ಅಂತೂ ಶುರುವಾಯ್ತು ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗದ ಕಾಮಗಾರಿ
Team Udayavani, Jul 31, 2017, 10:59 AM IST
ದಾವಣಗೆರೆ: ಮಹಾನಗರ ಪಾಲಿಕೆಯ ನೀರು ಸರಬರಾಜು ಕೇಂದ್ರಕ್ಕೆ ತಡೆರಹಿತ ವಿದ್ಯುತ್ ಪೂರೈಕೆಗೆ ಎಕ್ಸ್‌ಪ್ರೆಸ್ ಫಿಡರ್ (66ಕೆವಿ) ಮಾರ್ಗ ನಿರ್ಮಾಣ, ವಿತರಣಾ ಕೇಂದ್ರ ನಿರ್ಮಾಣ ಕಾರ್ಯ ಇದೀಗ ಆರಂಭ ಆಗಿದೆ. 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಗರೋತ್ಥಾನ ಯೋಜನೆ ಅಡಿ ಅನುದಾನ ಬಿಡುಗಡೆಗೊಳಿಸಿದ್ದು, ಕೆಪಿಟಿಸಿಎಲ್ ಕಾಮಗಾರಿ ಆರಂಭ ಮಾಡಿದೆ. ಈಗಿರುವ ವಿದ್ಯುತ್ ಮಾರ್ಗದಿಂದಾಗಿ ಆಗಿಂದಾಗ್ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದ್ದು, ಎಕ್ಸ್‌ಪ್ರೆಸ್ ಮಾರ್ಗದಿಂದ ಈ ಸಮಸ್ಯೆ ದೂರಾಗಲಿದೆ.
ಸದ್ಯ ರಾಜನಹಳ್ಳಿ ನೀರು ಸರಬರಾಜು ಕೇಂದ್ರದಿಂದ ಜಾಕ್‌ವೆಲ್ ಮೂಲಕ ನದಿಯಿಂದ ನೀರೆತ್ತಿ ದೊಡ್ಡ ಬಾತಿ ನೀರು ಶುದೀœಕರಣ ಘಟಕಕ್ಕೆ ಪೂರೈಸಲಾಗುವುದು. ಅಲ್ಲಿ ಶುದೀœಕರಣಗೊಂಡ ನೀರು ಗುಡ್ಡದ ಮೇಲಿರುವ ಪಾಲಿಕೆಯ ನೀರು ಸಂಗ್ರಹಗಾರಕ್ಕೆ ಮತ್ತೆ ಪಂಪ್ ಮಾಡಲ್ಪಡುತ್ತದೆ. ಇನ್ನೊಂದು ಪೈಪ್ ಲೈನ್ ಮೂಲಕ ನದಿಯಿಂದ ನೀರು ಎತ್ತಿ ಕುಂದುವಾಡ ಕೆರೆಗೆ ನೀರು ಹರಿಸಲಾಗುತ್ತಿದೆ. ಬಾತಿ ಗುಡ್ಡದ ಮೇಲೆ ನಿರ್ಮಾಣ ಮಾಡಿರುವ ನೀರಿನ ಸಂಗ್ರಹಗಾರದಿಂದ ಯಾವುದೇ ಪಂಪ್ ಇಲ್ಲದೇ ನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೇರ ನೀರು ತುಂಬಿಸಲಾಗುತ್ತದೆ.
ಈ ರೀತಿ ಮಾಡುವಾಗ ಒಮ್ಮೆ ವಿದ್ಯುತ್ ಕಡಿತವಾದಲ್ಲಿ ಕನಿಷ್ಠ ಮೂರು ತಾಸುಗಳ ಕಾಲ ನೀರೆತ್ತುವುದು ಸ್ಥಗಿತ ಆಗುತ್ತಿತ್ತು. ಇದಕ್ಕೆ ಕಾರಣ ಬಾತಿ ಗುಡ್ಡದ ಮೇಲಕ್ಕೆ ನೀರು ರವಾನಿಲು ಜಾಕ್‌ವೆಲ್ ಬಳಕೆ ಮಾಡಲಾಗುತ್ತದೆ. ಒಮ್ಮೆ ನೀರು ಹರಿಯುವುದು ನಿಂತರೆ ನೀರು ಅಲ್ಲಿ, ಪೈಪ್‌ಲೈನ್‌ನಲ್ಲಿನ ನೀರು ವಾಪಸ್ ಬರುತ್ತದೆ. ಜೊತೆಗೆ ಮತ್ತೆ ಪಂಪ್ ಆರಂಭಿಸಿದರೆ ಮತ್ತೆ ಗುಡ್ಡದ ಮೇಲಿನ ಸಂಗ್ರಹಗಾರಕ್ಕೆ ನೀರು ಹರಿಯಬೇಕಾದರೆ ಮತ್ತೆ ಮೂರು ತಾಸುಗಳ ಕಾಲ ಕಾಯಬೇಕಿತ್ತು. ಈ ಸಮಸ್ಯೆ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗದಿಂದ ನಿವಾರಣೆ ಆಗಲಿದೆ.
18 ಕೋಟಿ ರೂ. ವೆಚ್ಚ
ಪ್ರಸ್ತುತ ನಿರ್ಮಾಣ ಮಾಡಲಾಗುತ್ತಿರುವ ಎಕ್ಸ್‌ಪ್ರೆಸ್ ಫಿಡರ್ ವೇ, ವಿತರಣಾ ಕೇಂದ್ರ ನಿರ್ಮಾಣಕ್ಕೆ 17.80 ಕೋಟಿ ರೂ. ನಿಗದಿಪಡಿಸಾಗಿದೆ. ರಾಜನಹಳ್ಳಿ, ದೊಡ್ಡ ಬಾತಿಯಲ್ಲಿ ವಿತರಣಾ ಕೇಂದ್ರ ಸ್ಥಾಪನೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜನಹಳ್ಳಿಗೆ ಹರಿಹರದ ಬಳಿಯ
ಹೊಸಪೇಟೆಯ ವಿದ್ಯುತ್ ಪ್ರಸರಣಾ ಕೇಂದ್ರದಿಂದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುವುದು. ಒಟ್ಟು 9 ಕಿಮೀ ದೂರದ ವಿದ್ಯುತ್ ಮಾರ್ಗ ನಿರ್ಮಾಣ ಆಗಲಿದೆ. ಇನ್ನು ದೊಡ್ಡ ಬಾತಿಗೆ ಹರಿಹರದ ವಿದ್ಯುತ್ ವಿತರಣಾ ಕೇಂದ್ರದಿಂದ ಮಾರ್ಗ ನಿರ್ಮಾಣ ಮಾಡಲಾಗುವುದು. 4.8 ಕಿಮೀ ದೂರದ ಮಾರ್ಗ ಇಲ್ಲಿ ನಿರ್ಮಾಣ ಆಗಲಿದೆ.
ಮೊದಲ ಅಂದಾಜು 8 ಕೋಟಿ ರೂ.
ಈ ಮೊದಲೇ ಎಕ್ಸ್‌ಪ್ರೆಸ್ ಫಿಡರ್ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಮೊದಲು ಯೋಜನೆ ಅಂದಾಜು ಪಟ್ಟಿ ತಯಾರಿಸಿದಾಗ 8 ಕೋಟಿ ರೂ.ಗಳ ಅಂದಾಜಿತ್ತು. ಆದರೆ, ಕಾಮಗಾರಿ ಆರಂಭ ಆಗಲೇ ಇಲ್ಲ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಾಗ ಮತ್ತೆ ಎಕ್ಸ್‌ಪ್ರೆಸ್ ಫಿಡರ್ ಮಾರ್ಗ ನಿರ್ಮಾಣದ ಯತ್ನ ಮಾಡಲಾಯಿತು. ಆಗ 10 ಕೋಟಿ ರೂ. ಅಂದಾಜು ವೆಚ್ಚದ ತಯಾರಿಸಲಾಗಿತ್ತು. ಆಗಲೂ ಕಾಮಗಾರಿ ಆರಂಭ ಆಗಲಿಲ್ಲ. ಇದೀಗ 8 ಕೋಟಿ ರೂ. ಅಧಿಕ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಂತಾಗಿದೆ.
ಸಿಂಹಪಾಲು ನೀರು
ನಗರಕ್ಕೆ ಬೇಕಾಗುವ ನೀರಿನ ಸಿಂಹಪಾಲು ಸರಬರಾಜಾಗುವುದು ರಾಜನಹಳ್ಳಿ ಕೇಂದ್ರದಿಂದ. ರಾಜನಹಳ್ಳಿ ಕೇಂದ್ರದಿಂದ ಪ್ರತಿನಿತ್ಯ 40-50 ಎಂಎಲ್‌ಡಿ ನೀರು ಪೂರೈಸಲಾಗುತ್ತದೆ. ನಗರಕ್ಕೆ ಪೂರೈಸುವ ನೀರಿನ ಶೇ.75ರಷ್ಟು ಪ್ರಮಾಣ ಇಲ್ಲಿಂದಲೇ ಸರಬರಾಜು ಆಗುತ್ತದೆ. ಕಳೆದ ವರ್ಷದಿಂದ ಕುಂದುವಾಡ ಕೆರೆಗೂ ಸಹ ನೇರ ನದಿಯಿಂದ ನೀರು ಹರಿಸಲಾಗುತ್ತಿದೆ. ಮುಂದೆ ದೂರದರ್ಶನ ಕರೆ, ಆವರಗೆರೆ ಕೆರೆಗೂ ಸಹ ಇಲ್ಲಿಂದಲೇ ನೀರು ಹರಿಸುವ ಪ್ರಸ್ತಾವನೆ ಪಾಲಿಕೆ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.