ಭಾರತ ನಂ.1 ಆಗುವ ದಿನ ದೂರವಿಲ್ಲ: ಶಾಮನೂರು
Team Udayavani, Jan 21, 2019, 6:05 AM IST
ದಾವಣಗೆರೆ: ಭಾರತಕ್ಕಿರುವ ಅನೇಕ ಸವಾಲುಗಳ ನಡುವೆಯೂ ಪಾಶ್ಚಾತ್ಯ ದೇಶಗಳ ಮಟ್ಟಕ್ಕೆ ನಿಲ್ಲುವ ದಿನಗಳು ದೂರ ಇಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಅಂತಿಮ ದಿನ ಭಾನುವಾರದ ಬಹುತ್ವದ ಭಾರತ: ಆತಂಕಗಳು ಮತ್ತು ಸವಾಲುಗಳು…ವಿಷಯ ಕುರಿತ ಸರ್ವ ಧರ್ಮ ಸಮಾವೇಶದಲ್ಲಿ ಮಾತನಾಡಿದರು.
ಇಂದಿನ ವಾತಾವರಣದಲ್ಲಿ ಭಾರತಕ್ಕೆ ಅನೇಕ ಸವಾಲುಗಳಿವೆ. ಅಮೆರಿಕಾದ ಯಜಮಾನಿಕೆ, ಚೀನಾದಂತಹ ರಾಷ್ಟ್ರಗಳು ತಾ ಮುಂದು ನಾ ಮುಂದು ಎಂದು ಮುಂದೆ ಹೋಗುತ್ತಿವೆ. ಈ ನಡುವೆಯೂ ಭಾರತ ಜಗತ್ತಿನ ನಂಬರ್ ಒನ್ ಸ್ಥಾನವನ್ನ ಆಕ್ರಮಿಸಿಕೊಳ್ಳಲೇಬೇಕಿದೆ. ಇನ್ನು 10 ವರ್ಷದಲ್ಲಿ ಪಾಶ್ಚಾತ್ಯ ದೇಶಗಳ ಮಟ್ಟಕ್ಕೆ ನಿಲ್ಲುವ ದಿನಗಳು ದೂರ ಇಲ್ಲ. ನಮ್ಮಲ್ಲಿ ಒಗ್ಗಟ್ಟು ಇರುವುದರಿಂದ ಜಾತಿಯ ಕಿತ್ತಾಟ ಎಲ್ಲೂ ಕಣ್ಣಿಗೆ ಕಾಣುತ್ತಿಲ್ಲ. ಆದರೂ, ಜಾತಿಯತೆ ದೂರ ಮಾಡಬೇಕಿದೆ ಎಂದು ತಿಳಿಸಿದರು.
ನನಗೆ ಮುರುಘಾ ಮಠದ ನಾಲ್ವರು ಜಗದ್ಗುರುಗಳನ್ನ ನೋಡುವ, ಅಶೀರ್ವಾದ ಪಡೆಯುವ ಭಾಗ್ಯ ದೊರೆತಿದ್ದು ನನ್ನ ತಂದೆ-ತಾಯಿಯವರು ಮಾಡಿದ್ದ ಪುಣ್ಯದಿಂದ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಜಯದೇವ ಶ್ರೀಗಳು ನಾಡಿಗೆ ದೊಡ್ಡ ಸ್ವಾಮಿಗಳಾಗಿದ್ದರು. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅನ್ನ ಮತ್ತು ಜ್ಞಾನ ದಾಸೋಹ ಮಾಡಿದವರು. ಬೆಂಗಳೂರಿನಲ್ಲಿ ಹಾಸ್ಟೆಲ್ ಕಟ್ಟಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿಕೊಟ್ಟವರು. ಶಿವಮೂರ್ತಿ ಮುರುಘಾ ಶರಣರು ಸಹ ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ಜಾತಿಯವರನ್ನ ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ಕಾಣುತ್ತಿರುವ ಅವರನ್ನ ಆಧುನಿಕ ಬಸವಣ್ಣ… ಎಂದರೆ ತಪ್ಪಾಗಲಾರದು ಎಂದರು. ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಮನುಷ್ಯ ಜಾತಿಯೇ ಸತ್ಯ. ನಾವು ಮಾಡಿಕೊಂಡಿರುವಂತಹ ಜಾತಿ ಎನ್ನುವುದೇ ಸುಳ್ಳು. ಜಾತಿ ಎನ್ನುವುದೇ ಸುಳ್ಳು ಎನ್ನುವುದನ್ನ ನಮ್ಮ ಕನ್ನಡ ಪರಂಪರೆ ತೋರಿಸಿ ಕೊಟ್ಟಿದೆ. ಕನ್ನಡದಂತಹ ಬಹುತ್ವದ ಪರಂಪರೆ, ಸಂಸ್ಕೃತಿ ಯಾವುದೇ ಭಾಷೆಗೆ ಇಲ್ಲವೇ ಇಲ್ಲ. ಬಸವಣ್ಣನವರು ಧರ್ಮದ ವಿಚಾರ ಬಂದಾಗ ದಯವೇ ಧರ್ಮದ ಮೂಲವಯ್ಯ… ಎಂದರೇ ಹೊರತು ಜಾತಿಯನ್ನ ಹೇಳಲೇ ಇಲ್ಲ. ಮನುಷ್ಯತ್ವದ ಪ್ರೀತಿ ತೋರಿದವರು ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್ ಮಾತನಾಡಿ, ಧರ್ಮದ ಹೆಸರಲ್ಲಿ ದೇಶವನ್ನ ಪಡೆಯುವರೇ ನಿಜವಾದ ದೇಶದ್ರೋಹಿಗಳು. ಜಾತಿಯ ಗೋಡೆಯ ಕಿತ್ತು ಹಾಕಿ ದೇಶ ಒಗ್ಗೂಡಿಸುವರೇ ನಿಜವಾದ ದೇಶಪ್ರೇಮಿಗಳು. ನಾವೆಲ್ಲರೂ ಬಸವಣ್ಣನವರನ್ನು ಇಡೀ ಜಗತ್ತಿಗೆ ತಿಳಿಸಬೇಕಾಗಿದೆ.
ಏಕಸೂತ್ರದಲ್ಲಿ ಭಾರತವನ್ನ ಜೋಡಿಸಲು ಬಸವಣ್ಣನವರ ವಿಚಾರಧಾರೆ ಅಗತ್ಯ. ಅವರ ವಿಚಾರಧಾರೆಯಂತೆ ಬಾಳಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಜಯದೇವ ಸ್ವಾಮೀಜಿಯವರಂತೆ ಶಿವಮೂರ್ತಿ ಮುರುಘಾ ಶರಣರು ವಚನಗಳನ್ನ ವಿದೇಶದಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಮೂಢನಂಬಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಅವರೊಟ್ಟಿಗೆ ಇರಬೇಕು ಎಂದು ಶಾಮನೂರು ಆಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.