ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸಿ
Team Udayavani, Sep 15, 2021, 2:04 PM IST
ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣಮಂಡಳಿ ಮಾದರಿಯಲ್ಲಿ ಬೀದಿ ಬದಿವ್ಯಾಪಾರಸ್ಥರಿಗೆ ಕಲ್ಯಾಣ ಮಂಡಳಿ ರಚನೆಮಾಡಬೇಕು ಎಂದು ದಾವಣಗೆರೆ ಫುಟ್‌ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಂಘದ ಕಾರ್ಯದರ್ಶಿ ಎಸ್.ಇಸ್ಮಾಯಿಲ್, ಕಲ್ಯಾಣ ಮಂಡಳಿ ರಚನೆಯಿಂದಬೀದಿ ಬದಿ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲ ಆಗಲಿದೆ. ಹಲವಾರು ವರ್ಷದಿಂದ ಕಲ್ಯಾಣಮಂಡಳಿ ರಚನೆಗೆ ಒತ್ತಾಯ ಮಾಡಲಾಗುತ್ತಿದೆ.ರಾಜ್ಯ ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆಕಲ್ಯಾಣ ಮಂಡಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆಯಿಂದ ಜಕಾತಿವಸೂಲಿ ಮಾಡಲಾಗುತ್ತಿದ್ದು, ಜಕಾತಿಯಹರಾಜು ಪಡೆದವರು ಮನಸೋ ಇಚ್ಛೆಯಂತೆಜಕಾತಿ ವಸೂಲಿ ಮಾಡುತ್ತಿದ್ದರು. ಹಳ್ಳಿಗಳಿಂದಬಂದವರ ಮೇಲೆ ಇನ್ನಿಲ್ಲದ ದೌರ್ಜನ್ಯ,ದಬ್ಟಾಳಿಕೆ ನಡೆಸಲಾಗುತ್ತಿತ್ತು. ಅದರ ವಿರುದ್ಧಧ್ವನಿ ಎತ್ತಿ ಹೋರಾಟ ನಡೆಸಿದ ಪರಿಣಾಮ2018ರ ಸೆ. 5 ರಂದು ಅಂದಿನ ಜಿಲ್ಲಾಧಿಕಾರಿಡಿ.ಎಸ್. ರಮೇಶ್, ಪಾಲಿಕೆ ಆಯುಕ್ತಮಂಜುನಾಥ್ ಬಳ್ಳಾರಿ ಇತರರು ಸರ್ಕಾರದನಿಯಮಗಳ ಅನ್ವಯ ಜಕಾತಿ ವಸೂಲಿಮಾಡಬೇಕು ಎಂದು ಸೂಚಿಸಿದ್ದರು.
ಆದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಜಕಾತಿಎಂಬುದು ಪೆಡಂಭೂತವಾಗಿ ಕಾಡುತ್ತಿದೆ.ಸಂಬಂಧಿತರು ಜಕಾತಿ ಮಾμಯಾಕ್ಕೆ ಕಡಿವಾಣಹಾಕಬೇಕು ಎಂದರು.ಎಲ್ಲ ವ್ಯಾಪಾರಸ್ಥರು ಜಕಾತಿ ನೀಡುತ್ತೇವೆ.ನಾವು ನೀಡಿದ ಜಕಾತಿಯ ರಸೀದಿಯನ್ನುಆ ದಿನವೇ ನೀಡಬೇಕು. ರಸೀತಿಯಲ್ಲಿಕ್ರಮಸಂಖ್ಯೆ, ದಿನಾಂಕ, ಮೊತ್ತ, ಮಹಾನಗರಪಾಲಿಕೆ ಮೊಹರು ಮುದ್ರಿತವಾಗಿರಬೇಕು.ಜಕಾತಿ ವಸೂಲು ಮಾಡುವಂತಹವರುಸಮವಸ್ತ್ರ, ಗುರುತಿನ ಚೀಟಿ ಹೊಂದಿರಬೇಕು.ನಗರಪಾಲಿಕೆ ವಿಧಿಸಿರುವ 19 ಷರತ್ತುಗಳನ್ನುಕಡ್ಡಾಯ ಮತ್ತು ಪಾರದರ್ಶಕವಾಗಿಪಾಲನೆ ಮಾಡುವಂತಾಗಬೇಕು ಎಂದುಒತ್ತಾಯಿಸಿದರು.ಜಕಾತಿ ಟೆಂಡರ್ ಕರೆಯುವಾಗನಗರಪಾಲಿಕೆಯವರು ತ್ರಿಸದಸ್ಯರ ಸಮಿತಿರಚಿಸಬೇಕು. ಬೀದಿ ಬದಿ ವ್ಯಾಪಾರಸ್ಥರಸಮ್ಮುಖದಲ್ಲೇ ಚರ್ಚಿಸಿ ಜಕಾತಿ ಟೆಂಡರ್‌ನೀಡಬೇಕು. ಎಲ್ಲ ಕಡೆ ಜಕಾತಿಯ ದರಪಟ್ಟಿಅಳವಡಿಸ ಬೇಕು.
ನಿಯಮಗಳಂತೆ ಜಕಾತಿದರ ನಿಗದಿಪಡಿಸಬೇಕು ಎಂದು ತಿಳಿಸಿದರು.ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆ.ಆರ್.ಮಾರ್ಕೆಟ್ ಒಂದು ರಸ್ತೆ ಕಾಮಗಾರಿಪ್ರಾರಂಭಿಸಿ ಎರಡು ವರ್ಷ ಕಳೆದರೂ ಕೆಲಸಮುಗಿದಿಲ್ಲ. ಕೆಲಸಕ್ಕೆ ಮರಗಳನ್ನು ಕಡಿದುಹಾಕಿರುವುದರಿಂದ ನೆರಳಿನ ವ್ಯವಸ್ಥೆ ಇಲ್ಲ.ಸಮೀಪದಲ್ಲಿ ಕುಡಿಯುವ ನೀರಿನ ಸೌಲಭ್ಯವೂಇಲ್ಲ. ಸ್ವತ್ಛತೆಗಾಗಿ ನಮ್ಮಿಂದಲೇ ಪ್ರತ್ಯೇಕವಾಗಿಹಣ ವಸೂಲಿ ಮಾಡಲಾಗುತ್ತಿದೆ. ಆದಷ್ಟು ಬೇಗರಸ್ತೆ ಕಾಮಗಾರಿ ಮುಗಿಸಿ ನೆರಳು,ನೀರಿನ ವ್ಯವಸ್ಥೆಮಾಡುವ ಮೂಲಕ 10 ಸಾವಿರದಷ್ಟಿರುವಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸಂಘದಜಿ. ರವಿಕುಮಾರ್, ರಾಮಪ್ಪ, ಅಂಬುಜಮ್ಮ,ಕೆ.ಎಸ್. ಶಿವಕುಮಾರ್, ಹರೀಶ್ ಇತರರುಸುದ್ದಿಗೋಷ್ಠಿ ಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.