ಸಮಾಜಘಾತುಕರ ಕಡಿವಾಣಕ್ಕೆ ಗೂಂಡಾಕಾಯ್ದೆ ಬ್ರಹ್ಮಾಸ್ತ್ರ


Team Udayavani, May 3, 2017, 12:59 PM IST

dvg4.jpg

ದಾವಣಗೆರೆ: ಸದಾ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಂಘಟಿತ ಅಪರಾಧವೆಸಗುವ ಸಮಾಜಘಾತುಕರ ನಿಯಂತ್ರಣಕ್ಕೆ ಗೂಂಡಾ ಕಾಯ್ದೆ ಅತ್ಯಂತ ಪ್ರಬಲ ಬ್ರಹ್ಮಾಸ್ತ್ರ ಎಂದು ಉತ್ಛ ನ್ಯಾಯಾಲಯದ ಸರ್ಕಾರಿ ವಕೀಲ ಇಂದ್ರೇಶ್‌ ಹೇಳಿದ್ದಾರೆ.ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗೂಂಡಾ ಕಾಯ್ದೆ ಅನುಷ್ಠಾನ… ಕುರಿತಂತೆ ಪೂರ್ವ ವಲಯ ಪೊಲೀಸ್‌ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಐಪಿಸಿ, ಸಿಆರ್‌ಪಿ ಕಾಯ್ದೆಯ ಮೂಲಕವೂ ಸಮಾಜಘಾತುಕ ವ್ಯಕ್ತಿಗಳ ನಿಯಂತ್ರಣ ಆಗದಿದ್ದಾಗ ಗೂಂಡಾ ಕಾಯ್ದೆಯ ಬಳಸಿ ನಿಯಂತ್ರಣಕ್ಕೆ ತರಬಹುದು. ಆದರೆ, ಈ ಕಾಯ್ದೆ ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸುವುದು ಅತ್ಯಗತ್ಯ ಎಂದರು. ಕಾನೂನು ಸುವ್ಯವಸ್ಥೆಗೆ ಭಂಗ ತರುವ  ಸಮಾಜಘಾತುಕರ ನಿಯಂತ್ರಣದ ಜೊತೆಗೆ ಸಾರ್ವಜನಿಕರ ರಕ್ಷಣೆಗಾಗಿ ಗೂಂಡಾ ಕಾಯ್ದೆ ಅನ್ವಯ ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಅವಕಾಶ ಇದೆ.

1985ರಿಂದ ಜಾರಿಗೆ ಬಂದಿರುವ ಗೂಂಡಾ ಕಾಯ್ದೆಯಡಿ 2010ರ ವರೆಗೆ ರಾಜ್ಯದಲ್ಲಿ 47 ಪ್ರಕರಣ ಮಾತ್ರ ದಾಖಲಾಗಿದ್ದವು. 2012 ರಲ್ಲಿ ಒಂದೇ ವರ್ಷದಲ್ಲಿ 112 ಪ್ರಕರಣ ದಾಖಲಾಗಿದ್ದವು. 2010ರಲ್ಲಿ ಗೂಂಡಾ ಕಾಯ್ದೆಯ ಶಿಕ್ಷೆಯ ಪ್ರಮಾಣ ಶೇ.3, 2014 ರಲ್ಲಿ ಶೇ.25 ರಷ್ಟಿತ್ತು ಎಂದು ತಿಳಿಸಿದರು. ಇಂತಹವರಿಂದ ಕಾನೂನು, ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಮುಂಜಾಗ್ರತಾ  ಕ್ರಮವಾಗಿ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಒಳಪಡಿಸಬಹುದು.

ಆದರೆ, ಈ ಕಾಯ್ದೆ ಬಳಸುವಾಗ ಯಾವುದೇ ಕಾರಣಕ್ಕೂ ವ್ಯಕ್ತಿ ಸ್ವಾತಂತ್ರÂ, ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಗೂಂಡಾ ಕಾಯ್ದೆಗೆ ಒಳಪಡಿಸುವರ ವಿರುದ್ಧ ಸಿದ್ಧಪಡಿಸುವ ವರದಿ ಸಮರ್ಥನೀಯವಾಗಿರಬೇಕು ಅಲ್ಲದೆ ಸಂಬಂಧಿತರಿಂದ ಆಗಬಹುದಾದ ಅನಾಹುತ, ಧಕ್ಕೆಯನ್ನು ಸಶಕ್ತವಾಗಿ ರುಜುವಾತುಪಡಿಸಬೇಕು ಎಂದು ತಿಳಿಸಿದರು. 

ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ವೈಯಕ್ತಿಕ ಬದುಕನ್ನೇ ಮುಡಿಪಾಗಿಟ್ಟು ಕೆಲಸ ಮಾಡುವಂತಹ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಕಾಯ್ದೆ, ಕಾನೂನು ಬಗ್ಗೆ ತಿಳಿದುಕೊಳ್ಳ ಬೇಕು. ಪ್ರತಿ ನಿತ್ಯ ಆಗುವ ಕಾನೂನು, ತಿದ್ದುಪಡಿ ಇತರೆ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಬೇಕು. ದೇಶದ ಖ್ಯಾತ ವಕೀಲ ರಾಂ ಜೆಠ್ಮಲಾನಿ, ತಾವು ಪ್ರತಿ ದಿನ ಐಪಿಸಿ 302 ಕಾಯ್ದೆ ಬಗ್ಗೆ ಅಧ್ಯಯನ ಮಾಡುತ್ತೇನೆ ಎಂಬುದಾಗಿ ಹೇಳುತ್ತಾರೆ.

ಅದೇ ರೀತಿ ಪ್ರತಿಯೊಬ್ಬರೂ ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು. ಪೂರ್ವ ವಲಯ ಪೊಲೀಸ್‌ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ, ಶಾಂತಿಯುತ ವಾತಾವರಣ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ಅತ್ಯಂತ ಮಹತ್ವದ್ದಾಗಿದೆ.

ಸಮಾಜದಲ್ಲಿನ ದುಷ್ಟಶಕ್ತಿ, ದುಷ್ಕರ್ಮಿ, ಸಮಾಜಘಾತುಕ ಶಕ್ತಿಗಳ ವಿರುದ್ದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಇರುವ ಪ್ರಬಲ, ಶಕ್ತಿಯುತ ಗೂಂಡಾ ಕಾಯ್ದೆಯನ್ನು ಸರಿಯಾಗಿ ಬಳಕೆ ಮಾಡಬೇಕು. ಸಮಾಜಘಾತುಕ ಶಕ್ತಿಗಳನ್ನ ಗೂಂಡಾ ಕಾಯ್ದೆಯಡಿ ಬಂಧಿಸುವ ಮೂಲಕ ಇತರರಿಗೆ ಕಠಿಣ ಸಂದೇಶ ರವಾನಿಸುವಂತಾಗಬೇಕು ಎಂದು ತಿಳಿಸಿದರು. 1947ಕ್ಕೂ ಮುನ್ನ ಬ್ರಿಟಿಷರು ಅನೇಕ ರಾಷ್ಟ್ರೀಯ ನಾಯಕರ ವಿರುದ್ಧ ಗೂಂಡಾ ಕಾಯ್ದೆ ಬಳಸುತ್ತಿದ್ದರು.

1947ರ ನಂತರ ಈ ಕಾಯ್ದೆಯ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ತಿದ್ದುಪಡಿ ತರಲಾಗುತ್ತಿದೆ. ಈ ಕಾಯ್ದೆಯ  ಅನ್ವಯ ಸಮಾಜಘಾತುಕ ಶಕ್ತಿಗಳನ್ನ ಬಂಧಿಸಿ, 1 ವರ್ಷದವರೆಗೆ ಬಂಧನದಲ್ಲಿಡಬಹುದು. ಈ ಕಾಯ್ದೆ ಅನುಷ್ಠಾನಗೊಳಿಸುವಾಗ ಸಾಕಷ್ಟು ಕ್ರಮ, ಮಾನದಂಡ ಅನುಸರಿಸಬೇಕಿದೆ ಎಂದರು. 

ಪೂರ್ವ ವಲಯದಲ್ಲಿ 2015 ರಲ್ಲಿ ಗೂಂಡಾ ಕಾಯ್ದೆ ಅನ್ವಯ 16 ಪ್ರಕರಣ ಮಾತ್ರ ದಾಖಲಾಗಿವೆ. 2016 ರಲ್ಲಿ 8, ಈ ವರ್ಷ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ದಾವಣಗೆರೆ, ಚಿತ್ರದುರ್ಗ ಇತರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿಲ್ಲ. ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ಇತರೆ ಸಂಘಟಿತ ಅಪರಾಧಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯನ್ನ ಸರಿಯಾಗಿ ಬಳಸಬೇಕು ಎಂದು ತಿಳಿಸಿದರು. 

ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್‌ ನಿರೂಪಿಸಿದರು. ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್‌. ನೇಮಗೌಡ ವಂದಿಸಿದರು. ಪೂರ್ವ ವಲಯದ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ 60ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.