ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಕೆ
Team Udayavani, Jun 13, 2020, 7:45 AM IST
ಹರಿಹರ: ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರೈತ ಅನುವುಗಾರರ ಸೇವೆ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ರೈತ ಅನುವುಗಾರರು ಸಹಾಯಕ ಕೃಷಿ ನಿರ್ದೇಶಕ ವಿ.ಪಿ. ಗೋವರ್ಧನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತ ಅನುವುಗಾರ ಕೆ. ಬೇವಿನಹಳ್ಳಿ ಕೆ.ಸಿ. ಪಟೇಲ್ ಮಾತನಾಡಿ, ರೈತ ಅನುವುಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಅನುವುಗಾರರ ಸೇವೆಬೇಡ ಎಂಬ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಈಗಿರುವ ಅನುವುಗಾರರ ಜಾಗದಲ್ಲಿ ಹೊಸಬರನ್ನು ನೇಮಿಸಿಕೊಳ್ಳುವುದಾಗಿ ಸರ್ಕಾರ ನಿರ್ಧರಿಸಿರುವುದು ಆಘಾತ ಮೂಡಿಸಿದೆ. ಹಲವು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕನಿಷ್ಠ ಸೌಲಭ್ಯದೊಂದಿಗೆ ಹತ್ತಾರು ತರಬೇತಿಗಳನ್ನು ಪಡೆದ ಈಗಿನ ಅನುವುಗಾರರ ಕೃಷಿ ಕ್ಷೇತ್ರದ ಜ್ಞಾನ, ತ್ಯಾಗಕ್ಕೆ ಸರ್ಕಾರ ತಿಲಾಂಜಲಿ ಇಟ್ಟಂತಾಗಿದೆ. ಮಾಸಿಕ 10 ಸಾವಿರ ರೂ. ಸಂಬಳದೊಂದಿಗೆ ರಾಜ್ಯದಲ್ಲಿರುವ 6000 ಅನುವುಗಾರರನ್ನು ಕಾಯಂಗೊಳಿಸಬೇಕು ಎಂದರು.
ನಂತರ ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಯಿತು. ರೈತ ಅನುವುಗಾರರಾದ ಉಮೇಶ್ ಆರ್.ಕೆ., ಜಬಿಉಲ್ಲಾ ಭಾನುವಳ್ಳಿ, ಬೆಳ್ಳೂಡಿ ಹಾಲೇಶ್, ಕುಬೇರ ಗೌಡ, ಎಚ್. ಹನುಮಂತಪ್ಪ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.