ಖಾಸಗಿ ವಾಹನಗಳ ಹಾವಳಿಯಿಂದ ಸಾರಿಗೆ ಇಲಾಖೆಗೆ ನಷ್ಟ
Team Udayavani, May 19, 2017, 12:44 PM IST
ಹರಿಹರ: ಖಾಸಗಿ ವಾಹನಗಳ ಹಾವಳಿಯಿಂದ ಸಾರಿಗೆ ಇಲಾಖೆಯ ಆದಾಯ ಕುಸಿದಿದ್ದು, ತಮ್ಮ ಸಂಬಳ ಸವಲತ್ತುಗಳಿಗೆ ತೊಂದರೆಯಾಗುವತ್ತದೆಂದು ಹರಿಹರ ಡಿಪೋ ನೌಕರರು ಗುರುವಾರ ಬೀದಿಗಿಳಿದು ಸಂಸ್ಥೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.
ನಗರದ ಬಸ್ ನಿಲ್ದಾಣ, ನಗರಸಭೆ ಮುಂಭಾಗ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಬಳಿ ಸಂಚರಿಸಿದ ಕಾರ್ಮಿಕರು ಸ್ಥಳದಲ್ಲಿದ್ದ ಪ್ರಯಾಣಿಕರು, ಸಾರ್ವಜನಿಕರಿಗೆ ರಾಜ್ಯ ಸಾರಿಗೆ ಸಂಸ್ಥೆ ಕಲ್ಪಿಸಿರುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.
ಡಿಪೋ ವ್ಯವಸ್ಥಾಪಕ ಪಿ.ಪರಮೇಶ್ವರಪ್ಪ ಮಾತನಾಡಿ, ರಾಜ್ಯ ಸಾರಿಗೆ ನಿಗಮ ಸೇವಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಹೊರತು ಲಾಭಕ್ಕಾಗಿ ಅಲ್ಲ. ಗರಿಷ್ಟ ಮಟ್ಟದ ಸುರಕ್ಷತಾ ಕ್ರಮಗಳು ಸೇರಿದಂತೆ ಸಂಸ್ಥೆ ಪ್ರಯಾಣಿಕರಿಗೆ ಉನ್ನತ ಶ್ರೇಣಿಯ ಸೇವೆ ಒದಗಿಸುತ್ತಿದೆ.
ವಿದ್ಯಾರ್ಥಿಗಳು, ಅಂಗವಿಕಲರು, ಅಂಧರು, ಪತ್ರಕರ್ತರು, ಸ್ವತಂತ್ರ ಹೋರಾಟಗಾರರಿಗೆ ಉಚಿತವಾಗಿ ಹಿರಿಯ ನಾಗರಿಕರು ಮುಂತಾದವರಿಗೆ ರಿಯಾಯಿತಿ ದರ ವಿಧಿಸಲಾಗುತ್ತಿದೆ. ಆದರೆ ಖಾಸಗಿ ಬಸ್‌ಗಳ ಹಾವಳಿಯಿಂದ ಇಲಾಖೆಯ ಬಸ್‌ಗಳು ಓಡುವುದು ಕಡಿಮೆಯಾದರೆ ಇದರಿಂದ ಸಾರ್ವಜನಿಕರಿಗೆ ನಷ್ಟವಾಗುತ್ತದೆ ಎಂದು ಮನವರಿಕೆ ಮಾಡಿದರು.
ಡಿಸಿ ಕಡಿವಾಣ: ಖಾಸಗಿ ವಾಹನಗಳ ಅನಧಿಕೃತ ಸಂಚಾರದಿಂದ ಇಲಾಖೆಗೆ ನಷ್ಟ ಮಾತ್ರವಲ್ಲದೆ ಸರ್ಕಾರಕ್ಕೆ ಮೋಟಾರು ವಾಹನ ತೆರಿಗೆ ಆದಾಯವೂ ಕಡಿಮೆಯಾಗುತ್ತದೆ. ಕಳೆದ ಮಾರ್ಚ್‌ನಲ್ಲೇ ಡಿಸಿ ನಗರದ ಬಸ್ ನಿಲ್ದಾಣದ 500 ಮೀ. ವ್ಯಾಪ್ತಿಯಲ್ಲಿ ಅಲ್ಲದೆ ಪಿ.ಪಿ.ರಸ್ತೆಯ ಮೂಲಕ, ಅಯೋದ್ಯೆ ಹೋಟೆಲ್,
ಬಿಎಸ್ ಎನ್‌ಎಲ್ ಕಚೇರಿ ಬಳಿ ಖಾಸಗೀ ಬಸ್, ಕಾರು, ಟ್ಯಾಕ್ಸಿ, ಟಿಂಪೋ ಮತ್ತು ಮ್ಯಾಕ್ಸಿಕ್ಯಾಬ್ ಮುಂತಾದ ವಹನಗಳ ನಿಲುಗಡೆ ನಿಷೇಧಿಸಿ, ಆದೇಶ ಹೊರಡಿಸಿದ್ದು, ಉಲ್ಲಂಘಿ ಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನೌಕರರ ಸಂಘದ ಕಾರ್ಯದರ್ಶಿ ಎಚ್. ಹನುಮಂತಪ್ಪ ಮಾತನಾಡಿ, ಖಾಸಗಿ ವಾಹನಗಳು ಪರವಾನಿಗೆ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಸಂಚರಿಸುತ್ತವೆ. ಇದರಿಂದ ಘಟಕಕ್ಕೆ ಬರುವ ಆದಾಯ ಖೋತಾ ಆಗಿ 125 ಸಾವಿರ ಸಾವಿರ ನೌಕರರ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ.
ಖಾಸಗಿ ವಾಹನಗಳು ಒಪ್ಪಂದದ ಮೇರೆಗೆ ಎಂದು ಪರವಾನಿಗೆ ಪಡೆದು ಎಲ್ಲೆಂದರಲ್ಲಿ ಕೂಗಿ ಕರೆದು ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುತ್ತಿವೆ. ಎಳೆಹೊಳೆ ಮಾರ್ಗ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಮಾರ್ಗಗಳಲ್ಲೂ ಆಪೆ, ಟಾಟಾ ಏಸ್ ಮುಂತಾದ ಪ್ರಯಾಣಿಕರ, ಗೂಡ್ಸ್ ವಾಹನಗಳು ಅನಧಿ ಧಿಕೃತವಾಗಿ ಸಂಚರಿಸುತ್ತಿರುವುದರಿಂದ ಹಲವು ಬಸ್ ಗಳನ್ನು ರದ್ದುಪಡಿಸಲಾಗಿದೆ.
ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅನಧಿಕೃತ ಖಾಸಗಿ ವಾಹನ ತಡೆಯಲು ಈಗಾಗಲೇ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರಿಗೆ ಹಲವು ಸಲ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಖಾಸಗಿ ವಾಹನ ಚಾಲಕರು, ಸಿಬ್ಬಂದಿಗಳಿಗೂ ನೌಕರರು ಅನಧಿಕೃತವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸಿದಂತೆ ವಿನಂತಿಸಿದರು. ಸಂಘದ ಅಧ್ಯಕ್ಷ ಎಂ.ಎನ್.ಲೋಕೇಶಪ್ಪ, ಉಪಾಧ್ಯಕ್ಷ ಕರೇಗೌಡ, ನಿಲ್ದಾಣ ನಿಯಂತ್ರಣಾಧಿಕಾರಿ ಸತೀಶ್ ಸೇರಿದಂತೆ ಹಲವಾರು ಚಾಲಕ, ನಿರ್ವಾಹಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.