ಹಿರಿಯ ಉದ್ಯೋಗಿಗಳಿಂದ ಸ್ಟೇಟ್ ಬ್ಯಾಂಕ್ ಭದ್ರ: ರತನ್‌ಕುಮಾರ್
ಗ್ರಾಹಕರ ವಿಶ್ವಾಸ ಗಳಿಸಲು ಹಾಕಿಕೊಟ್ಟ ಮೇಲ್ಪಂಕ್ತಿ ಮರೆಯಲಾಗದು
Team Udayavani, Apr 8, 2022, 2:36 PM IST
ದಾವಣಗೆರೆ: ವಾಣಿಜ್ಯ, ಶೈಕ್ಷಣಿಕ ನಗರ ದಾವಣಗೆರೆಯಲ್ಲಿ ಸ್ಟೇಟ್ ಬ್ಯಾಂಕ್ ಭದ್ರವಾಗಿ ನೆಲೆಯೂರಲು ಹಿರಿಯ ಸಹೋದ್ಯೋಗಿಗಳ ಕೊಡುಗೆ ಸಾಕಷ್ಟಿದೆ ಎಂದು ಸ್ಟೇಟ್ ಬ್ಯಾಂಕ್ ವಲಯ 3 ರ ಸಹಾಯಕ ಮಹಾಪ್ರಬಂಧಕ ರತನ್ ಕುಮಾರ್ ರತ್ನ ಹೇಳಿದರು.
ವಿದ್ಯಾನಗರ ಪಾರ್ಕ್ ಸಮೀಪದ ರೋಟರಿ ಭವನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ಸ್ ಕಮ್ಯೂನ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನ ಹಿರಿಯ ಅಧಿಕಾರಿಗಳು, ನೌಕರರು, ಸಿಬ್ಬಂದಿ ಶ್ರಮವಹಿಸಿ ಮೈಸೂರು ಬ್ಯಾಂಕನ್ನು ಗ್ರೇಟ್ ಮೈಸೂರು ಬ್ಯಾಂಕ್ ಆಗಿಸಿದವರು ಎಂದರು.
ಪ್ರಾರಂಭಿಕ ಹಂತದಲ್ಲಿ ಗ್ರಾಹಕರು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವವರ ಮೇಲೆ ವಿಶ್ವಾಸವಿರಿಸಿ ವ್ಯವಹಾರ ಮಾಡುತ್ತಿದ್ದರು. ಆರಂಭದ ದಿನಗಳಲ್ಲಿ ಪ್ರತಿ ಹಳ್ಳಿಗೂ ಭೇಟಿ ನೀಡಿ ರೈತರು ಇರುವಲ್ಲಿಗೆ ಹೋಗಿ ಕೃಷಿ ಸಾಲ ನೀಡುತ್ತಿದ್ದ ಹಿರಿಯ ಉದ್ಯೋಗಿಗಳು ಶ್ರಮ ಹಾಗೂ ಶ್ರದ್ಧೆಯಿಂದ ಬ್ಯಾಂಕ್ ವಲಯವನ್ನೇ ಸದೃಢಗೊಳಿಸಿದ್ದಾರೆ ಎಂದರು.
ಸ್ಟೇಟ್ ಬ್ಯಾಂಕ್ ನಲ್ಲಿ ಹಿರಿಯ ಉದ್ಯೋಗಿಗಳು ಕಿರಿಯರನ್ನು ಎಂದೂ ಬೈಯುವುದಿಲ್ಲ. ಏರುಧ್ವನಿಯಲ್ಲಿ ಮಾತನಾಡುವುದಿಲ್ಲ. ಏನೇ ಸಮಸ್ಯೆ ಇದ್ದರೂ ಸಮಾಧಾನದಿಂದ ಬಗೆಹರಿಸುತ್ತಾರೆ. ಅಂತಹ ಶ್ರೀಮಂತಿಕೆಯ ಸಂಪ್ರದಾಯ ಆರಂಭಿಸಿದ್ದು ಸಹ ಹಿರಿಯ ಉದ್ಯೋಗಿಗಳು ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಸಿ.ಎನ್. ಪ್ರಸಾದ್ ಮಾತನಾಡಿ, ಸಂಘ ಹಲವಾರು ಸಾಧನೆಗಳನ್ನು ಮಾಡುವ ಮೂಲಕ ಇತಿಹಾಸ ನಿರ್ಮಿಸಿಕೊಂಡು ಬರುತ್ತಿದೆ. ಜಗನ್ನಾಥನ್ ನೇತೃತ್ವದಲ್ಲಿ ಸುಂದರೇಶ್ ಸಂಘ ಪ್ರಾರಂಭಿಸಿದರು. 2009 ರಲ್ಲಿ 800 ರಿಂದ 900 ಸದಸ್ಯರಿದ್ದ ಸಂಘಟನೆ ಈಗ 8 ಸಾವಿರ ಸದಸ್ಯರ ಹೊಂದಿದೆ. ನಮ್ಮ ಸಂಘ ರಾಜ್ಯದ ಬ್ಯಾಂಕ್ ನಿವೃತ್ತರ ಸಂಘದಲ್ಲೇ ಅತ್ಯಂತ ಹಿರಿಯದು ಎಂದು ತಿಳಿಸಿದರು.
ಸಂಘವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. 1.8 ಕೋಟಿ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಿಸಿದೆ. ಸಮಾವೇಶ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಇನ್ನೂ ಹಲವು ಯೋಜನೆಗಳಿವೆ ಎಂದು ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಎನ್. ಪೈ ಅಧ್ಯಕ್ಷತೆ ವಹಿಸಿದ್ದರು. ಎಸ್ ಬಿಐ ಟಿಸಿ ಅಧ್ಯಕ್ಷ ಶ್ರೀನಿವಾಸ್‌ರಾವ್, ಕಾರ್ಯಾಧ್ಯಕ್ಷ ಎಸ್. ಸಿದ್ಧಲಿಂಗಯ್ಯ, ಉಪಾಧ್ಯಕ್ಷ ಎ.ಎಸ್. ರಘುನಂದನ್ ಇತರರು ಇದ್ದರು. ತಾರಾಮಣಿ ಪ್ರಾರ್ಥಿಸಿದರು. ಅಜಿತ್ ಕುಮಾರ್ ನ್ಯಾಮತಿ ಸ್ವಾಗತಿಸಿದರು. ಸೂರ್ಯ ನಾರಾಯಣ್ ನಿರೂಪಿಸಿದರು. ಜೆ. ಬದ್ರಿ ನಾರಾಯಣ್ ವಂದಿಸಿದರು. ಹಿರಿಯ ನೌಕರರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.