![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 17, 2020, 5:51 PM IST
ದಾವಣಗೆರೆ: ವಾಲ್ಮೀಕಿ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅನ್ವಯವಾಗುವಂತೆ ಶೇ.7.5 ಮೀಸಲಾತಿ ಒದಗಿಸಲು ಸರ್ಕಾರದ ವಿಳಂಬ ನೀತಿ ವಿರುದ್ಧ ಮುಂದಿನ ಹೋರಾಟ ಕೈಗೊಳ್ಳುವ ಉದ್ದೇಶದಿಂದ ಅ.18 ರಂದು ನಾಯಕರ ಹಾಸ್ಟೆಲ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಮಧ್ಯಾಹ್ನ 3.30ಕ್ಕೆ ನಡೆಯುವ ಪೂರ್ವಭಾವಿ ಸಭೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಿಲ್ಲಾ ಅಧ್ಯಕ್ಷ ಬಿ. ವೀರಣ್ಣಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಮಿತಿ ಮುಖಂಡರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಇತರರು ಭಾಗವಹಿಸುವರು ಎಂದರು.
ಜನಸಂಖ್ಯೆಗೆ ಅನುಗುಣವಾಗಿಮೀಸಲಾತಿ ಕೇಳುವುದು ಪ್ರತಿಯೊಂದು ಸಮಾಜದ ಸಾಂವಿಧಾನಿಕ ಹಕ್ಕು. ವಾಲೀ¾ಕಿಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕೆಅನ್ವಯವಾಗುವಂತೆ ಶೇ.7.5 ರಷ್ಟುಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯವರನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಯವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಸರ್ಕಾರ ಅ.31 ರ ವಾಲೀ¾ಕಿ ಜಯಂತಿ ಒಳಗೆ ಮೀಸಲಾತಿ ಕುರಿತು ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆಯಂತೆ ಎಲ್ಲಾ ರೀತಿಯ ಹೋರಾಟಕ್ಕೆ ಸಮಾಜ ಸಿದ್ಧ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದಂತಹ ಯಾವುದೇ ಸಮಾಜವೇ ಆಗಲಿ ಮೀಸಲಾತಿ ಕೇಳುವುದು ತಪ್ಪಲ್ಲ. ನಮ್ಮ ಸಮಾಜ ದಂತೆ ಕುರುಬ ಸಮಾಜ ಒಳಗೊಂಡಂತೆ ಇತರೆ ಸಮಾಜ ಮೀಸಲಾತಿ ಕೇಳುವುದಕ್ಕೆ ನಮ್ಮದುಯಾವುದೇ ಆಕ್ಷೇಪ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಆಯಾಯ ಸಮಾಜಗಳಿಗೆ ನೀಡಬಹುದಾದ ಮೀಸಲಾತಿ ನೀಡಲಿ.ವಾಲ್ಮೀಕಿ ಸಮಾಜಕ್ಕೆ ಭರವಸೆ ನೀಡಿರುವಂತೆ ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಶ್ರೀನಿವಾಸ್‌ದಾಸಕರಿಯಪ್ಪ ಮಾತನಾಡಿ, ರಾಜ್ಯದಲ್ಲಿ 70-80 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮಾಜಕ್ಕೆ ಶೇ.7.5 ಮೀಸಲಾತಿ ನೀಡಬೇಕು. ಬೇರೆ ಸಮಾಜದವರು ಕೇಳುವುದಕ್ಕೆ ಸಮಾಜದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲವೇ ಇಲ್ಲ.ಸಮಾಜಕ್ಕೆ ಕೊಡಬೇಕಾದ ಮೀಸಲಾತಿ ಕೊಟ್ಟು, ಬೇರೆ ಸಮಾಜಕ್ಕೂ ನೀಡಬೇಕು ಎಂದು ಒತ್ತಾಯಿಸಿದರು. ಎಂ.ಬಿ. ಹಾಲಪ್ಪ, ವಿನಾಯಕ ಪೈಲ್ವಾನ್, ನಿಟುವಳ್ಳಿ ಲಕ್ಷ್ಮಣ, ಅಣ್ಣಾಪುರ ಹೇಮಣ್ಣ, ಜಿ. ನಾಗರಾಜ್,ಮಂಜುನಾಥ್ ಶ್ಯಾಗಲೆ, ರಾಮಚಂದ್ರ, ಸತೀಶ್, ಶಾಮನೂರು ಪ್ರವೀಣ್ ಇದ್ದರು.
ಬಿ. ಶ್ರೀರಾಮುಲು ಅವರಿಗೆ ಮೊದಲಿಗೆ ತಿಳಿಸದೆ ಏಕಾಏಕಿ ಆರೋಗ್ಯ ಖಾತೆಯನ್ನು ಹಿಂಪಡೆದಿರುವ ಬಗ್ಗೆ ಜಿಲ್ಲಾ ನಾಯಕ ಸಮಾಜಕ್ಕೆ ಅಸಮಾಧಾನ ಇದೆ. ಮೊದಲಿಗೆ ಹೇಳಿ ವಾಪಸ್ ಪಡೆದುಕೊಳ್ಳಬೇಕಾಗಿತ್ತು. ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಮೂರು ವರ್ಷದಿಂದ ಒತ್ತಾಯಿಸಲಾಗುತ್ತಿದೆ. ಈವರೆಗೆ ಮಾಡಿಲ್ಲ. ಸಮಾಜದ ಇಬ್ಬರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಂತಹವರೇ ಅಂತ ಇಲ್ಲ. ಯಾರೇ ಆಗಲಿ ಇಬ್ಬರನ್ನು ಉಪ ಮುಖ್ಯಮಂತ್ರಿಗಳಾಗಿ ಮಾಡಬೇಕು. ಮೀಸಲಾತಿಸಂಬಂಧ ಸ್ವಾಮೀಜಿಯವರು ನೀಡುವ ಆದೇಶದಂತೆ ಎಲ್ಲರೂ ಪಕ್ಷಾತೀತವಾಗಿ ನಡೆದುಕೊಳ್ಳಲು ಸಿದ್ಧ. – ಬಿ. ವೀರಣ್ಣ, ಸಮಾಜದ ಜಿಲ್ಲಾಧ್ಯಕ್ಷರು
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.