ಚಾಲಕರು-ಕ್ಲೀನರ್ ಕಾರ್ಯಕ್ಷಮತೆಗೆ ಮೇಯರ್ ಮೆಚ್ಚುಗೆ
Team Udayavani, Apr 8, 2017, 1:05 PM IST
ದಾವಣಗೆರೆ: ಏ. 13ರಂದು ತಮ್ಮ ಅಧಿಕಾರಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಮೇಯರ್ ರೇಖಾ ನಾಗರಾಜ್ ಶುಕ್ರವಾರ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಲಘು ಉಪಾಹಾರ ಕೂಟ ಏರ್ಪಡಿಸಿ, ಅವರ ಕಾಯಕ್ಷಮತೆ ಶ್ಲಾಘಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ತ್ಯಾಜ್ಯ ಸಂಗ್ರಹ ಅಧಿಕವಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ಸವಾಲಾಗಿದೆ. ವಾಹನಗಳಲ್ಲಿ 60-70 ಟನ್‌ನಷ್ಟು ತ್ಯಾಜ್ಯ ಡಂಪ್ ಮಾಡಲಾಗುತ್ತಿತ್ತು. ವಾಹನಗಳ ಚಾಲಕರು, ಕ್ಲೀನರ್‌ಗೊಂದಿಗೆ ಮಾತನಾಡಿ, ಅವರ ಸಮಸ್ಯೆ ಆಲಿಸಿದ್ದರಲ್ಲದೆ, ವಾಹನಗಳ ದುರಸ್ತಿಗೆ ಮೇಯರ್ ಕ್ರಮ ಕೈಗೊಂಡಿದ್ದರು.
ಇದರಿಂದ ಹಂತ ಹಂತವಾಗಿ ತ್ಯಾಜ್ಯ ವಿಲೇವಾರಿ ಪ್ರಮಾಣ ಹೆಚ್ಚುತ್ತಾ ಬಂದಿತಲ್ಲದೆ, 120 ಟನ್ ನಷ್ಟು ವಿಲೇವಾರಿ ಮಾಡಲಾಗಿದೆ. ಚಾಲಕರು ಹಾಗೂ ಕ್ಲೀನರ್‌ಗಳ ಕಾರ್ಯಕ್ಷಮತೆ ಮೆಚ್ಚಿ ಅವರಿಗೆ ಕೃತಜ್ಞತೆ ಸಲ್ಲಿಸಿದ, ಮೇಯರ್ ಸ್ವತ ತಾವೇ ಲಘು ಉಪಾಹಾರ ವಿತರಿಸಿದರು.
ಈ ವೇಳೆ ಮಾತನಾಡಿದ ಮೇಯರ್ ರೇಖಾ ನಾಗರಾಜ್, 6 ತಿಂಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಾಗ ನಗರದ ತ್ಯಾಜ್ಯ ವಿಲೇವಾರಿ ಪ್ರಮಾಣ ದಿನಕ್ಕೆ 70-80 ಟನ್ ಮಾತ್ರ ಇತ್ತು. ವಾಸ್ತವದಲ್ಲಿ ದಿನನಿತ್ಯ 120 ಟನ್ ಕಸ ಉತ್ಪತ್ತಿಯಾಗುತ್ತದೆ. ಪೂರ್ಣ ಪ್ರಮಾಣದ ವಿಲೇವಾರಿ ಸಾಧ್ಯ ಆಗಿರಲಿಲ್ಲ.
ದಿನವೊಂದಕ್ಕೆ 40-50 ಟನ್ ಕಸ ಹಾಗೆ ಉಳಿಯುತ್ತಿತ್ತು. ಇದರ ಪರಿಹಾರಕ್ಕೆ ಚಾಲಕರ, ಕೀÉನರ್, ಕಸ ತುಂಬುವವರ ಸಭೆ ನಡೆಸಿದ್ದೆ. ಸಭೆಯಲ್ಲಿ ಸಿಬ್ಬಂದಿ ತಮಗೆ ಇದ್ದ ಸಮಸ್ಯೆ ಹೇಳಿಕೊಂಡಿದ್ದರು ಎಂದು ಸ್ಮರಿಸಿದರು. ವಾಹನ ದುರಸ್ತಿ ಇತರೆ ಸಮಸ್ಯೆ ಪರಿಹರಿಸಿದ ನಂತರ ದಿನನಿತ್ಯ ಕಸ ವಿಲೇವಾರಿ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.
ಇಂದು 38 ವಾಹನಗಳಲ್ಲಿ ಸರಿಯಾಗಿ 120 ಟನ್ ಕಸ ವಿಲೇವಾರಿ ಮಾಡಲಾಗಿದೆ. ನಿಜಕ್ಕೂ ಇದು ಉತ್ತಮ ಕಾರ್ಯ. ಇದನ್ನು ಮುಂದೆ ಸಹ ಹೀಗೆ ಕಾಪಾಡಿಕೊಂಡು ಹೋಗಿ. ಸಮಸ್ಯೆಗಳು ಬಂದಾಗ ಪರಿಹರಿಸಿಕೊಂಡು ನಗರದ ಸ್ವತ್ಛತೆಗೆ ಒತ್ತುಕೊಡಿ ಎಂದು ಕೋರಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಹಾಲೇಶ್, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಪಾಲಿಕೆಯ ಹಿರಿಯ ಸದಸ್ಯ ಶಿವನಹಳ್ಳಿ ರಮೇಶ್, ಪೌರ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜ್ ಇತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್
BJP: ಅಶಿಸ್ತಿನ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ: ಡಿವಿಎಸ್
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.