ಬೆಳೆ ಪರಿಹಾರಕ್ಕಾಗಿ ರಾಜ್ಯ ಹೆದ್ದಾರಿ ಬಂದ್
Team Udayavani, Oct 25, 2017, 1:55 PM IST
ಹರಪನಹಳ್ಳಿ: ಸೈನಿಕ್ ಹುಳುಗಳ ಹಾವಳಿಯಿಂದ ಹಾನಿಗೊಳಗಾಗಿರುವ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲೂಕಿನ ತೆಲಿಗಿ ಸಮೀಪ ಪ್ರಗತಿಪರ ಸಂಘಟನೆಗಳ ನೇತçತ್ವದಲ್ಲಿ ಮಂಗಳವಾರ ರಾಜ್ಯ ಹೆದ್ದಾರಿ ಬಂದ್ ಮಾಡಿ ರಸ್ತೆ ತಡೆ ಚಳವಳಿ ನಡೆಸಿದರು.
ಬೆಳಿಗ್ಗೆ 10.30ರಿಂದ ಆರಂಭಗೊಂಡ ಚಳವಳಿ ಮಧ್ಯಾಹ್ನ 2 ಗಂಟೆವರೆಗೂ ನಡೆದ ಪರಿಣಾಮ ದೂರದ ಊರುಗಳಿಗೆ
ಪ್ರಯಾಣಿಸಬೇಕಾದ ವಾಹನ ಸವಾರರು ಪರದಾಟ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವೀರಭದ್ರ ಸ್ವಾಮೀಜಿ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ನಡುವೆ ಪೊಲೀಸರು ಮುಂಜಾಗೃತ ಅಲಗಿಲವಾಡ ಗ್ರಾಮ ಮೂಲಕ ಹಾಗೂ ಕಂಚಿಕೇರಿ, ಬೆಂಡಿಗೇರಿ ಮಾರ್ಗದ ವಾಹನ
ಸಂಚಾರಕ್ಕೆ ಅನುವು ಮಾಡಿ ಪ್ರಯಾಣಿಕ ಪರದಾಟ ತಪ್ಪಿಸಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಸೈನಿಕ್ ಹುಳಿನ ಬಾಧೆಯಿಂದ ಈ ಭಾಗದ ರೈತರ ಬದುಕು ಬೀದಿಗೆ ಬಂದಿದೆ. ಜಿಲ್ಲಾಧಿ ಕಾರಿಗಳು ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ ಕೊಡುತ್ತೀವಿ ಎನ್ನುತ್ತಿದ್ದಾರೆ. ಸೈನಿಕ್ ಹುಳಿನ ಕಾಟ ಅನಾವೃಷ್ಟಿ ಅಲ್ಲವೇ? ರೈತರಿಗೆ ಪರಿಹಾರ ಕೊಡಲು ಅಧಿಕಾರಿಗಳು ಮಾನದಂಡ ಇಟ್ಟುಕೊಳ್ಳಬಾರದು. ಸರ್ಕಾರ ಬಂಡವಾಳಶಾಹಿಗಳಿಗೆ ಪ್ರೋತ್ಸಾಹಿಸುವ
ಬದಲು ದೇಶದ ಬೆನ್ನೆಲುಬು ಅನ್ನದಾತರ ಸಂಕಷ್ಟಕ್ಕೆ ನೆರವಾಗಬೇಕು. ಅಧಿಕಾರಿಗಳು, ಜನಪ್ರತಿನಿ ಧಿಗಳು ಈ ಸೈನಿಕ್ ಹುಳಿವಿನ ಹಾನಿಯನ್ನು ವಿಮೆ ವ್ಯಾಪ್ತಿಯಲ್ಲಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ರೈತ ನಾನು ಬೆಳೆದ ಬೆಳೆಗೆ ಬೆಲೆ ನಿಗ ಮಾಡುವ ಹಕ್ಕು ಹೊಂದರಿರುವುದು ಶೋಚನೀಯ ಸ್ಥಿತಿಯಾಗಿದೆ. ಸೈನಿಕ್ ಕೀಟದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಈ ವಿಚಾರದಲ್ಲಿ ರಾಜಕಾರಣಿಗಳು ನಿರ್ಲಕ್ಷ ವಹಿಸದೇ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ ಎ.ಎಂ.ವಿಶ್ವನಾಥ ಮಾತನಾಡಿ, ಹುಳಗಳ ಹಾವಳಿಯಿಂದ ವಿವಿಧ ಬೆಳೆಗಳು ಹಾನಿಯಾಗಿ ರೈತರು ತೀವ್ರ ಆತಂಕದಲ್ಲಿದ್ದಾರೆ. ವಿಮೆ ಹೆಸರಲ್ಲಿ ಕೋಟ್ಯಂತರ ಹಣ ಕಂಪನಿ ಸಂಗ್ರಹಿಸಿದೆ. ಆದರೆ ಜಿಲ್ಲಾ ಧಿಕಾರಿಗಳು ಕೀಟಬಾಧೆ ವಿಮಾ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಕçಷಿ ಉಪನಿರ್ದೇಶಕ ಸದಾಶಿವಪ್ಪ, ತಹಶೀಲ್ದಾರ್ ಗುರುಬಸವರಾಜ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿದರು.
ವಿವಿಧ ಮಠಾಧೀಶರಾದ ಮಲ್ಲಿಕಾರ್ಜುನ ಸ್ವಾಮೀಜಿ, ವೀರಭದ್ರ ಸ್ವಾಮೀಜಿ, ರೈತ ಮುಖಂಡರಾದ ಯಡಿಹಳ್ಳಿ ರಾಜ್‌ಶಂಕರ, ಯಡಿಹಳ್ಳಿ ಶೇಖರಪ್ಪ, ಚಿರಸ್ತಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ, ಜಿಪಂ ಮಾಜಿ ಸದಸ್ಯ ಈಶ್ವರಪ್ಪ, ಗುಡಿಹಳ್ಳಿ ಹಾಲೇಶ, ಕಬ್ಬಳ್ಳಿ ಬಸವರಾಜ್, ಕರಿಬಸಪ್ಪ, ತೆಲಿಗಿ ಬಸವರಾಜ್, ಸುರೇಶಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.