ಮನೆಯಂತೆ ಸಭೇಲಿ ಮಾತಾಡಿ: ಶಿವಶಂಕರಪ್ಪನವರಿಗೆ ಸಿದ್ದೇಶ್ವರ್‌ ತಾಕೀತು


Team Udayavani, Jul 4, 2017, 2:25 PM IST

davngere-4.jpg

ದಾವಣಗೆರೆ: ಶಾಮನೂರು ಶಿವಶಂಕಪ್ಪನವರೇ, ನಿಮಗೆ ವಯಸ್ಸಾಗಿದೆ. ಮನೆಯಲ್ಲಿ ಮಾತನಾಡಿದಂತೆ ಬಹಿರಂಗ
ಸಭೆಯಲ್ಲಿ ಮಾತನಾಡುವ ಮೂಲಕ ಸತ್ಯ ಸಮಾಧಿ ಮಾಡಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದ್ದಾರೆ.

ಸೋಮವಾರ ಯುಜಿ ಕೇಬಲ್‌ ಕಾಮಗಾರಿ ಚಾಲನೆ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪನವರು ತಮ್ಮ ಭಾಷಣ ಪ್ರಸ್ತಾಪಿಸಿದ ವಿಷಯಕ್ಕೆ ಸಂಜೆ ಪತ್ರಿಕಾ ಹೇಳಿಕೆ ಮೂಲಕ ಉತ್ತರ ಕೊಟ್ಟಿರುವ ಅವರು, ಜಿಲ್ಲೆಯ ವಿದ್ಯುತ್‌
ಕಾಮಗಾರಿಗಳಿಗೆ ಬಿಡುಗಡೆ ಆಗಿರುವ 120 ಕೋಟಿ ರೂ. ಅನುದಾನದಲ್ಲಿ ಶೇ.60 ರಷ್ಟು ಪಾಲು ಕೇಂದ್ರ ಸರ್ಕಾರದ್ದು. ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಹೊನ್ನಾಳಿ, ಹರಿಹರ, ಚನ್ನಗಿರಿ, ಜಗಳೂರು, ಹರಪನಹಳ್ಳಿ ಪಟ್ಟಣಗಳಿಗೆ 102 ಕೋಟಿ, ಹಾಗೂ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಕಾಮಗಾರಿಗೆ 20 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಶೇ.60ರಷ್ಟು ಪಾಲು ಕೇಂದ್ರ ಸರ್ಕಾರದ್ದು. ಇದನ್ನು ಸರಿಯಾಗಿ ತಿಳಿದುಕೊಳ್ಳದೇ ದಾವಣಗೆರೆ ದಕ್ಷಿಣ ವಿಧಾನಸಭಾ
ಕ್ಷೇತ್ರದ ಶಾಸಕರು ಇದು ರಾಜ್ಯ ಸರ್ಕಾರದ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಬಿಡುಗಡೆಯಾಗಿರುವ ವಿದ್ಯುತ್‌ ಕಾಮಗಾರಿಗಳಿಗೆ 120 ಕೋಟಿ ಅನುದಾನದ ಕ್ರಿಯಾ
ಯೋಜನೆಗೆ 2016ರ ಸೆಪ್ಟಂಬರ್‌ 20ರಂದು ನಡೆದ ಜಿಲ್ಲಾ ವಿದ್ಯುತ್‌ ಸಮಿತಿ ಸಭೆಯಲ್ಲಿ ಸಮಿತಿ ಚೇರ್‌
ಮನ್‌ ಆಗಿ ಅನುಮೋದನೆ ನೀಡಿರುವುದು ನಾನೇ ವಿನಹ, ಶಾಮನೂರು ಶಿವಶಂಕರಪ್ಪನವರೇ ನೀವಲ್ಲ. ನಿಮಗೆ ಮಾಹಿತಿ ಸರಿಯಾಗಿ ಗೊತ್ತಿಲ್ಲದಿದ್ದರೆ ಅಧಿಕಾರಿಗಳನ್ನು ಕೇಳಿ ತಿಳಿದುಕೊಳ್ಳಿ. ಬಾಯಿ ಚಪಲಕ್ಕೆ ಏನೇನೋ ಮಾತನಾಡಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ಶಿವಶಂಕರಪ್ಪನವರೇ ನಿಮಗೆ ವಯಸ್ಸಾಗಿದೆ ನಿಜ. ಮನೆಯಲ್ಲಿ ಏನೇನೋ ಮಾತನಾಡಿದರೆ ನಡೆಯುತ್ತದೆ, ಬಹಿರಂಗ ಸಭೆಗಳಲ್ಲಿ ಮಾತನಾಡುವಾಗ ಸತ್ಯ ಸಮಾಧಿ ಮಾಡಲು ನೋಡಬೇಡಿ, ಕೇವಲ ರಾಜಕೀಯ ಹಿತಸಾಕ್ತಿಗೆ
ಸತ್ಯವನ್ನು ಮರೆಮಾಚುವುದು ಎಷ್ಟು ಸರಿ? ಜನರಿಗೆ ಸತ್ಯ ತಿಳಿಸಿ. ಕಳೆದ 30 ವರ್ಷಗಳಿಂದ ದಾವಣಗೆರೆ ಜನ ನೀವು ಹೇಳಿದ್ದನ್ನೇ ನಂಬುತ್ತಾ ಬಂದಿದ್ದಾರೆ ಎಂದು ಸಿದ್ದೇಶ್ವರ್‌ ಹೇಳಿದ್ದಾರೆ. 

ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಎಷ್ಟು ಅನುದಾನ ಕೇಂದ್ರ ಸರ್ಕಾರದ್ದಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ಪಿ.ಬಿ. ರಸ್ತೆಯ ಅಭಿವೃದ್ದಿ ಕಾಮಗಾರಿಯಲ್ಲಿ ಕೇಂದ್ರ ರಸ್ತೆ ನಿಧಿ  ಅನುದಾನ ಎಷ್ಟಿದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-hak

ಕೊಡವ ಕೌಟುಂಬಿಕ ಹಾಕಿಗೆ ಸರಕಾರದಿಂದ 1 ಕೋ. ರೂ.

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.