ಭೂಮಿಗೆ ಗಂಗಾವತರಣ ಮಾಡಿಸಿದ ಶ್ರೀ ಭಗೀರಥ


Team Udayavani, May 3, 2017, 12:57 PM IST

dvg3.jpg

ದಾವಣಗೆರೆ: ಶ್ರೀ ಭಗೀರಥ ಭೂಮಿಗೆ ಗಂಗಾವತರಣ ಮಾಡಿಸುವ ಮೂಲಕ ಜೀವಸೃಷ್ಟಿಗೆ ಕಾರಣೀಭೂತವಾಗಿರುವ ಮಹಾನ್‌ ಪುರುಷ ಎಂದು ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸಿ.ಆರ್‌. ಅಂಜಿನಪ್ಪ ಬಣ್ಣಿಸಿದ್ದಾರೆ. 

ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಶ್ರೀ ಭಗೀರಥ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಶ್ರೀ ಭಗೀರಥರು ಪ್ರಯತ್ನಶೀಲತೆ, ಛಲ, ಸಾಹಸ, ಧೈರ್ಯ, ಗುರು, ದೈವಭಕ್ತಿ, ಏಕಾಗ್ರತೆ, ತಪೋನಿಷ್ಟತೆಯ ಪ್ರತೀಕ. ದೇವಲೋಕದಿಂದ ಭೂಮಿಗೆ ಗಂಗೆ ಹರಿಯುವಂತೆ ಮಾಡುವ ಮೂಲಕ ಭಗೀರಥ ಪ್ರಯತ್ನ… ಎಂಬ ನುಡಿಗಟ್ಟಿಗೆ ಕಾರಣರಾದವರು ಎಂದರು. 

ಪ್ರಯತ್ನದ ಹಿಂದೆ ಪರಮಾತ್ಮನಿದ್ದಾನೆ… ಎಂಬ ನುಡಿಗಟ್ಟಿನ ಪ್ರತೀಕವಾಗಿ ಶ್ರೀ ಭಗೀರಥರು ಗಂಗಾವತರಣ ಮಾಡಿ, ತಮ್ಮ ಪೂರ್ವಜರ ಭಸ್ಮ ಸಮಾಧಿ ಮೇಲೆ ಹರಿಸಿದರು. ಅದಕ್ಕೂ ಮುನ್ನ ಏನೆಲ್ಲಾ ಸಮಸ್ಯೆ, ಅಡೆ-ತಡೆ ಎದುರಾದರೂ ತಮ್ಮ ಛಲ ಬಿಡಲಿಲ್ಲ. ಎದೆಗುಂದಲಿಲ್ಲ. 

ಸತತ ಪ್ರಯತ್ನದ ಮೂಲಕ ಕೊನೆಗೂ ದೇವಲೋಕದ ಗಂಗೆಯನ್ನು ಭೂಮಿಗೆ ತರುವಲ್ಲಿ ಯಶಸ್ವಿಯಾದರು. ಅವರ ಪ್ರಯತ್ನಶೀಲತೆ ಇಡೀ ಮಾನವ ಕುಲಕ್ಕೆ ಮಾದರಿ ಮತ್ತು ಅನುಕರಣೀಯ ಎಂದು ತಿಳಿಸಿದರು. ಸೂರ್ಯವಂಶಸ್ಥ ಶ್ರೀಭಗೀರಥ ತಮ್ಮ ಪೂರ್ವಜರಾದ ಸಗರ, ಅಂಶುಮಂತ, ದಿಲೀಪರ ಕೈಯಲ್ಲಿ ಆಗದೇ ಇದ್ದುದ್ದನ್ನು ಮಾಡಿ ತೋರಿಸಿದವರು.

ಶ್ರೀ ಭಗೀರಥರ ತಾತಾ ಅಂಶುಮಂತನ ತಾತಾ ಸಗರ ಮಹಾರಾಜ ಕೈಗೊಂಡಿದ್ದ ಅಶ್ವಮೇಧ ಯಾಗದ ಕುದುರೆ ಬಿಡಿಸಿಕೊಳ್ಳಲಿಕ್ಕೆ ಹೋಗಿದ್ದ ಆತನ ಮಕ್ಕಳೆಲ್ಲಾ ಋಷಿಯ ಕೋಪಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಮೋಕ್ಷ ಕಾಣಬೇಕು ಎಂದಾದರೆ ದೇವಲೋಕದಲ್ಲಿನ ಗಂಗೆ ಅವರ ಭಸ್ಮದ ರಾಶಿಯ ಮೇಲೆ ಹರಿಯಬೇಕಿತ್ತು. 

ಗಂಗಾವತರಣ ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಶ್ರೀ ಭಗೀರಥರು ಗಂಗಾವತರಣ ಮಾಡಿಸಿದರು ಎಂದು ತಿಳಿಸಿದರು. ಮಳೆ ಇಲ್ಲದೆ ನೀರಿನ ಅತೀವ ಸಮಸ್ಯೆ ನಡುವೆಯೇ ಭೂಮಿಗೆ ಗಂಗೆ ಕರೆ ತಂದಂತಹ ಶ್ರೀ ಭಗೀರಥರ ಜಯಂತಿ ಆಚರಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೀರನ್ನು ಮಿತವಾಗಿ  ಬಳಸುವ ಪ್ರತಿಜ್ಞೆ ಮಾಡಬೇಕು. ಪರಿಸರ ಸಂರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಗೀರಥ ಜಯಂತಿಯನ್ನ ಸಾರ್ಥಕಪಡಿಸಬೇಕು ಎಂದು ಮನವಿ ಮಾಡಿದರು.  

ಟಾಪ್ ನ್ಯೂಸ್

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.