ಹೋರಾಟ ನಿರತರಿಂದ ಬೀದಿ ನಾಟಕ ಪ್ರದರ್ಶನ
Team Udayavani, Jul 8, 2020, 10:58 AM IST
ದಾವಣಗೆರೆ: ಕಳೆದ 16 ತಿಂಗಳನಿಂದ ಬಾಕಿ ಇರುವ ಶಿಷ್ಯವೇತನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಗೃಹ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮಂಗಳವಾರ “ಸರ್ಕಾರಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣಸಂಕಟ’ ಎಂಬ ಬೀದಿ ನಾಟಕದ ಮೂಲಕ ಸಮಸ್ಯೆಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.
“ಸರ್ಕಾರಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣಸಂಕಟ’ ಎನ್ನುವ ಶೀರ್ಷಿಕೆಗೆ ಅನುಗುಣವಾಗಿ ಡಾಕ್ಟರ್ ಕಲಿಸಲು ಹಂಬಲಿಸುವ ಬಡ ತಂದೆ-ತಾಯಿ, ಆದಕ್ಕಾಗಿ ಮಾಡುವ ಸಾಲ, ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿ ಸಕಾಲದಲ್ಲಿ ಶಿಷ್ಯವೇತನ ದೊರೆಯದೆ ಪಡುವ ಪಡಿಪಾಟಲು, ಒಂದೊತ್ತಿನ ತಿಂಡಿಗೂ ನಡೆಸುವ ಹೆಣಗಾಟಸೇರಿದಂತೆ ಪ್ರತಿಯೊಂದು ಮಜಲಿನ ದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಡಾ| ಗಾಯನ ಮತ್ತು ತಂಡದವರು ಮನಮುಟ್ಟುವಂತೆ ನಾಟಕವನ್ನು ಕಟ್ಟಿ ಕೊಟ್ಟರು. ನಾಟಕದ ಜೀವಾಳವಾಗಿ ಡಾ| ನಿಧಿ ನಿರೂಪಣೆ ಇತ್ತು. ಬೀದಿನಾಟಕ ಪ್ರದರ್ಶನದ ನಂತರ ಹೋರಾಟ ನಿರತರು ಚೀನಾ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಬ್ಯಾನರ್ ಮೂಲಕ ನಮನ ಸಲ್ಲಿಸಿದರು.
ರಾಷ್ಟ್ರಗೀತೆ ಹಾಡಿದರು. ಗಾಲ್ವಾನ್ ಕಣಿವೆಯಲ್ಲಿ ಹೋರಾಡುತ್ತಿರುವ ನಿಜವಾದ ಯೋಧರು ಸ್ಪೂರ್ತಿ. ಸೈನಿಕರು ಪ್ರಾಣವನ್ನೇ ಪಣಕಿಟ್ಟು ಹೋರಾಡುತ್ತಿದ್ದಾರೆ. ನಾವೂ ಸಹ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಹೋರಾಟದ ಜೊತೆ ಜೊತೆಗೆ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದೇವೆ ಎಂದು ಡಾ| ರಾಹುಲ್ ತಿಳಿಸಿದರು. ಆದಷ್ಟು ಬೇಗ ಶಿಷ್ಯವೇತನದ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.