ನಕಲಿ ಪತ್ರದ ಮೂಲಕ ತೇಜೋವಧೆ
Team Udayavani, Jul 31, 2017, 10:31 AM IST
ದಾವಣಗೆರೆ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡಲು ಒತ್ತಾಯಿಸಿ ಮಾತೆ ಮಹಾದೇವಿಯವರ ಹೋರಾಟ ಸಹಿಸದೆ ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಯವರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಯಕ ದಾಸೋಹ ಮಂಟಪ, ವಚನ ವೇದಿಕೆಯ ಚಂದ್ರಾದೇವಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆಗ ರಂಭಾಪುರಿ ಶ್ರೀ ಮತ್ತು ವೀರಶೈವ ಮಹಾಸಭಾದವರು ವೀರಶೈವ ಲಿಂಗಾಯತ ಎಂದು ಮಾನ್ಯತೆ ನೀಡಲು ಒತ್ತಾಯಿಸಿದರು. ಆಗ ಮುಖ್ಯಮಂತ್ರಿಗಳು ಇಬ್ಬರೂ ಒಮ್ಮತದ ತೀರ್ಮಾನಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದರು. ಅದರಂತೆ ಮಾತೆ ಮಹಾದೇವಿಯವರು ಮತ್ತು ಕೆಲ ಮಠಾಧಿಪತಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಬೃಹತ್ ರ್ಯಾಲಿ ನಡೆಸಿದರು. 2 ಲಕ್ಷ ಜನ ಅಂದಿನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡು ಸಹಿಸದ ರಂಭಾಪುರಿ ಶ್ರೀಗಳು ಮಾತೆ ಮಹಾದೇವಿ ಯವರ ತೇಜೋವಧೆಗೆ ಮುಂದಾದರು. ಮಹಾದೇವಿಯವರ ಘನತೆ ಗೌರಕ್ಕೆ ಧಕ್ಕೆ ಬರುವಂತೆ ಪತ್ರವೊಂದನ್ನು ಸೃಷ್ಟಿಸಿ, ಮಾಧ್ಯಮಗಳಲ್ಲಿ ಹರಿಬಿಟ್ಟರು ಎಂದು ಆರೋಪಿಸಿದರು.
ಪತ್ರದ ಹಿಂದಿನ ಉದ್ದೇಶ ಪೂಜ್ಯ ಮಾತೆ ಯವರ ಗೌರವಕ್ಕೆ ಧಕ್ಕೆ ತರುವಂತಹದ್ದಾಗಿದೆ. ಮಾತೆ ಮಹಾದೇವಿ ಬಸವಣ್ಣನವರ ಕುರಿತು 200 ಪುಸ್ತಕ ಬರೆದು, ಪ್ರವಚನಗಳ ಮೂಲಕ ಗುರು ಬಸವಣ್ಣನವರ ಭವ್ಯ ವ್ಯಕ್ತಿತ್ವವನ್ನು ಪ್ರಪಂಚಾದ್ಯಂತ ಸಾರಿದರು. ಮಾತೆಯವರನ್ನರು ಅವಮಾನಿಸಿದ ರಂಭಾಪುರಿ ಶ್ರೀಗಳು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವೀಣಾ ಮಂಜುನಾಥ, ಎಂ. ಲತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.