ಮನಸೂರೆಗೊಂಡ ಕವಿ ನೋಡು.. ಕವಿತೆ ಹಾಡು..!
Team Udayavani, Jul 24, 2017, 12:39 PM IST
ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂಜೆ ನಡೆದ ಕವಿ ನೋಡು… ಕವಿತೆ ಹಾಡು… ಕಾರ್ಯಕ್ರಮ ಪ್ರೇಕ್ಷಕರ ಹೃನ್ಮನ ಸೂರೆಗೊಂಡಿತು.
ಯುವ ಗಾಯಕರಾದ ಅಮಿತ್ ಶೇಖರ್, ಅನುಷಾ ಸತೀಶ್, ಕರ್ನಾಟಕ ಬರೀ ನಾಡಲ್ಲ… ನಮ್ಮ ಸಂಸ್ಕೃತಿಯ ಧಾತು…, ಸುಬ್ಬಭಟ್ಟರೆ ಮಗಳೆ ಇದೆಲ್ಲ ನಂದೆ ತಗೊಳ್ಳೆ…, ಒಳಗೊಂಡಂತೆ ನಾಡಿನ ಹಿರಿಯ ಕವಿಗಳಾದ ಬಿ.ಆರ್. ಲಕ್ಷ್ಮಣರಾವ್, ಎಚ್. ಡುಂಡಿರಾಜ್ ರವರ ವಿವಿಧ ಕವಿತೆಗಳನ್ನು ಸುಶ್ರಾವ್ಯ, ಮಧುರವಾಗಿ ಪ್ರಸ್ತುತಪಡಿಸಿದರು. ಹಾಡಿನ ಮೂಲಕವೇ ಕವಿ ನೋಡು… ಕವಿತೆ ಹಾಡು… ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಬಿ.ಆರ್. ಲಕ್ಷಣರಾವ್ ಇಡೀ ಕಾರ್ಯಕ್ರಮಕ್ಕೆ ಒಳ್ಳೆಯ ಚಾಲನೆ ಕೊಟ್ಟರು.
ಹಾಸ್ಯಭರಿತ ಚುಟುಕಗಳವೇ ನಾಡಿನ ಜನರ ಮನ ಗೆದ್ದಿರುವ ಎಚ್. ಡುಂಡಿರಾಜ್, ಹಾಲು ಮಾರುವ ಹುಡುಗಿ… ಹಾಲಿನಂತೆ ಬಿಳುಪು… ಎನ್ನುವ ಹಾಡಿನ ಮೂಲಕ ತಾವು ಗೆಳೆಯನ ಒತ್ತಾಯದಿಂದ ಪ್ರೇಮ ಕವನ ಬರೆದಿದ್ದನ್ನು ಸ್ಮರಿಸಿದರು. ಪ್ರೇಮಕವಿತೆ ನಂತರ ಹಾಸ್ಯ ಕವನ
ನಗಿಸಿದ್ದಕ್ಕೆ ಚಪ್ಪಾಳೆ… ಗಂಭೀರ ಕವಿತೆ ಓದಿ ಮುಗಿಸಿದ್ದಕ್ಕೆ ಚಪ್ಪಾಳೆ… ಎನ್ನುವ ಚುಟುಕ ಹೇಳುವ ಮೂಲಕ ತಾವು ಹಾಸ್ಯ ಹನಿಗವನ ಬರೆಯಲಾರಂಭಿಸಿದ್ದನ್ನು ತಿಳಿಸಿದರು.
ಮದುವೆಯಾಗುವ ಮುನ್ನ ಎಲ್ಲ ಗಂಡು ಮಕ್ಕಳು ನರೇಂದ್ರ ಮೋದಿ… ಮದುವೆ ಆದ ಮೇಲೆ ಎಲ್ಲ ಗಂಡು ಮಕ್ಕಳು ಮನಮೋಹನ್ ಸಿಂಗ್… ಎನ್ನುವ ಚುಟುಕದ ಮೂಲಕ ಮದುವೆ, ಸಂಸಾರದ ಎಳೆ ಬಿಡಿಸಿಟ್ಟರು. ಕಾಲು ನೋವು ಹೇಗಿದೆ… ಹಾಗೆಯೇ ಇದೆ… ಬೆನ್ನು ನೋವು… ಬೀಗಿದೆ…
ಎಂಬ ಚುಟುಕದ ಮೂಲಕ ಕೆಲಸದಿಂದ ನಿವೃತ್ತಿಯ ನಂತರ ಎದುರಾಗುವ ಪರಿಸ್ಥಿತಿಯ ಬಿಡಿಸಿಟ್ಟರು.
ವಿಮರ್ಶಕರು ಕೇಳಿದರು… ನಿಮ್ಮ ಕವಿತೆಗೆ ಸ್ಫೂರ್ತಿ ಯಾರು… ನಿಮ್ಮ ಮಡದಿಯೇ.. ನಾನು ಹೇಳಿದೆ ಹೌದು ನಿಮ್ಮ ಮಡದಿಯೇ… ಎನ್ನುವ ಚುಟುಕಿನ ಮೂಲಕ ಕಚಗುಳಿಯಿಟ್ಟರು. ಬಗ್ಗೆ ಬರೆಯುತ್ತೇನೆ… ಬರೆಯಲೇಬೇಕು ಅನಿಸಿದ್ದಕ್ಕೆ… ಬರೆಯಲೇಬೇಕು ನೀವು ಮನ್ನಿಸಿದ್ದಕ್ಕೆ… ಎನ್ನುವ ಚುಟುಕ ವಾಚಿಸುವ ಮೂಲಕ ತಾವೇಕೆ ತಾವು ಏಕೆ ಹನಿಗವನ ಬರೆಯುತ್ತಿರುವುದಾಗಿ ಎಂಬುದನ್ನ ಅವರು ತಿಳಿಸಿದರು.
ಕನ್ನಡದ ಒಂದೊಂದು ಪದಕ್ಕೂ 12 ಅರ್ಥ, ಶ್ಲೇಷೆ ಇವೆ ಎನ್ನುವ ಕಾರಣಕ್ಕೆ ಬರೆಯುತ್ತಿದ್ದೇನೆ. ಹಾಗೆ ಬರೆಯುತ್ತಿರುವ ಕಾರಣಕ್ಕೆ ದಾವಣಗೆರೆ ಅಲ್ಲ ವಿದೇಶದಲ್ಲೂ ತಮ್ಮ ಕವಿತೆ ವಾಚಿಸುವ ಅವಕಾಶ ಬಂದಿದೆ. ಇದು ಕನ್ನಡದಲ್ಲಿ ಓದಿದರೆ ಏನು ಲಾಭ ಇದೆ ಎಂದು ಪ್ರಶ್ನಿಸುವರು ಅರಿಯಬೇಕು. ಕನ್ನಡಕ್ಕೆ ತನ್ನದೇ ಶಕ್ತಿ ಇದೆ.ಸಾಹಿತ್ಯದ ಶಕ್ತಿಯ ಮೂಲಕ ಜನರ ಪ್ರೀತಿ, ವಿಶ್ವಾಸ ದೊರೆಯುತ್ತದೆ. ಅದು ಯಾವುದೇ ಪ್ರಶಸ್ತಿ, ಹಣ, ಸನ್ಮಾನಕ್ಕಿಂತಲೂ ಮಿಗಿಲು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್‌ಕುರ್ಕಿ ಮಾತನಾಡಿ, ಸಾಹಿತ್ಯ ಮನಕ್ಕೆ ಸಂತೋಷ ಕೊಡುತ್ತದೆ. ನಮ್ಮದೇ ಆದ ಸಮಸ್ಯೆಯಿಂದ ನಮ್ಮನ್ನು ಹೊರ ತರುತ್ತದೆ. ಅಂತಹ ಶ್ರೇಷ್ಠ ಮಟ್ಟದ ಸಾಹಿತ್ಯ ಸೇವೆ ಮಾಡುತ್ತಿರುವ ಬಿ.ಆರ್. ಲಕ್ಷ್ಮಣರಾವ್, ಡುಂಡಿರಾಜ್ ಅವರಿಗೆ ಅವರೇ ಸಾಟಿ. ಇಬ್ಬರು ಸಾಹಿತ್ಯ ಕ್ಷೇತ್ರದ ಸೂರ್ಯ-ಚಂದ್ರರು ಎಂದು ಬಣ್ಣಿಸಿದರು.
ದಾವಣಗೆರೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಜಗಳೂರು ಅಧ್ಯಕ್ಷ ಹಜರತ್ ಅಲಿ, ಹರಿಹರ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಇತರರು ಇದ್ದರು. ಜಿ.ಎಚ್. ರಾಜಶೇಖರ್ ಗುಂಡಗಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.