ಶಿಕ್ಷಣ-ಸಂಘಟನೆ ಮೂಲ ಮಂತ್ರವಾಗಲಿ: ಸೈಯದ್
Team Udayavani, Aug 7, 2017, 3:14 PM IST
ದಾವಣಗೆರೆ: ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನದಾಫ್, ಪಿಂಜಾರ್‌ನಂತಹ ದೊಡ್ಡ ಸಮಾಜದಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಅಧ್ಯಕ್ಷ ಸೈಯದ್ ಸೈಫುಲ್ಲಾ ಸಲಹೆ ನೀಡಿದ್ದಾರೆ.
ಭಾನುವಾರ ನದಾಫ್/ಪಿಂಜಾರ ಸಂಘದಿಂದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅತಿ ದೊಡ್ಡ ಸಮಾಜವಾಗಿರುವ ನದಾಫ್, ಪಿಂಜಾರ್ ಸಮಾಜ ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಆದರೆ, ಸಂಘಟನೆ, ಹೊಂದಾಣಿಕೆ ಕೊರತೆಯಿಂದ ರಾಜಕೀಯ ಅಧಿಕಾರ, ಇತರೆ ಸೌಲಭ್ಯ ಪಡೆಯುವಲ್ಲಿ ಹಿಂದುಳಿಯುತ್ತಿದೆ ಎಂದರು.
ಯಾವುದೇ ಸಮಾಜ ಸಾಮಾಜಿಕವಾಗಿ ಮುಂದೆ ಬರುವಂತಾಗಲು ಸಂಘಟನೆ, ಸಂಘಟಕರು ಅತೀ ಮುಖ್ಯ. ಒಂದಿಬ್ಬರಿಂದ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಇದು ನಮ್ಮ ಸಮಾಜ, ನಮ್ಮ ಸಮಾಜದ ಅಭಿವೃದ್ಧಿ ಆಗಬೇಕು ಎಂಬ ಮನೋಭಾವದ ನಾಯಕತ್ವದೊಂದಿಗೆ ಕೆಲಸ ಮಾಡುವಂತಾಗಬೇಕು ಎಂದರು. ನದಾಫ್, ಪಿಂಜಾರ್ ಸಮಾಜ ಮುಂಚೂಣಿ ನಾಯಕತ್ವ ವಹಿಸಿಕೊಳ್ಳುವಂತಾಗಬೇಕು. ನಾವು ಜನ್ಮ ತಾಳಿರುವುದೇ
ನಾಯಕತ್ವ ವಹಿಸಿಕೊಳ್ಳಲು ಎಂಬ ಮನೋಭಾವನೆಯಿಂದ ಮುಂದೆ ಬರಬೇಕು. ಹಾಗಾಗಿಯೇ ಎಚ್. ಇಬ್ರಾಹಿಂ ಸಾಹೇಬ್ ನದಾಫ್/ಪಿಂಜಾರ ಸಂಘ ಪ್ರಾರಂಭಿಸಿದರು. ಅದರ ಫಲವಾಗಿಯೇ ಅನೇಕ ಪ್ರತಿಭಾವಂತರನ್ನು ಗುರುತಿಸಿ, ಸನ್ಮಾನ ಮಾಡುವಂತಾಗಿದೆ. ಇಷ್ಟಕ್ಕೆ ನಿಲ್ಲಬಾರದು. ಅಂಬೇಡ್ಕರ್ ಮಾತಿನಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ನಮ್ಮ ಮೂಲ ಮಂತ್ರವಾಗಬೇಕು ಎಂದು ತಿಳಿಸಿದರು. ಯಾವುದೇ ಧರ್ಮ, ಜಾತಿ,
ವರ್ಗದವರೇ ಆಗಿರಲಿ ಸಮಾಜದಲ್ಲಿ ಒಳ್ಳೆಯ ಗೌರವ ದೊರೆಯುವಂತಾಗಬೇಕಾದಲ್ಲಿ ಶಿಕ್ಷಣವಂತರಾಗಬೇಕು. ಪ್ರತಿಭಾವಂತರಿಗೆ ಇಡೀ ಸಮಾಜವೇ ಮನ್ನಣೆ ಕೊಡುತ್ತದೆ. ಶಿಕ್ಷಣಕ್ಕೆ ಇರುವಂತಹ ಸಾಕಷ್ಟು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದರು.
ಅಂಬೇಡ್ಕರ್‌ರವರ ಅನುಯಾಯಿಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಸಾಕಷ್ಟು ಒತ್ತು ಕೊಡುತ್ತಾರೆ. ಸಮಾಜ ಮುಂದೆ ಬರಬೇಕಾದಲ್ಲಿ ಶಿಕ್ಷಣ ಆ ಮೂಲಕ ಸಂಘಟನೆ ನಂತರ ಹೋರಾಟ ಮುಖ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಅದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ.
ಶಿಕ್ಷಣದ ಜೊತೆಗೆ ಜನಪ್ರಾತಿನಿಧ್ಯಕ್ಕೆ ಶ್ರಮಿಸಬೇಕು. ರಾಜಕೀಯ ಅಧಿಕಾರ ಇದ್ದಲ್ಲಿ ಸಮಾಜದ ಬದಲಾವಣೆ ಸಾಧ್ಯ. ಸಣ್ಣಪುಟ್ಟದ್ದನ್ನು ದೊಡ್ಡದ್ದಾಗಿ ಮಾಡುವರನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಸಮಾಜದ ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಸಿಬಿಎಸ್‌ಇ ಶಾಲೆ ನಿರ್ದೇಶಕ ಕೆ. ಇಮಾಂ ಮಾತನಾಡಿ, ಪಿಂಜಾರ್, ನದಾಫ್ ಸಮಾಜದಲ್ಲಿ ಹೊಂದಾಣಿಕೆ, ಸಂಘಟನೆಯೇ ಕಂಡು ಬರುತ್ತಿಲ್ಲ. ಶೈಕ್ಷಣಿಕ ಸಹಾಯ ಕೋರಿ ಬರುವರು ತೀರಾ ವಿರಳ. ಒಂದರ್ಥದಲ್ಲಿ ಬರುವುದೇ ಇಲ್ಲ. ಇರುವ ಅವಕಾಶ
ಸದುಪಯೋಗಪಡಿಸಿಕೊಂಡು ಒಳ್ಳೆಯ ವಿದ್ಯಾವಂತರು, ಪ್ರತಿಭಾವಂತರಾದಲ್ಲಿ ಇಡೀ ಸಮಾಜ ಗೌರವ ಕೊಡುತ್ತದೆ ಎಂದರು.
ಹೊಂದಾಣಿಕೆ, ಸಂಘಟನೆಯ ಕೊರತೆ ಇದ್ದಲ್ಲಿ ಯಾವುದೇ ಸಮಾಜದ ಅಭಿವೃದ್ಧಿ ಆಗುವುದಿಲ್ಲ. ಹಾಗಾಗಿ ಎಂತದ್ದೇ ವೈಮನಸ್ಸು, ಹೊಂದಾಣಿಕೆ ಕೊರತೆ ಇರಲಿ ಎಲ್ಲವನ್ನೂ ಬದಿಗೊತ್ತಿ ಸಮಾಜ, ಅಭಿವೃದ್ಧಿಗಾಗಿ ಒಂದಾಗಬೇಕು. ಒಳ್ಳೆಯ ವಿದ್ಯೆ ಮತ್ತು ಉತ್ತಮ ನಡಾವಳಿ ಅಳವಡಿಸಿಕೊಳ್ಳಬೇಕು. ಅಂತಹ ಗುಣ ಬೆಳೆಸಿಕೊಂಡಿದ್ದ ಕಾರಣಕ್ಕೆ ದಿನಪತ್ರಿಕೆ ವಿತರಣೆ ಮಾಡುತ್ತಿದ್ದಂತಹ ಅಬ್ದುಲ್ ಕಲಾಂರವರು ವಿಶ್ವದ ಪ್ರತಿಷ್ಠಿತ ವಿಜ್ಞಾನಿಯಾದರು, ದೇಶದ ರಾಷ್ಟ್ರಪತಿಯಾದರು ಎಂದು ಸ್ಮರಿಸಿದರು.
ನದಾಫ್/ಪಿಂಜಾರ ಸಂಘದ ಜಿಲ್ಲಾ ಅಧ್ಯಕ್ಷ ಎ.ಆರ್. ಅಯಾಜ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಡಾ| ದುಮ್ಮಿ ಅಬ್ದುಲ್ ಬುಡನ್, ಡಿ.ಬಿ. ಹಸನ್‌ಪೀರ್, ಬಿ. ಮೊಹಮ್ಮದ್ ಹುಸೇನ್, ಜಾಕೀರ್ ಹುಸೇನ್, ದಿಬ್ದಳ್ಳಿ ರಷೀದ್‌ಸಾಬ್ ಇತರರು ಇದ್ದರು. ರಹಮಾನ್‌ಖಾನ್ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.