ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಮೌಢ್ಯಾಚರಣೆಗೆ ಮೊರೆ

Team Udayavani, May 29, 2021, 9:33 AM IST

Untitled-1

ದಾವಣಗೆರೆ: ಒಂದು ಕಡೆ ಕೋವಿಡ್ ಮಹಾಮಾರಿಯಂತೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಕಾಡುತ್ತಿದೆ. ಇನ್ನೊಂದೆಡೆ ಕೋವಿಡ್ ಸೋಂಕಿನಿಂದ ಪಾರಾಗಲು ಜಿಲ್ಲೆಯ ಕೆಲವು ಹಳ್ಳಿಗರು ಮೌಢ್ಯಾಚರಣೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಕೋವಿಡ್ ವೈರಸ್‌ನ್ನೇ “ಕೊರೊನಮ್ಮ’ ಎಂದು ಹೆಸರಿಟ್ಟು ಕಲ್ಲು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದು ತಮ್ಮನ್ನು ಸೋಂಕಿನಿಂದ ಕಾಪಾಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಇನ್ನು ಕೆಲವು ಹಳ್ಳಿಗಳಲ್ಲಿ ಜನರು ಅಶ್ವಥ್‌ ಕಟ್ಟೆ, ಆಲದಕಟ್ಟೆಯಲ್ಲಿ ಕೊರೊನಮ್ಮಳ ಕಟ್ಟಿಗೆ ಮೂರ್ತಿ ಮಾಡಿ ಪೂಜಿಸುತ್ತಿದ್ದಾರೆ. ಗಡಿ ಮಾರಿಯ ರೀತಿಯಲ್ಲಿ ಕೊನೆಗೆ ಅದನ್ನು ಊರ ಗಡಿಯಿಂದ ಹೊರಗೆ ಕಳುಹಿಸುವ ಶಾಸ್ತ್ರವೂ ಮಾಡುತ್ತಿದ್ದಾರೆ. ಹಳ್ಳಿಯನ್ನು ಕೋವಿಡ್ ಮುಕ್ತ ಮಾಡುವಂತೆ ಐದು ದಿನ ನಿರಂತರ ಇಲ್ಲವೇ ಐದು ವಾರ ನಿತ್ಯ ದೀಪ ಹಚ್ಚುವುದು ಸಹ ಹಲವೆಡೆ ನಡೆಯುತ್ತಿದೆ.

ಐದು ಶುಕ್ರವಾರ ಇಲ್ಲವೇ ಐದು ಮಂಗಳವಾರ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲಿ ಹೋಳಿಗೆ, ಅನ್ನ, ಮೊಸರನ್ನ ಮಾಡಿ ಕೊರೊನಮ್ಮ ದೇವಿಗೆ ನೈವೇದ್ಯ ನೀಡುವ ಸಂಪ್ರದಾಯವೂ ನಡೆಯುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಸಾಮೂಹಿಕವಾಗಿ ಕೋಳಿ, ಕುರಿ ಬಲಿಯೂ ನಡೆಯುತ್ತಿದೆ. ಕೋವಿಡ್ ಪ್ರವೇಶಿಸದಂತೆ ಮಧ್ಯ ರಾತ್ರಿ ಗ್ರಾಮದ ಗಡಿಯ ನಾಲ್ಕು ದಿಕ್ಕುಗಳಲ್ಲಿ ವಿಶೇಷ ಪೂಜೆಯನ್ನೂ ಮಾಡಲಾಗುತ್ತಿದೆ.

ಕೈ-ಸೊಂಟಕ್ಕೆ ದಾರ: ಈ ನಡುವೆ ಕೆಲವು ಹಳ್ಳಿಗಳಲ್ಲಿ ಸೊಂಟಕ್ಕೆ ಕವಡೆ ಕಟ್ಟಿಕೊಂಡರೆ ಕೊರೊನಾ ಬರುವುದಿಲ್ಲ. ಕೈಗೆ ಕೆಂಪುವಸ್ತ್ರದಲ್ಲಿ ಕಾಳುಮೆಣಸು ಹಾಕಿ ಕಟ್ಟಿಕೊಂಡರೆ ಕೊರೊನಾ ಬರುವುದಿಲ್ಲ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದ್ದು ಬಹುತೇಕ ಹಳ್ಳಿಗರು ಇದರ ಆಚರಣೆಗೂ ಮುಂದಾಗಿದ್ದಾರೆ. ಇನ್ನು ಕೆಲವು ಹಳ್ಳಿಗರು ಕೊರೊನಮ್ಮಳ ಹೆಸರಲ್ಲಿ ಕೊರಳಿಗೆ, ಕೈಗೆ ಕಪ್ಪು ದಾರ ಕಟ್ಟಿಕೊಂಡಿದ್ದು ತಮಗೆ ಕೋವಿಡ್  ಬರುವುದಿಲ್ಲ ಎಂದು ಸುರಕ್ಷತಾ ಕ್ರಮ ಮೀರಿ ನಡೆಯುತ್ತಿದ್ದಾರೆ.

ಐದು ವಾರ ಪೂಜೆ: ಈ ಮೌಢ್ಯಾಚರಣೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಮಂಗಳವಾರ, ಶುಕ್ರವಾರ ಸಾಮೂಹಿಕವಾಗಿ ಕೊರೊನಮ್ಮಳಿಗೆ ನೈವೇದ್ಯ ಒಪ್ಪಿಸುವುದು, ಮಕ್ಕಳಿಗೆ, ದೊಡ್ಡವರಿಗೆ ಕವಡೆ, ಕಾಳು ಮೆಣಸು ಕಟ್ಟುವುದು ನಡೆಯುತ್ತಲೇ ಇದೆ. ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಜನರು ಮತ್ತೆ ಜನಜಂಗುಳಿಯಾಗಿ ಸೇರುತ್ತಿದ್ದು, ಈ ಆಚರಣೆಗಳು ಕೋವಿಡ್ ಹರಡುವಿಕೆಗೆ ಇನ್ನಷ್ಟು ಇಂಬು ನೀಡುತ್ತಿರುವುದು ಮೌಢ್ಯಾಚರಣೆಯಲ್ಲಿ ಮರೆಯಾಗಿದೆ.

ಕೆಲವು ಹಳ್ಳಿಗಳಲ್ಲಿ ಕೋವಿಡ್ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸಿದ್ದು ಇದರಿಂದ ಭಯಗೊಂಡ ಜನರು, ಇಂಥ ಮೌಢ್ಯಾಚರಣೆಗೆ ಮುಂದಾಗಿದ್ದರೆ, ಇನ್ನು ಕೆಲವು ಹಳ್ಳಿಗಳು ತಮ್ಮ ಗ್ರಾಮಕ್ಕೆ ಕೋವಿಡ್ ವಕ್ಕರಿಸದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ಮೌಢ್ಯಾಚರಣೆಗೆ ಮುಂದಾಗಿವೆ. ಈ ಹಿಂದೆ ಪ್ಲೇಗ್‌, ಕಾಲರಾ, ಮಲೇರಿಯಾದಂಥ ರೋಗಗಳು ಬಂದಾಗಲೂ ಜನರು ಒಂದೊಂದು ರೋಗಕ್ಕೂ ಒಂದೊಂದು ಹೆಸರಿಟ್ಟು ದೇವತೆಗಳನ್ನಾಗಿ ಮಾಡಿ ನೈವೇದ್ಯ ಇಟ್ಟು ಪೂಜಿಸುತ್ತಿದ್ದರು. ತನ್ಮೂಲಕ ತಮ್ಮನ್ನು ರೋಗದಿಂದ ಕಾಪಾಡುವಂತೆ ಇಲ್ಲವೇ ತಮ್ಮ ಊರು ಬಿಟ್ಟು ಹೋಗುವಂತೆ ರೋಗ ದೇವತೆಯನ್ನೇ ಪ್ರಾರ್ಥಿಸುವ ಮೌಡ್ಯ ಜಾರಿಯಲ್ಲಿತ್ತು. ಈಗಿನ ಆಧುನಿಕ ಕಾಲದಲ್ಲಿಯೂ ಜನರು ಇಂಥದ್ದೇ ಮೌಡ್ಯಗಳಿಗೆ ಮೊರೆ ಹೋಗಿರುವುದು ವಿಷಾದನೀಯ ಸಂಗತಿ.

ಸಂಕಷ್ಟದಲ್ಲೂ ಅಪವ್ಯಯ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದರ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಿದೆ. ಲಾಕ್‌ಡೌನ್‌ನಿಂದಾಗಿ ಜನರಿಗೆ ಉದ್ಯೋಗವೂ ಇಲ್ಲ. ಹೊರಗೆ ಓಡಾಡುವಂತೆಯೂ ಇಲ್ಲ. ಹಳ್ಳಿಗಳಲ್ಲಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದ ನಡುವೆಯೂ ಜನರು ಪೂಜೆ, ನೈವೇದ್ಯದಂಥ ಅಂಧಾಚರಣೆಗಾಗಿ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಈ ಮೌಢ್ಯಾಚರಣೆಗಳಿಂದಾಗಿ ಹಳ್ಳಿ ಜನರು ಪರೋಕ್ಷವಾಗಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಖೇದಕರ ಸಂಗತಿ.

ಮೌಢ್ಯಾಚರಣೆ ಬೇಡ ಸಾಮೂಹಿಕವಾಗಿ ಸೇರಿ ಪೂಜೆ ಮಾಡುವುದು, ನೈವೇದ್ಯ ಕೊಡುವುದು,ಬಲಿ ಕೊಡುವುದು ಇಲ್ಲವೇ ಕೊರೊನಾ ಬರದಂತೆ ದಾರ, ಕವಡೆ, ಕಾಳುಮೆಣಸು ಕಟ್ಟಿಕೊಳ್ಳುವ ಮೌಢ್ಯಾಚರಣೆಯಿಂದ ಕೋವಿಡ್  ದಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಸಾಮೂಹಿಕ ಭಾಗವಹಿಸುವಿಕೆಯಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಗ್ರಾಮಸ್ಥರು ಮೌಢ್ಯಾಚರಣೆ ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.  ಡಾ.ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಪಂ ಸಿಇಒ

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.