ಮುಂಗಾರು ಜೋರಿಲ್ಲ.. ಕೃಷಿ ಕಾರ್ಯ ಚುರುಕಿಲ್ಲ..
Team Udayavani, Jun 18, 2017, 12:38 PM IST
ಚನ್ನಗಿರಿ: ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿದ್ದರೂ ಮಳೆ ಸಂಪೂರ್ಣವಾಗಿ ಬಾರದಿರುವುದರಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ. ಈ ಬಾರಿ ಮುಂಗಾರು ಪ್ರವೇಶದಲ್ಲಿ ಉಂಟಾದ ಏರು-ಪೇರಿನಿಂದ ಜೂನ್ ತಿಂಗಳಿನೊಳಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು.
ಆದರೆ ಮಳೆ ಇಲ್ಲದೆ ಅನ್ನದಾತ ಮುಗಿಲು ನೋಡುವಂತಾಗಿದೆ. ಒಟ್ಟು 56 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಹುತೇಕ ಕೃಷಿ ಜಮೀನುಗಳನ್ನು ಹಸನ ಮಾಡಿಕೊಂಡು ಬೀಜ-ಗೊಬ್ಬರಗಳನ್ನು ಖರೀದಿಸಿ ವರುಣನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಆರಂಭದಲ್ಲಿ ಬಂದ ಮಳೆಗೆ ತಾಲೂಕಿನ ಕೆಲ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು, ಮಳೆಯಿಲ್ಲದೆ ಮೊಳಕೆಯಲ್ಲಿಯೇ ಬೀಜ ಒಣಗುವ ಹಂತಕ್ಕೆ ತಲುಪಿವೆ. ಸುಮಾರು 32 ಸಾವಿರ ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿಯಿದ್ದು, 650 ಹೆಕ್ಟೇರ್ ಪ್ರದೇಶದಲ್ಲಿ ಮೇಕೆಜೋಳ ಬಿತ್ತನೆ ಮಾಡಲಾಗಿದೆ. ಇದರಲ್ಲಿ 50 ಹೆಕ್ಟೇರ್‌ನಲ್ಲಿ ತೊಗರಿ, 5 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಮಾಡಲಾಗಿದೆ.
ನೀರಾವರಿ ಪ್ರದೇಶದಲ್ಲೂ ಸಿರಿಧಾನ್ಯ: ಬರಗಾಲದಿಂದ ಡ್ಯಾಂಗಳಲ್ಲಿ ನೀರಿಲ್ಲದೆ ನೀರಾವರಿ ಭಾಗಗಳಲ್ಲಿನ ರೈತರು ಭತ್ತ ಪ್ರಮುಖ ಬೆಳೆಯಾಗಿಸಿಕೊಂಡಿದ್ದರೂ ಇನ್ನು ಭತ್ತದ ಬಿತ್ತನೆಯಲ್ಲಿಯೂ ವಿಳಂಬವಾಗಿದೆ. ಹೀಗಾಗಿ ಭತ್ತ ಬೆಳೆಯುವ ಪ್ರದೇಶದಲ್ಲಿ ರಾಗಿ, ತೊಗರಿ ಬೆಳೆ ಬೆಳೆಯುಲು ರೈತರು ಮುಂದಾಗಿದ್ದಾರೆ.
ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಆದರೆ ಮಳೆಯನ್ನು ಕಾಯುತ್ತಿರುವ ರೈತರು 15ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಬಿತ್ತನೆ ಕಾರ್ಯವನ್ನು ಮುಂದುವರಿಸಲಿದ್ದಾರೆ. ಇದರಿಂದ ಕೃಷಿ ಇಲಾಖೆಗಳಲ್ಲಿ ರಾಗಿ- ತೋಗರಿ ಬೀಜಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.
ಪ್ರಸಕ್ತ 116 ಮಿಮೀ ಮಳೆ: ಜೂನ್ ತಿಂಗಳಿಗೆ ವಾಡಿಕೆ ಮಳೆ 136 ಮೀ.ಮಿ ಮಳೆಯಾಗಬೇಕಿದ್ದು. 116 ಮೀಮಿ. ಮಾತ್ರ ಮಳೆಯಾಗಿದೆ. ಕಳೆದ ವರ್ಷದಲ್ಲಿ 89 ಮಿಮಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ನಿರ್ಮಾಣವಾಗಿದೆ. 15 ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತದೆ.
2ಸಾವಿರ ಕ್ವಿಂಟಲ್ ಬೀಜ ದಾಸ್ತಾನು: ಮೆಕ್ಕೆಜೋಳದ ಬೀಜ 3 ಸಾವಿರ ಕ್ವಿಂಟಲ್ ಬೇಡಿಕೆಯಿದ್ದು, ಕೃಷಿ ಇಲಾಖೆಯಲ್ಲಿ 2 ಸಾವಿರ ಕ್ವಿಂಟಲ್ ಬೀಜ ದಾಸ್ತನು ಮಾಡಲಾಗಿದೆ. 28ಸಾವಿರ ಮೇಟ್ರಿಕ್ ಟನ್ ರಸ ಗೊಬ್ಬರದ ಬೇಡಿಕೆ ಇದ್ದು ಈಗಾಗಲೇ ಕೃಷಿ ಇಲಾಖೆಯಿಂದ ದಾಸ್ತನು ಮಾಡಲಾಗಿದೆ.
ಬೀಜ-ಗೊಬ್ಬರಗಳ ಕೇಂದ್ರಗಳು ತೆರೆಯಲಾಗಿದ್ದು. ಕಸಬಾ ಹೋಬಳಿ-ಎಪಿಸಿಎಂಎಸ್‌ನಲ್ಲಿ 1, ನಲ್ಲೂರು ಸೊಸೈಟಿ-1 ಹಿರೇಮಳ್ಳಲಿ, ಸುಣಿಗೆರೆ, ಪಾಂಟೋಮಟ್ಟಿ- 2ಕೇಂದ್ರ, ಗೋಪ್ಪೆನಹಳ್ಳಿ, ಸಂತೇಬೆನ್ನೂರು, ದೇವರಹಳ್ಳಿ, ಚಿಕ್ಕಗಂಗೂರು, ಬಸವಾಪಟ್ಟಣ, ತ್ಯಾವಣಿಗೆ ಸೇರಿದಂತೆ ಬೀಜ ಗೊಬ್ಬರ ಕೇಂದ್ರಗಳನ್ನು ತೆರೆಯಲಾಗಿದೆ.
ಮೇಕೆಜೋಳಕ್ಕೆ 1 ಕೆಜಿ 20ರೂ ಸಬ್ಸಡಿ, ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದವರಿಗೆ 1ಕೆಜಿ ಗೆ 30ರೂ ಸಬ್ಸಡಿ ನೀಡಲಾಗುತ್ತಿದೆ. ಹಿಂದಿನ ವರ್ಷವು ಕೂಡ ಮೇಕೆಜೋಳವನ್ನು ಬಿತ್ತನೆ ಮಾಡಿದೇವು ಮಳೆಯ ಕೊರತೆ ಆದ ಈನೇಲೆ. ಬೆಳೆಯು ಕೈಗೆ ಸಿಗದೆ ನಷ್ಟವನ್ನು ಅನುಭವಿಸಿದ್ದೇವು. ಈ ಬಾರಿ ಮುಂಗಾರು ಪ್ರಾರಂಭವಾಗಿದೆ.
ಹೊಲವನ್ನು ಶುದ್ಧಮಾಡಿಕೊಂಡು. ಬೀಜ ಗೊಬ್ಬರಗಳನ್ನು ತಂದಿಟ್ಟುಕೊಂಡಿದ್ದೇವೆ. ಆದರೆ ಮಳೆಯ ಪ್ರಮಾಣ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದೇವೆ. ಎಂದು ಹೊನ್ನೆಬಾಗಿ ರೈತ ಕುಮಾರಪ್ಪ ಅಳಲು ತೋಡಿಕೊಳ್ಳುತ್ತಾರೆ, ಒಟ್ಟಾರೆ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು. ರೈತರು ಬಿತ್ತನೆಗೆ ಭೂಮಿಯನ್ನು ಹಸನು ಮಾಡಿದ್ದು ಮಳೆಗಾಗಿ ಕಾಯುವಂತೆ ಆಗಿದೆ.
* ಸಿ.ಎಸ್. ಶಶೀಂದ್ರ ಮೇಕೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.