ಬಿಸಿಲಿಗೆ ಬಳಲಿ ಬೆಂಡಾದ ಬೆಣ್ಣೆನಗರಿ ಜನ

ಹೆಚ್ಚುತ್ತಿರುವ ತಾಪಮಾನಕ್ಕೆ ತತ್ತರಿಸಿದ ಜನಜೀವನ

Team Udayavani, Apr 7, 2022, 3:14 PM IST

majjige

ದಾವಣಗೆರೆ: ಜಿಲ್ಲೆಯಲ್ಲಿ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಜನರು ನಾನಾ ರೀತಿಯ ಕ್ರಮಗಳತ್ತ ಚಿತ್ತ ಹರಿಸಿದ್ದಾರೆ.

ಸೋಮವಾರ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಮುಂದಿನ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗುರುವಾರ ಮಾತ್ರ ತಾಪಮಾನ 39 ಡಿಗ್ರಿಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‌ ಮೂರನೇ ವಾರದಿಂದ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಿಗ್ಗೆ 11 ಗಂಟೆಯಾಗುತ್ತಲೇ ಸೂರ್ಯ ತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಿದ್ದು, ಮಧ್ಯಾಹ್ನ 12ರಿಂದ ನಾಲ್ಕು ಗಂಟೆ ಅವಧಿಯಲ್ಲಿನ ಓಡಾಟ ಮಹಿಳೆ, ವೃದ್ಧರು, ಮಕ್ಕಳಾದಿಯಾಗಿ ಎಲ್ಲರಿಗೂ ಕಷ್ಟವಾಗುತ್ತಿದೆ. ಒಂದು ಕಡೆ ಬಿಸಿಲಿಗೆ ಕಾದು ಕೆಂಡದಂತಾದ ಕಾಂಕ್ರಿಟ್‌ ರಸ್ತೆಯ ಉಗಿ, ಇನ್ನೊಂದೆಡೆ ಮೇಲಿನ ಸುಡುಬಿಸಿಲು. ಈ ನಡುವೆ ಕೆಲವರು ಕೊಡೆ, ಟೋಪಿ ಬಳಸಿದರೆ, ಮತ್ತೆ ಕೆಲವರು ಆಟೋರಿಕ್ಷಾ ಪ್ರಯಾಣಕ್ಕೆ ಮೊರೆ ಹೋಗುತ್ತಿದ್ದಾರೆ.

ಬಿಸಿಲಿನಿಂದಾಗಿ ಜನರ ನೀರಿನ ದಾಹ ತೀರದಾಗಿದ್ದು ನೀರಿನ ಬಾಟಲಿಗಳ ವ್ಯಾಪಾರ ಜೋರಾಗಿದೆ. ದೇಹವನ್ನು ತಂಪುಗೊಳಿಸಲು ಜನರು ಹಣ್ಣಿನ ರಸ, ಐಸ್‌ಕ್ರೀಮ್‌, ಮಜ್ಜಿಗೆ, ಎಳನೀರಿಗೆ ಮೊರೆಹೋಗುತ್ತಿದ್ದಾರೆ, ಹಾಗಾಗಿ ಇವುಗಳ ಮಾರಾಟ ಭರಪೂರ ನಡೆಯುತ್ತಿದೆ. ಇದರ ಜತೆಗೆ ಕಲ್ಲಂಗಡಿ, ಕರಬೂಜ ಹಣ್ಣುಗಳ ಖರೀದಿಗೂ ಮುಂದಾಗಿದ್ದಾರೆ. ಮನೆ, ಕಚೇರಿ, ಅಂಗಡಿಗಳಲ್ಲಿಯೂ ಬಿಸಿಲಿನ ಕಾವು ಹೆಚ್ಚಾಗಿದ್ದು, ಹಗಲು-ರಾತ್ರಿ ಗಾಳಿ ಪಂಕ ತಿರುತ್ತಲೇ ಇವೆ. ವಿದ್ಯುತ್‌ ಹೋದರಂತೂ ಕೆಲವರಿಗೆ ಜೀವವೇ ಹೋದ ಅನುಭವವಾಗುತ್ತಿದೆ. ಆಗ ಜನರು ಮನೆಯಿಂದ ಹೊರಗೆ ಬಂದು ಗಾಳಿಯ ನಿರೀಕ್ಷೆಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

ಮಕ್ಕಳಿಗೂ ಸಮಸ್ಯೆ

ಚಿಕ್ಕ ಮಕ್ಕಳಿಗೆ ಶಾಲೆ ರಜೆ ನೀಡಲಾಗಿದ್ದು, ಸದಾ ರಸ್ತೆ, ಮೈದಾನದಲ್ಲಿ ಆಟ ಆಡುತ್ತಿದ್ದ ಮಕ್ಕಳಿಗೆ ಈ ಬಿಸಿಲು ಮನೆಯಲ್ಲೇ ಕಟ್ಟಿ ಹಾಕಿದೆ. ಬಿಸಿಲಿನ ಕಾರಣದಿಂದ ಪಾಲಕರು ಮಕ್ಕಳನ್ನು ಹೊರಗೆ ಕಳುಹಿಸದೇ ಇರುವುದರಿಂದ ಮಕ್ಕಳು ಮನೆಯೊಳಗೇ ಸೆಕೆಯ ನಡುವೆಯೇ ಆಟ ಆಡಿಕೊಂಡಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಮಕ್ಕಳು ರಾತ್ರಿ 9-10 ಗಂಟೆಗೆ ಮನೆಯಿಂದ ಹೊರಬಂದು ತಂಪು ವಾತಾವರಣದಲ್ಲಿ ಬೀದಿದೀಪದ ಬೆಳಕಲ್ಲಿ ಆಟವಾಡಿ ಖುಷಿಪಡುತ್ತಿದ್ದಾರೆ. ಬೈಕ್‌ ಸವಾರರಂತೂ ಸೆಕೆಯಲ್ಲೇ ಹೆಲ್ಮೆಟ್‌ ಹಾಕಿಕೊಂಡು ಬೆವರೊರೆಸಿಕೊಳ್ಳುವ ದೃಶ್ಯಗಳು ಕಂಡು ಬರುತ್ತಿವೆ.

ಬಿಸಿಲಿನಿಂದ ಜನರಿಗೆ ಆಗುವ ದಾಹ ತೀರಿಸಲು ಹತ್ತು ಹಲವು ಸಂಘ-ಸಂಸ್ಥೆಗಳು ಉಚಿತ ಮಜ್ಜಿಗೆ, ನೀರು ವಿತರಿಸುವ ಕಾರ್ಯಕ್ರಮಗಳನ್ನು ಮಹಾನಗರದ ಹಲವೆಡೆ ಹಮ್ಮಿಕೊಂಡಿವೆ. ಕೆಲವು ಅಂಗಡಿಕಾರರು, ಆಟೋರಿಕ್ಷಾದವರು ಜನರಿಗಾಗಿ ತಮ್ಮಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಜಲಸೇವೆ ಮಾಡುತ್ತಿದ್ದು ಎಲ್ಲ ಪ್ರಶಂಸೆಗೆ ಪಾತ್ರವಾಗಿದೆ.

ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಜನರು ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಹಣ್ಣಿನ ವ್ಯಾಪಾರ ಈ ವಾರದಿಂದ ಜೋರಾಗಿದೆ. ಕಲ್ಲಂಗಡಿ, ಕರಬೂಜ, ತಾಳೆಹಣ್ಣನ್ನು ಜನ ಹೆಚ್ಚು ಖರೀದಿಸುತ್ತಿದ್ದಾರೆ. – ರಫೀಕ್‌, ಹಣ್ಣಿನ ವ್ಯಾಪಾರಿ

ದಾವಣಗೆರೆಯಲ್ಲಿ ಈ ವರ್ಷ ಈವರೆಗೆ ಒಮ್ಮೆಯೂ ದೊಡ್ಡ ಮಳೆಯಾಗಿಲ್ಲ. ಮಳೆಯಾಗಿದ್ದರೆ ಭೂಮಿ ತಂಪಾಗುತ್ತಿತ್ತು. ಮಳೆಯಾಗದೆ ಇರುವುದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಏನು ಮಾಡಿದರೂ ನೆಮ್ಮದಿ ಸಿಗುತ್ತಿಲ್ಲ.- ನಿರಂಜನ ಟಿ., ನಾಗರಿಕ

ಟಾಪ್ ನ್ಯೂಸ್

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

2-kambala

Moodbidri: ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆ: ನಿಯಮ ಉಲ್ಲಂಘಿಸಿದರೆ ನಿಷೇಧ

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನಗಳು, ರೈಲು ಸಂಚಾರದ ಮೇಲೆ ಪರಿಣಾಮ

Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

2-kambala

Moodbidri: ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆ: ನಿಯಮ ಉಲ್ಲಂಘಿಸಿದರೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.