ರಾಮಘಟ್ಟ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
Team Udayavani, Feb 13, 2017, 1:16 PM IST
ಹರಪನಹಳ್ಳಿ: ತಾಲೂಕಿನ ತೌಡೂರು ಗ್ರಾಮದಲ್ಲಿ ಉಡುಸಲಾಂಬಿಕಾ ದೇವಸ್ಥಾನದ ಗೋಪುರ ಕಳಸಾರೋಹಣ ಮತ್ತು ರಾಮಘಟ್ಟ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನೆರವೇರಿತು.
ದೇವಸ್ಥಾನದ ಕಳಶಕ್ಕೆ ಧಾರ್ಮಿಕ ವಿಧಿಧಿ-ವಿಧಾನಗಳಿಂದ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ರೇವಣಸಿದ್ದೇಶ್ವರ ಸ್ವಾಮೀಜಿಗಳು, ಧರ್ಮ, ಭಕ್ತಿ, ಕ್ಷೀಣಿಸುತ್ತಾ ಬಂದಿದೆ. ಕಂಪ್ಯೂಟರ್ ಯುಗದಲ್ಲಿ ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನ ಕಳಸಾರೋಹಣ ನೆರವೇರಿಸಿರುವುದು ಸಂತೋಷ ತಂದಿದೆ.
ಗ್ರಾಮದ ಅಭಿವೃದ್ಧಿ ಹೊಂದಬೇಕಾದರೆಎಲ್ಲ ಜನಾಂಗದವರು ಒಗ್ಗೂಡಿದಾಗ ಮಾತ್ರ ಸಾಧ್ಯವಾಗುತ್ತದೆ. ತಾಯಿಯೇ ಶ್ರೇಷ್ಠ, ಅವಳನ್ನು ಚೆನ್ನಾಗಿ ನೋಡಿಕೊಂಡು ದುಶ್ಚಟಗಳಿಂದ ದೂರವಿರಬೇಕು ಎಂದರು. ತೌಡೂರು ಗ್ರಾಮದ ಭಕ್ತರು ಭಕ್ತಿಯಿಂದ ನನ್ನನ್ನು ಕರೆಸಿ ಎಲ್ಲ ಮತದವರೂ ಸೇರಿ ವಿಜೃಂಭಣೆಯಿಂದ ಅಡ್ಡಪಲ್ಲಕ್ಕಿ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಹೆಣ್ಣು ಮಕ್ಕಳು ಕಳಸದೊಂದಿಗೆ ವಿವಿಧ ವಾದ್ಯಗಳಾದ ಡೊಳ್ಳು, ನಂದಿಕೋಲು, ಸಮಾಳ, ಹಲಗೆ ಸೇರಿದಂತೆ ಮತ್ತಿತರರೆ ವಾದ್ಯಗಳನ್ನು ಬಾರಿಸುತ್ತಾ ಉತ್ಸವ ನಡೆಸಿರುವುದು ಅತೀವ ಸಂತೋಷ ತಂದಿದೆ ಎಂದರು. ಗ್ರಾಮದ ಬನ್ನಿಮರದಿಂದ ಊರ ಹೊರಗಿನ ಉಡುಸಲಾಂಬ ದೇವಸ್ಥಾನದವರೆಗೆ ರೇವಣಸಿದ್ದೇಶ್ವರ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಕಳಸಾರೋಹಣ ಅಂಗವಾಗಿ ಅನೇಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಮುಖಂಡರಾದ ಎ.ಎಂ. ಅಜ್ಜಯ್ಯ, ಕೆ.ಎಂ. ಮಂಜುನಾಥಯ್ಯ, ಕೆಂಚಪ್ಪ, ಗ್ರಾಪಂ ಅಧ್ಯಕ್ಷ ಪಿ. ಶಿವಾನಂದಗೌಡ, ಗ್ರಾಪಂ ಸದಸ್ಯರಾದ ಚಂದ್ರಶೇಖರ, ಪಿ. ಶಿವಾನಂದಗೌಡ, ಶೋಭಾ ದಂಡೆಪ್ಪ, ಕಾವಲಹಳ್ಳಿ ರವೀಂದ್ರ, ಷಣ್ಮುಖನಗೌಡ, ಪಿ. ಚನ್ನಬಸಪ್ಪ, ಎಸ್.ಎಂ. ಪ್ರಕಾಶ್, ಬಸಣ್ಣ, ಶಿವಣ್ಣ, ಕೊಟ್ರಯ್ಯ, ಹಾಲಪ್ಪ, ಕಟ್ಟಡದ ಶಿಲ್ಪಿಗಳಾದ ತಿಮ್ಮಣ್ಣ, ಲಕ್ಷ್ಮಣ, ವಿಜಯಕುಮಾರ್, ವಾಗೀಶ, ನಾಗರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.