ಐಪಿಎಲ್ ನಿಂದ ತಡವಾಯ್ತು ನಿರ್ಮಾಣ ಕಾರ್ಯ
Team Udayavani, May 21, 2018, 11:27 AM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು, ವಿವಿಧ ಕ್ರೀಡೆಗಳ ತವರೂರು, ಕ್ರೀಡಾಭಿಮಾನಿಗಳ ನಗರಿ ದಾವಣಗೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನಕ್ಕೆ ಕ್ರಿಕೆಟ್ ಪ್ರಿಯರು ಇನ್ನಷ್ಟು ದಿನ ಕಾಯಬೇಕಾಗಿದೆ.
ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ರಾಜ್ಯ ಕ್ರಿಕೆಟ್ ಸಂಸ್ಥೆಯ ದಿಗ್ಗಜರ ಸಮ್ಮುಖದಲ್ಲಿ ಶಾಮನೂರಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮೈದಾನ ನಿರ್ಮಾಣ ಆಗಲಿದೆ ಎಂಬಂತ ಸ್ಥಿತಿ ಅಂದು
ಇತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್ ಸಿಎನ ಘಟಾನುಘಟಿಗಳು ಕೆಲವೇ ತಿಂಗಳಲ್ಲಿ ಇಲ್ಲಿ ಕೆಪಿಎಲ್ ಪಂದ್ಯ ನಡೆಯಲಿವೆ. ಅಂತಹ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ, ಈ ವರೆಗೆ ಮೈದಾನಕ್ಕೆ ಕಾದಿರಿಸಿರುವ ಜಾಗದಲ್ಲಿ ಏನೂ ಆಗಿಲ್ಲ. ಶಂಕುಸ್ಥಾಪನೆ ನೆರವೇರಿದ ನಂತರ ಯಾರೂ ಸಹ ಇತ್ತ ಸುಳಿದಿಲ್ಲ.
ವಿಧಾನ ಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರ ಪ್ರಯತ್ನದಿಂದ ಕೆಲವೇ ದಿನಗಳಲ್ಲಿ ಅಗತ್ಯವಿದ್ದ ಜಾಗವನ್ನು ಡೂಡಾದಿಂದ ಕೆಎಸ್‌ಸಿಎಗೆ ಹಸ್ತಾಂತರ ಮಾಡುವ ಕಾರ್ಯವನ್ನು ಮಾಡಿದ್ದರು.
ಸ್ವತಃ ಕೆಎಸ್‌ಸಿಐ ಪದಾಧಿಕಾರಿಗಳೇ ಬೆರಗಾಗಿದ್ದರು. ಈವರೆಗೆ ಅನೇಕ ಕಡೆ ನಾವು ಮೈದಾನ ನಿರ್ಮಾಣಕ್ಕೆ ಮುಂದೆ ಬಂದಾಗ ಸ್ಥಳೀಯ ನಾಯಕರು ತೋರಿದ ಆಸಕ್ತಿ, ಪ್ರೋತ್ಸಾಹದಾಯಕವಾಗಿರಲಿಲ್ಲ. ಆದರೆ, ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು ತೋರಿದ ಆಸಕ್ತಿ ನಿಜಕ್ಕೂ ಅತ್ಯದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ವಿನಯಕುಮಾರ್ ಸಹ ಸಂತಸ ವ್ಯಕ್ತಪಡಿಸಿ, ನನ್ನ ಹುಟ್ಟೂರಾದ ದಾವಣಗೆರೆಯಲ್ಲಿ ಮೈದಾನ ಆಗುತ್ತಿರುವುದು
ನನಗೆ ಸಂತಸ ತಂದಿದೆ. ಆದಷ್ಟು ಬೇಗ ಮೈದಾನ ನಿರ್ಮಾಣ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದರು.
ಕ್ರಿಕೆಟ್ ಮೈದಾನ ನಿರ್ಮಾಣ ಕಾರ್ಯ ಈಗಾಗಲೇ ಆರಂಭ ಆಗಬೇಕಿತ್ತು. ಆದರೆ, ಐಪಿಎಲ್ ಪಂದ್ಯಾವಳಿ ಆರಂಭವಾಗಿದ್ದರಿಂದ ಪಿಚ್ ನಿರ್ಮಾಣ ಕಾರ್ಯ ನಿಭಾಯಿಸುವರರು ಐಪಿಎಲ್ ಪಂದ್ಯ ನಡೆಯುವ ಮೈದಾನದ ನಿಗಾವಹಿಸಬೇಕಾಯಿತು. ಇದೇ ಕಾರಣಕ್ಕೆ ಇಲ್ಲಿನ ಮೈದಾನದ ಕಾರ್ಯ ಇನ್ನೂ ಆರಂಭವಾಗಿಲ್ಲ ಎನ್ನುತ್ತವೆ ಮೂಲಗಳು.
ಇದರ ಜೊತೆಗೆ ಇಲ್ಲಿ ನಿರ್ಮಾಣ ಆಗಲಿರುವ ಮೈದಾನ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಲಿದೆ. ರಣಜಿ, ಕೆಪಿಎಲ್,
ವಲಯ ಮಟ್ಟದ ಪಂದ್ಯಾವಳಿ ಸೇರಿದಂತೆ ದೇಸಿಯ ಕ್ರಿಕೆಟ್ ಪಂದ್ಯ ಆಯೋಜಿಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮೈದಾನದಲ್ಲಿ ಒದಗಿಸುವ ಯೋಜನೆ ಸದ್ಯ ರೂಪುಗೊಳ್ಳುತ್ತಿದೆ.
ಮುಂದಿನ ವರ್ಷ ರಣಜಿ ಪಂದ್ಯ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ನಮ್ಮೂರಲ್ಲಿ ರಣಜಿ, ಕೆಪಿಎಲ್ ಪಂದ್ಯಗಳು ನಡೆಯಲಿವೆ. ರಾಜ್ಯ ತಂಡದಲ್ಲಿನ ಮನೀಶ್ ಪಾಂಡೆ, ಕೆ.ಎಲ್. ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರವಾಲ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರ ಆಟವನ್ನು ನೇರವಾಗಿ ನೋಡುವ ಅವಕಾಶ ದೊರೆಯಲಿದೆ.
ಅಂತಾರಾಷ್ಟ್ರೀಯ ಮೈದಾನ ಆಗಲಿದೆ ನಮ್ಮ ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಮೈದಾನ ನಿರ್ಮಾಣ ಮಾಡುವ ಕನಸನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೊಂದಿದ್ದರು. ಅವರ ಪ್ರಯತ್ನದಿಂದಾಗಿ 8.5 ಎಕರೆ ವಿಶಾಲವಾದ ಜಮೀನು ಕ್ರಿಕೆಟ್ ಮೈದಾನಕ್ಕೆ ಸಿಕ್ಕಿದೆ. ಇಲ್ಲೊಂದು ಸುಸಜ್ಜಿತ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವ ಅವರ ಕನಸು ಶೀಘ್ರ ನನಸಾಗಲಿದೆ. 15 ದಿನಗಳಲ್ಲಿ ಮೈದಾನ ನಿರ್ಮಾಣ ಕಾರ್ಯ ಆರಂಭ ಆಗಲಿದೆ.
ಕೆ. ಶಶಿಧರ್, ಕೆಎಸ್‌ಸಿಐ ಸದಸ್ಯ.
ಪಾಟೀಲ ವೀರನಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.