನ್ಯ ಸಭೆಗೆ ಕಡಿಮೆ ಸದಸ್ಯರು ಹಾಜರಾಗಿದ್ದರು.
ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ 11.30 ಆದರೂ ಕುಂದೂರು ಕ್ಷೇತ್ರದ ಬಿಜೆಪಿ ಸದಸ್ಯೆ ದೀಪಾ ಜಗದೀಶ್ ಒಳಗೊಂಡಂತೆ ಇಬ್ಬರು ಸದಸ್ಯರ ಹೊರತುಪಡಿಸಿ ಇತರೆ ಸದಸ್ಯರ ಸುಳಿವೇ ಇರಲಿಲ್ಲ. ಅತಿ ಮುಖ್ಯವಾಗಿ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷರು ಕೊನೆಯವರೆಗೆ ಸಭೆಗೆ ಬರಲೇ ಇಲ್ಲ. ಸಭೆಗೆ ಬಂದಂತಹ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದರು.
11.30ರ ನಂತರ ಅಧ್ಯಕ್ಷೆ ಉಮಾ ರಮೇಶ್, ಉಪಾಧ್ಯಕ್ಷ ಡಿ. ಸಿದ್ದಪ್ಪ, ಸದಸ್ಯರಾದ ಎಂ.ಆರ್. ಮಹೇಶ್, ಸವಿತಾ ಕಲ್ಲಪ್ಪ, ಕೆ.ಆರ್. ಜಯಶೀಲ ಇತರರು ಆಗಮಿಸಿದರು. ಒಟ್ಟಾರೆ 36 ಸದಸ್ಯತ್ವ ಬಲದಲ್ಲಿ ಎರಡನೇ ಮೂರು ಭಾಗದಷ್ಟು ಅಂದರೆ 26 ಸದಸ್ಯರಿದ್ದರೆ ಸಾಮಾನ್ಯ ಸಭೆ ನಡೆಸಬಹುದಿತ್ತು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಸದಸ್ಯರ ಸಂಖ್ಯೆ 14 ದಾಟಲೇ ಇಲ್ಲ.
ತಮ್ಮ ಹಾಗೂ ತರೆ ಪಕ್ಷದ ಸದಸ್ಯರ ನಿರೀಕ್ಷೆಯಲ್ಲೇ ಆಸೀನರಾಗಿದ್ದ ಅಧ್ಯಕ್ಷೆ ಉಮಾ ರಮೇಶ್ ಸಭಾಂಗಣದಿಂದ ಹೊರ ಹೋದರು. ಕೆಲ ಹೊತ್ತಿನ ನಂತರ ಸಭಾಂಗಣಕ್ಕೆ ಆಗಮಿಸಿದ ಅವರು, ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಅಲ್ಲಿಗೆ ಎರಡನೇ ಬಾರಿಗೆ ವಿಶೇಷ ಸಾಮಾನ್ಯ ಸಭೆ ಮುಂದೂಲ್ಪಟ್ಟಂತಾಯಿತು.
ಕಳೆದ ಮೇ.10 ರಂದು ಸಹ 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನು ವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆಯೇ ವಿಶೇಷ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಭೆಗೆ ಅಧಿಕಾರಿ ವರ್ಗದವರು ಬಂದಿದ್ದರು. ಆದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲವಾರು ಸದಸ್ಯರು ಬೆಂಗಳೂರು, ಮೈಸೂರಿನಲ್ಲಿ ಕಾರ್ಯಾಗಾರಕ್ಕೆ ತೆರಳಿದ್ದರಿಂದ ಮುಂದೂಲ್ಪಟ್ಟಿತ್ತು.
ಬೇರೆ ಅರ್ಥವೇ ಇಲ್ಲ: ಸಭೆ ಮುಂದೂಡಲ್ಪಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ನಿಗದಿತ ಪ್ರಮಾಣದಲ್ಲಿ ಸದಸ್ಯರು ಬರದೇ ಇದ್ದ ಕಾರಣದಿಂದಾಗಿಯೇ ಇಂದಿನ ಸಭೆಯನ್ನು ಮುಂದೂಡಲಾಗಿದೆ. ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ದಾವಣಗೆರೆಗೆ ಆಗಮಿಸಿದ್ದು, ಅವರ ಕಾರ್ಯಕ್ರಮಕ್ಕೆ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ.
ಗುರುವಾರವೇ ಜಿಲ್ಲಾ ಅಧ್ಯಕ್ಷರು, ಈಶ್ವರಪ್ಪನವರ ಕಾರ್ಯಕ್ರಮದ ಬಗ್ಗೆ ತಿಳಿಸಿ, ಸಭೆ ಮುಂದೂಡುವಂತೆಯೂ ಮನವಿ ಮಾಡಿದ್ದರು. ಮೊದಲೇ ಸಭೆ ನಿಗದಿಯಾಗಿದ್ದರಿಂದ ಸಭೆ ನಡೆಸೋಣ ಅಂದುಕೊಂಡಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಬರದೇ ಮುಂದೂಡಬೇಕಾಯಿತು. ಸಭೆ ಮುಂದೂಡಿದ್ದಕ್ಕೆ ಬೇರೆ ಅರ್ಥ ಇಲ್ಲ ಎಂದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಒತ್ತಡ ಹಾಕಲು ಬಿಜೆಪಿ ಸದಸ್ಯರೇ ಸಭೆಗೆ ಬಂದಿಲ್ಲವೇ ಎಂದು ಪ್ರಶ್ನಿಸಿದಾಗ, ನನ್ನ ಅವಧಿ ಮುಗಿದೇ ಇಲ್ಲ.
ಹಾಗಾಗಿ ರಾಜೀನಾಮೆ ಕೊಡಿ ಎಂದು ಒತ್ತಾಯ ಮಾಡುವ ಮಾತೇ ಇಲ್ಲ. ಒಂದೂವರೆ ವರ್ಷ ಅವಧಿಯಲ್ಲಿ ಇನ್ನೂ 6 ತಿಂಗಳ ಅವಧಿ ಇದೆ. ಇಂದಿನ ಸಭೆಗೆ ಸದಸ್ಯರು ಬರದೇ ಇರುವುದಕ್ಕೂ ನಾನು ರಾಜೀನಾಮೆ ಕೊಡಬೇಕು ಎನ್ನವುದಕ್ಕೂ ಸಂಬಂಧವೇ ಇಲ್ಲ ಎಂದು ಉತ್ತರಿಸಿದರು. ಜಿಲ್ಲಾ ಪಂಚಾಯತಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ ಎಂದಷ್ಟೇ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.