ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ದಯಾನಂದ್
Team Udayavani, Jan 7, 2019, 7:43 AM IST
ದಾವಣಗೆರೆ: ಜೀವನದಲ್ಲಿ ಶಿಸ್ತುಬದ್ಧತೆ ಹಾಗೂ ನಿತ್ಯದ ಕರ್ತವ್ಯದ ಒತ್ತಡದ ನಿವಾರಣೆಗೆ ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ಪೂರ್ವವಲಯ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕ ಬಿ. ದಯಾನಂದ್ ಹೇಳಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪದಲ್ಲಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಕೇವಲ ದೇಹದಾಡ್ಯತೆ ಹೊಂದಿದರೆ ಸಾಲದು. ನಿತ್ಯ ಕರ್ತವ್ಯದ ಅವಧಿಯಲ್ಲಿ ಎದುರಾಗುವ ಒತ್ತಡಗಳನ್ನು ನಿರ್ವಹಿಸಲು ಮಾನಸಿಕ ಸ್ಥೈರ್ಯವನ್ನು ಹೊಂದಿರಬೇಕಾಗುತ್ತದೆ. ಅದಕ್ಕೆ ಕ್ರೀಡಾಕೂಟ ಸಹಕಾರಿಯಾಗುತ್ತವೆ ಎಂದರು.
ಪೊಲೀಸ್ ಇಲಾಖೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಒಂದು ರೀತಿಯಲ್ಲಿ ಸಂಪ್ರದಾಯಬದ್ಧವಾಗಿದ್ದು, ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ಇದೆ. ಜಿಲ್ಲಾ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಪೊಲೀಸ್ ತಂಡದವರು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ಭಾಗವಹಿಸಲು ಅವಕಾಶವಿರುತ್ತದೆ. ಹಾಗಾಗಿ ಇನ್ನು ಕೆಲವೆ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಪ್ರತಿಭಾನ್ವಿತ ಪೊಲೀಸ್ ಕ್ರೀಡಾಪಟುಗಳು ಭಾಗವಹಿಸಿ ಹೆಚ್ಚಿನ ಪದಕಗಳನ್ನು ಪಡೆದು ಜಿಲ್ಲಾ ಪೊಲೀಸ್ ಇಲಾಖೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಇತರ ಜಿಲ್ಲೆಗಳಲ್ಲಿ ಈಗಾಗಲೇ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಕ್ರೀಡಾಕೂಟ ನಡೆಸಲಾಗುತ್ತದೆ. ಅದೇ ರೀತಿ ಜಿಲ್ಲೆಯಲ್ಲೂ ಸಾಕಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳಿದ್ದು, ಅವರಿಗೂ ಕೂಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕ್ರೀಡಾಕೂಟ ಏರ್ಪಡಿಸಿ ಬಹುಮಾನ ವಿತರಣೆ ಮಾಡುವ ಪ್ರಯತ್ನವನ್ನು ಮುಂದಿನ ವರ್ಷಗಳಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ವಾರ್ಷಿಕ ಪೊಲೀಸ್ ಕ್ರೀಡಾಕೂಟವು ಇಲಾಖೆಯಲ್ಲಿಯೇ ಇರುವ ಪ್ರತಿಭಾನ್ವಿತರನ್ನು ಗುರುತಿಸಲು ಸಿದ್ಧ ವೇದಿಕೆಯಾಗಿದೆ. ಇಂತಹ ಕ್ರೀಡಾಕೂಟದಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರಲ್ಲದೇ, ಕ್ರೀಡಾಕೂಟದಲ್ಲಿ ತಂಡಗಳು ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದು, ಈ ಶಿಸ್ತು ತಮ್ಮ ನಿತ್ಯದ ಕರ್ತವ್ಯದಲ್ಲೂ ದಕ್ಷವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಶಶಿಕಲಾ ದಯಾನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್, ಡಿವೈಎಸ್‌ಪಿ ಎಂ.ಕೆ. ಗಂಗಲ್, ಗೋಪಾಲಕೃಷ್ಣಗೌಡ್ರು, ಬಾಲಚಂದ್ರನ್, ಗಜೇಂದ್ರಪ್ಪ, ಟಿ.ವಿ. ದೇವರಾಜ್, ಸಿಇಎನ್ ಕ್ರೈಂ ವಿಭಾಗದ ದೇವರಾಜ್, ಸಿಪಿಐ ಉಮೇಶ್, ಬ್ರಿಜೇಶ್ ಮ್ಯಾಥ್ಯೂ, ಆರ್.ಆರ್. ಪಾಟೀಲ್, ಇ. ಆನಂದ್ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಪಶಸ್ತಿ ಮುಡಿಗೇರಿಸಿಕೊಂಡಿತು.
ವಿಜೇತರು: ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿ.ಎ.ಆರ್) ತಂಡ (ಸಮಗ್ರ ಪ್ರಶಸ್ತಿ), ಗ್ರಾಮಾಂತರ ಉಪವಿಭಾಗದ ಹೊನ್ನಾಳಿ ಪೊಲೀಸ್ ತಂಡ (ಬೆಸ್ಟ್ ಡಿಟೆಕ್ಟಿವ್ ಪೊಲೀಸ್ ಠಾಣೆ ಪ್ರಶಸ್ತಿ), ಸಿಪಿಸಿ ನಗರ ಉಪವಿಭಾಗದ ಮಹಾಂತೇಶ್ ಬಿದರಿ ಹಾಗೂ ಡಿಎಆರ್ ಸಿಪಿಸಿ ವಿಭಾಗದ ಎ.ಪಿ. ಜಯಣ್ಣ (ಪ್ರಸಕ್ತ ಸಾಲಿನ ಪುರಷರ ವಿಭಾಗದ ಜಂಟಿ ಚಾಂಪಿಯನ್), ಮಹಿಳಾ ಕಬಡ್ಡಿ: ತೇಜಾವತಿ ಪಿಐ ನಿಸ್ತಂತು ತಂಡ (ವಿನ್ನರ್), ಬಸವನಗರ ಠಾಣೆ ಪಿಎಸ್‌ಐ ತಂಡ (ರನ್ನರ್), ಪುರಷರ ಕಬಡ್ಡಿ: ಹರಪನಹಳ್ಳಿ ಉಪವಿಭಾಗ (ವಿನ್ನರ್), ದಾವಣಗೆರೆ ನಗರ ಉಪ ವಿಭಾಗ (ರನ್ನರ್), ವಾಲೀಬಾಲ್: ಡಿಎಆರ್ (ವಿನ್ನರ್), ನಗರ ಉಪವಿಭಾಗ (ರನ್ನರ್). ಹಗ್ಗ ಜಗ್ಗಾಟ: ಡಿಎಆರ್ (ವಿನ್ನರ್), ಹರಪನಹಳ್ಳಿ ಉಪ ವಿಭಾಗ (ರನ್ನರ್), ಕ್ರಿಕೆಟ್: ಡಿಎಆರ್ (ವಿನ್ನರ್), ಜಿಲ್ಲಾ ಪೊಲೀಸ್ ಕಚೇರಿ (ರನ್ನರ್), 400 ಮೀ ರಿಲೇ: ಡಿಎಆರ್ (ವಿನ್ನರ್), ದಾವಣಗೆರೆ ಗ್ರಾಮಾಂತರ (ರನ್ನರ್), ಪೊಲೀಸ್ ಅಧಿಕಾರಿಗಳ ವಾಲಿಬಾಲ್: ಹೆಚ್ಚುವರಿ
ಎಸ್ಪಿ ಟಿ.ಜೆ. ಉದೇಶ್ ತಂಡ (ವಿನ್ನರ್), ಎಸ್ಪಿ ಆರ್. ಚೇತನ್ ತಂಡ (ರನ್ನರ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.