ಸೈಬರ್ ಅಪರಾಧದ ಮೊದಲ ಪ್ರಕರಣ ಪತ್ತೆ
Team Udayavani, Aug 28, 2018, 5:48 PM IST
ದಾವಣಗೆರೆ: ವೈಯಕ್ತಿಕ ದ್ವೇಷದ ಕಾರಣಕ್ಕೆ ಮಹಿಳೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಚಾರಿತ್ರ್ಯವಧೆ ಮಾಡಿದವನನ್ನು ಸಿಇಎನ್ (Cyber Economics and Noretic controle crime) ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಷಾನಗರ ಮುಖ್ಯ ರಸ್ತೆಯ ಫ್ರೆಂಡ್ಸ್ ಕಮ್ಯೂನಿಕೇಶನ್‌ನ ತನ್ವೀರ್ ಅಹ್ಮದ್ ತಬೇರಿಜ್ ಬಂಧಿತ ಆರೋಪಿ.
ತನ್ವೀರ್ ಅಹ್ಮದ್ ತಬೇರಿಜ್‌ಗೆ ಸಹೋದರಿಯ ಮೂಲಕ ದಾವಣಗೆರೆಯ ಕೆಟಿಜೆ ನಗರದ ಮಹಿಳೆ ಪರಿಚಯವಾಗಿದ್ದರು. ಕೆಲ ಕಾಲದ ನಂತರ ಆ ಮಹಿಳೆ ಮತ್ತು ತನ್ವೀರ್ ಅಹ್ಮದ್ ತಬೇರಿಜ್ ನಡುವೆ ದ್ವೇಷ ಉಂಟಾಗಿತ್ತು. ಆ ಮಹಿಳೆ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಆತ ಈ ಕೆಲಸ ಮಾಡಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾರೋ ಅಪರಿಚಿತರು ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ತನ್ನ ಅಶ್ಲೀಲ ಫೋಟೋ ಅಪ್‌ಲೋಡ್ ಮಾಡಿ, ´ಪೋನ್ ನಂಬರ್ ಹಾಕಿ, ಅಶ್ಲೀಲವಾಗಿ ಕಾಮೆಂಟ್ ಮಾಡಿರುವ ಸಂಬಂಧ ಆ ಮಹಿಳೆ ಸಲ್ಲಿಸಿದ ದೂರಿನ ಆಧಾರದಲ್ಲಿ ಸಿಇಎನ್ ಠಾಣಾ ಪೊಲೀಸರು ಕೂಲಂಕುಷ ತನಿಖೆ ನಡೆಸಿದಾಗ ಆರೋಪಿ ತನ್ವೀರ್ ಅಹ್ಮದ್ ತಬೇರಿಜ್ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ತಾನೇ ಆ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಕಲಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಅಶ್ಲೀಲ ಫೋಟೋ ಅಪ್‌ಲೋಡ್ ಮಾಡಿ ಕಾಮೆಂಟ್ ಮಾಡಿದವರ ಪತ್ತೆಗಾಗಿ ಫೇಸ್‌ಬುಕ್ ಖಾತೆಯ ಯು.ಅರ್.ಎಲ್ (URL) ಮತ್ತು ಸ್ಕ್ರೀನ್‌ಶಾಟ್ ತೆಗೆದು, ಅಮೆರಿಕಾದಲ್ಲಿರುವ ಫೇಸ್
ಬುಕ್ ಕಂಪನಿಗೆ ಕಳಿಸಿಕೊಡಲಾಗಿತ್ತು. ಫೇಸ್‌ಬುಕ್ ಕಂಪನಿಯವರು ನಕಲಿ ಫೇಸ್‌ಬುಕ್ ಖಾತೆ ತೆರೆದ ವ್ಯಕ್ತಿಗೆ ಸಂಬಂಧಿಸಿದಂತೆ ಐ.ಪಿ. (ಐಕ) ವಿಳಾಸ ನೀಡಿದ್ದರು.
ಐ.ಪಿ. ವಿಳಾಸದ ಆಧಾರದಲ್ಲಿ ಫೇಸ್‌ಬುಕ್ ಖಾತೆಗೆ ಸಂಬಂಧಿಸಿದಂತೆ ಸಿ.ಡಿ.ಅರ್.ಕಾಲ್‌ಡಿಟೈಲ್ ಮಾಹಿತಿ
ಮತ್ತು ಸಿಎಎಫ್ ಮಾಹಿತಿ ಪಡೆದು, ತನ್ವೀರ್ ಅಹ್ಮದ್ ತಬೇರಿಜ್‌ನನ್ನು ಬಂಧಿಸಲಾಯಿತು. ಕೃತ್ಯಕ್ಕೆ ಬಳಸಿದ
ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಮೊದಲ ಪ್ರಕರಣ ಪತ್ತೆ ಹಚ್ಚಿ, ಆರೋಪಿ ಬಂಧಿಸಲಾಗಿದೆ. ಅನೇಕ ಮಹಿಳೆಯರು, ಯುವತಿಯರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಚಾರಿತ್ರ್ಯವಧೆ ಮಾಡುವಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಬೇಕು. ಅನೇಕರು ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದರೂ ಭಯ ಮತ್ತು ಮತ್ತಿತರ ಕಾರಣಕ್ಕೆ ದೂರು ಸಲ್ಲಿಸಲು ಮುಂದೆ ಬರುವುದೇ ಇಲ್ಲ. ನಕಲಿ ಖಾತೆಯ
ಕಿರುಕುಳಕ್ಕೆ ಸಂಬಂಧಿಸಿದಂತೆ ಸಿಇಎನ್(ವಿದ್ಯಾನಗರ ಪೊಲೀಸ್ ಠಾಣೆ, ಮೇಲ್ಭಾಗ) ಠಾಣೆಯಲ್ಲಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಈಚೆಗೆ ಸೈಬರ್ ಅಪರಾಧ ಹೆಚ್ಚಾಗುತ್ತಿವೆ. ವಿಶೇಷವಾಗಿ ಬ್ಯಾಂಕ್ ಆನ್‌ಲೈನ್ ಖಾತೆಗೆ ಸಂಬಂಧಿಸಿದಂತೆ ಪಿನ್ ನಂಬರ್ ಪಡೆದು, ಹಣ ಡ್ರಾ ಮಾಡಿಕೊಳ್ಳುವ ಬಗ್ಗೆ ದೂರು ಬರುತ್ತಿವೆ. ಸುಶಿಕ್ಷಿತರೇ ಹೆಚ್ಚಾಗಿ ಇಂತಹ ವಂಚನೆಗೆ ಒಳಗಾಗುತ್ತಿದ್ದಾರೆ.
ಕೆಲವಾರು ಕಾರಣಕ್ಕೆ ದೂರು ನೀಡಲು ಮುಂದೆ ಬರುವುದೇ ಇಲ್ಲ. ಸೈಬರ್ ಅಪರಾಧಗಳ ಬಗ್ಗೆಯೂ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು. ಸಿ.ಇ.ಎನ್.ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಟಿ.ಎನ್. ದೇವರಾಜ್, ಸಿಬ್ಬಂದಿ ರಾಮಚಂದ್ರ ಜಾಧವ್, ಪ್ರಕಾಶ್‌ರಾವ್, ರವಿ, ಸುರೇಶ್, ಸಚಿನ್, ಲೋಹಿತ್, ಪ್ರಕಾಶ್, ವೀರಭದ್ರಪ್ಪ, ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.