ಪ್ರಾಧಿಕಾರಕ್ಕೆ ಬೇಕಿದೆ ಪ್ರತ್ಯೇಕ ತನಿಖಾ ತಂಡ
Team Udayavani, Jul 29, 2017, 9:20 AM IST
ದಾವಣಗೆರೆ: ದೂರುಗಳ ಪ್ರಾಧಿಕಾರಕ್ಕೆ ಪ್ರತ್ಯೇಕ ತನಿಖಾ ತಂಡ ರಚನೆ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಎ.ಎಸ್. ಪಚ್ಚಾಪುರೆ ತಿಳಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವಕೀಲರ ಸಭಾಂಗಣದಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಧಿಕಾರಕ್ಕೆ ಬರುವ ಗಂಭೀರ ದುರ್ನಡತೆ ದೂರುಗಳ ಬಗ್ಗೆ ತನಿಖೆಗಾಗಿಯೇ ಪ್ರತ್ಯೇಕ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ದೇಶದ ಆಂತರಿಕ ಭದ್ರತೆ ಒದಗಿಸುತ್ತಿರುವ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಲಪಡಿಸುವ ಮಹತ್ತರ ಉದ್ದೇಶದಿಂದ 1961ರ ಪೊಲೀಸ್ ಕಾಯ್ದೆಗೆ ತಿದ್ದಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1978ರಲ್ಲಿ ರಚಿಸಿದ್ದ ಸಮಿತಿ 1981ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. 1996ರ ವರೆಗೆ ವರದಿ ಹಾಗೆಯೇ ಇತ್ತು. 1996ರಲ್ಲಿ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸರ್ವೋತ್ಛ ನ್ಯಾಯಾಲಯ ವರದಿ ಅನುಷ್ಠಾನಕ್ಕೆ ನಿರ್ದೇಶಿಸಿತು. ಹಾಗಾಗಿಯೇ ಕರ್ನಾಟಕದಲ್ಲಿ 2012ರಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮೇಲ್ಪಟ್ಟು ಮಹಾ ನಿರೀಕ್ಷಕ, ಮಹಾ ನಿರ್ದೇಶಕವರೆಗಿನ ಅಧಿಕಾರಿಗಳ ವಿರುದ್ಧದ ಗಂಭೀರ ದುರ್ನಡತೆಯ ಬಗೆಗಿನ ದೂರುಗಳ ಬಗ್ಗೆ ರಾಜ್ಯ, ಡಿವೈಎಸ್ಪಿಯಿಂದ ಪೇದೆಯ ವರೆಗಿನ ವಿರುದ್ಧ ಸಾಮಾನ್ಯ ಮತ್ತು ಗಂಭೀರ ದುರ್ನಡತೆಯ ಬಗೆಗಿನ ದೂರುಗಳ ಬಗ್ಗೆ ಜಿಲ್ಲಾ ಪ್ರಾಧಿಕಾರ ವಿಚಾರಣೆ ನಡೆಸಿ, ಶಿಸ್ತುಕ್ರಮ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಹಾಗಾಗಿ ಕೆಲವರು ಪ್ರಾಧಿಕಾರ ಹಲ್ಲಿಲ್ಲದ ಹಾವು ಇದ್ದಂತೆ… ಎನ್ನುವುದುಂಟು.
ಆದರೂ, ನಾವು ಒಂದೊಮ್ಮೆ ಗಂಭೀರ ದುರ್ನಡತೆ ತೋರಿದರೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿಯಾದರೂ ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಲಾಕಪ್ ಡೆತ್, ಲಾಕಪ್‌ನಲ್ಲಿ ನಡೆಯಬಹುದಾದ ಅತ್ಯಾಚಾರ, ಅಮಾಯಕರ ಬಂಧನ… ಒಳಗೊಂಡಂತೆ ನಾಲ್ಕು ನಡಾವಳಿಯನ್ನು ಗಂಭೀರ ದುರ್ನಡತೆ ಎಂದು ಪರಿಗಣಿಸಲಾಗುತ್ತದೆ. ಸಾರ್ವಜನಿಕರು ನೀಡುವ ದೂರುಗಳ ಜೊತೆಗೆ ಸ್ವಯಂ ಪ್ರೇರಿತವಾಗಿ ದೂರು ದಾಖೀಲಿಸಿಕೊಳ್ಳುವ
ಅಧಿಕಾರವೂ ಪ್ರಾಧಿಕಾರಕ್ಕೆ ಇದೆ.ಪ್ರಾಧಿಕಾರಕ್ಕೆ ಬರುವ ದೂರುಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಂದಲೇ ತನಿಖೆ ಕೈಗೊಳ್ಳುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡದ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ 11 ದೂರುಗಳು ಬಂದಿವೆ. ಮಂಗಳೂರಿನಲ್ಲಿ ಅತಿ ಹೆಚ್ಚಿನ ದೂರು ಬಂದಿವೆ. ಪ್ರಾಧಿಕಾರದ ಬಗ್ಗೆ ಪೊಲೀಸರು ಗಾಬರಿಯೇನೂ ಪಡಬೇಕಿಲ್ಲ. ಪೊಲೀಸ್ ಇಲಾಖೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸದೃಢಗೊಳಿಸುವ ಉದ್ದೇಶದಿಂದಲೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವಂತಾದರೆ ಸದೃಢ ಸಮಾಜ ನಿರ್ಮಾಣ ಮಾಡಬಹುದು. ಸ್ವತಂತ್ರವಾಗಿ ಕೆಲಸ ಮಾಡುವುದು ನಿರಕುಂಶಕ್ಕೆ ಎಡೆಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬಳೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ದೂರು ಬಂದಿವೆ. ದಾವಣಗೆರೆ ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಕಡಿಮೆ ದೂರು ಇವೆ. ಹಾವೇರಿಯಲ್ಲಿ ಒಂದೂ ಒಂದು ದೂರು ಬಂದಿಲ್ಲ. ನಾವೆಲ್ಲರೂ ಸೇರಿಕೊಂಡು
ಭಯಮುಕ್ತ ಸಮಾಜ ನಿರ್ಮಾಣ ಆಂದೋಲನದ ಯಶಸ್ಸು ಮಾಡೋಣ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿದರು. 1ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಸದಲಗಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಚ್. ಸಿದ್ದಪ್ಪ ಲೋಕಿಕೆರೆ, ಈಶ್ವರೀಯ ವಿಶ್ವ ವಿದ್ಯಾಲಯದ ಪದ್ಮಕ್ಕ ಇತರರು ಇದ್ದರು. ಹೇಮಂತ್‌ಕುಮಾರ್ ಪ್ರಾರ್ಥಿಸಿದರು. ಎಲ್. ಶ್ಯಾಂ ನಿರೂಪಿಸಿದರು.
ಬದಲಾಗಲಿ ಪೊಲೀಸರ ನಡವಳಿಕೆ….
ಪೊಲೀಸರ ನಡವಳಿಕೆ ಬಗ್ಗೆ ಜನಸಾಮಾನ್ಯರ ದೂರು, ಆಕ್ಷೇಪ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಠಾಣೆಗೆ ಹೋಗಿದ್ದ ಜಿಲ್ಲಾ ನ್ಯಾಯಾಧೀಶರನ್ನೇ ಸೌಜನ್ಯ ಮರೆತು ಮಾತನಾಡಿಸುವುದೆಂದರೆ. ಇಂತಹ ಘಟನೆ ಕುರಿತು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಂ. ಶ್ರೀದೇವಿ ಅವರೇ ತಮಗಾದ ಅನುಭವವನ್ನು ಸಭಿಕರ ಮುಂದೆ ಬಿಟ್ಟಿಟ್ಟರು. ಜಿಲ್ಲಾ ನ್ಯಾಯಾಧೀಶರು ಒಮ್ಮೆ ಪೊಲೀಸ್ ಠಾಣೆಗೆ ಯಾವುದೇ ಸುಳಿವು ನೀಡದೆ, ಸಮವಸ್ತ್ರ(ಕೋಟ್) ಧರಿಸದೇ, ತಮ್ಮ ಸಿಬ್ಬಂದಿ ಇಲ್ಲದೆ ಹೋಗಿದ್ದರಂತೆ. ಹಾಗೆಯೇ ಠಾಣೆಯಲ್ಲಿ ಅದು-ಇದು ಪರಿಶೀಲಿಸುತ್ತಿದ್ದನ್ನು ಕಂಡ ಅಲ್ಲಿನ ಸಿಬ್ಬಂದಿ, ಯಾರಮ್ಮ ನೀನು, ಏನೇನೋ ನೋಡುತ್ತಿದೀªಯ. ಅಲ್ಲಿ ಕುಳಿತಿಕೋ… ಎಂದು ಸ್ವಲ್ಪ ಏರು ದ್ವನಿಯಲ್ಲಿ ಹೇಳಿದರಂತೆ. ಕೋರ್ಟ್ ಡ್ನೂಟಿ ಮಾಡುವ ಪಿಸಿ ಅವರನ್ನು ಗುರುತಿಸಿ, ಅವರ ಪರಿಚಯ ಹೇಳಿದ ತಕ್ಷಣ ಅಲ್ಲಿದ್ದ ಇಡೀ ಸಿಬ್ಬಂದಿಯ ವರ್ತನೆಯೇ ಬದಲಾಯಿತಂತೆ.ಪೊಲೀಸರು ನಮ್ಮಂತವರನ್ನೇ ಈ ರೀತಿ ಮಾತನಾಡಿಸುತ್ತಾರೆ ಎಂದರೆ ಹೇಗೆ. ಯಾರೇ ಆಗಲಿ ಠಾಣೆಗೆ ಬಂದಾಗ, ಗೌರವಯುತವಾಗಿ ಮಾತನಾಡಿಸುವಂತಾಗಬೇಕು ಎಂದು ವೇದಿಕೆಯಲ್ಲೇ ಇದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್‌ಗೆ ತಾಕೀತು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.