ಒಡೆದ ಪೈಪ್: ಅಗಾಧ ನೀರು ಪೋಲು
Team Udayavani, May 22, 2017, 1:16 PM IST
ದಾವಣಗೆರೆ: ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಪುನಾಃ ಉಲ್ಬಣವಾಗುತ್ತಿರುವ ನೀರಿನ ಸಮಸ್ಯೆ ಪರಿಹರಿಸಬೇಕಾದ ಮಹಾನಗರ ಪಾಲಿಕೆ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗುತ್ತಿದೆ ಎಂಬುದಕ್ಕೆ ಭಾನುವಾರ ಸಂಜೆ ವಿನೋಬ ನಗರ 4ನೇ ಮುಖ್ಯ ರಸ್ತೆಯಲ್ಲಿ ಪೈಪ್ ಒಡೆದು ಗಂಟೆಗಟ್ಟಲೆ ನೀರು ಪೋಲಾಗಿದ್ದು ಸಾಕ್ಷಿ.
ವಿನೋಬ ನಗರ 4ನೇ ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್ ಒಡೆದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನೀರು ರಸ್ತೆಗೆ ಹರಿಯುತ್ತಿದ್ದನ್ನು ಕಂಡ ನಾಗರಿಕರು ಸಂಬಂಧಿತರ ಗಮನಕ್ಕೆ ತಂದರೂ ಬಹು ಹೊತ್ತಿನವರೆಗೆ ಯಾರು ಸಹ ಸ್ಥಳಕ್ಕೆ ಬಂದು ನೀರು ಪೋಲಾಗುವುದನ್ನ ತಡೆಗಟ್ಟಲಿಲ್ಲ. ದಾವಣಗೆರೆಯಲ್ಲಿ ಮತ್ತೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ನಲ್ಲಿಯಲ್ಲಿ ನೀರು ಬರದೆ 8-10 ದಿನಗಳಾಗಿವೆ. ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು, ವಯೋವೃದ್ಧರು ಬಿಂದಿಗೆ ನೀರಿಗಾಗಿ ಹಗಲು- ರಾತ್ರಿಯೆನ್ನದೆ ಪರದಾಡುತ್ತಿದ್ದಾರೆ. ಟ್ಯಾಂಕರ್‌ನಲ್ಲಿ ಮನೆಗೆ 4-5 ಕೊಡಪಾನ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಗಾಲದ ಪ್ರಾರಂಭದ ದಿನಗಳಲ್ಲೇ ನೀರಿನ ಸಮಸ್ಯೆ ತೀವ್ರವಾಗಿದೆ.
ಇಂತಹ ಸಂದರ್ಭದಲ್ಲಿ ಸಾಕಷ್ಟು ಜವಾಬ್ದಾರಿಯಿಂದ ನೀರು ಪೂರೈಕೆ ಮಾಡಬೇಕಾದ ನಗರಪಾಲಿಕೆ ಬೇಜವಾಬ್ದಾರಿ ತೋರುತ್ತಿದೆ. ನಾಗರಿಕರು ಗಮನಕ್ಕೆ ತಂದ ನಂತರವಾದರೂ ನೀರು ಪೋಲಾಗುವುದ ತಡೆಗಟ್ಟಿದ್ದಲ್ಲಿ ಜನರಿಗೆ ಉಪಯೋಗವಾಗುತ್ತಿತ್ತು ಎಂದು ಸಾರ್ವಜನಿಕರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.