ದಶಕದಲ್ಲಿ ಏರಿದ ಜನಸಂಖ್ಯೆ ಒಂದೂವರೆ ಲಕ್ಷ
Team Udayavani, Jul 21, 2017, 12:50 PM IST
ದಾವಣಗೆರೆ: ಜಿಲ್ಲೆಯಲ್ಲಿ ಒಂದು ದಶಕದ ಅವಧಿಯಲ್ಲಿ 1,54,545 ರಷ್ಟು ಜನಸಂಖ್ಯೆ ಹೆಚ್ಚಾಗಿದೆ. 2001ರ ಜನಗಣತಿ ಪ್ರಕಾರ 17,90,952 ಇದ್ದ ಜನಸಂಖ್ಯೆ, 2011ರ ಜನಗಣತಿ ಪ್ರಕಾರ 19,45,597 ರಷ್ಟಿದೆ.
1997ರ ಆಗಸ್ಟ್ 15ರಂದು ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಜಿಲ್ಲೆ 5975.97 ಚದುರ ಕಿಲೋ ಮೀಟರ್ ವಿಸೀ¤ರ್ಣ ಹೊಂದಿದೆ. 6
ತಾಲೂಕುಗಳಲ್ಲಿ 926 ಗ್ರಾಮಗಳಿವೆ. ಅವುಗಳಲ್ಲಿ 803 ಜನವಸತಿ ಪ್ರದೇಶ, 103 ಜನರಹಿತ ಪ್ರದೇಶ. 24 ಹೋಬಳಿ, 238 ಗ್ರಾಮ ಪಂಚಾಯತಿಗಳಿವೆ. 2001ರ ಜನಗಣತಿ ಪ್ರಕಾರ ಜನಸಂಖ್ಯಾ ಬೆಳವಣಿಗೆ ದರ ಶೇ.14.9. 2011ರ ಜನಗಣತಿ ಪ್ರಕಾರ ಶೇ.8.9.
1209.76 ಚದುರ ಕಿಲೋ ಮೀಟರ್ ವಿಸ್ತಿರ್ಣದ ಅಡಕೆನಾಡು ಚನ್ನಗಿರಿಯಲ್ಲಿ 2001ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆ 2,92,507. ಅವರಲ್ಲಿ ಪುರುಷರು 1,49,796 ಮತ್ತು 1,42,711 ರಷ್ಟು ಮಹಿಳೆಯರಿದ್ದರು. 2011ರ ಜನಗಣತಿ ಪ್ರಕಾರ
1,52,883 ಪುರುಷರು, 1,49,634 ಮಹಿಳೆಯರು ಸೇರಿ ಒಟ್ಟು 3,02,003 ಜನರಿದ್ದಾರೆ.
994.1 ಚದುರ ಕಿಲೋ ಮೀಟರ್ ವಿಸ್ತಿರ್ಣ ಹೊಂದಿರುವ ಜಿಲ್ಲಾ ಕೇಂದ್ರ ದಾವಣಗೆರೆ ತಾಲೂಕಿನಲ್ಲಿ 2001ರ ಜನಗಣತಿ ಪ್ರಕಾರ ಜನಸಂಖ್ಯಾ ಪ್ರಮಾಣ 6,02,523. ಅವರಲ್ಲಿ 3,09,642 ಪುರುಷರು, 2,92,881 ಮಹಿಳೆಯರಿದ್ದರು. 2011 ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆ 6,81,779. ಪುರುಷರ ಸಂಖ್ಯೆ 3,44,759, ಮಹಿಳೆಯರ ಸಂಖ್ಯೆ 3,37,220. 1430.24 ಚದುರ ಕಿಲೋ ಮೀಟರ್ ವಿಸ್ತಿರ್ಣದ ಬರಪೀಡಿತ ಪ್ರದೇಶ ಹಣೆಪಟ್ಟಿ ಯ ಹರಪನಹಳ್ಳಿ ತಾಲೂಕಿನಲ್ಲಿ 2001ರ ಜನಗಣತಿ ಪ್ರಕಾರ
1,37,605 ಪುರುಷರು, 1,31,185 ಮಹಿಳೆಯರು ಒಳಗೊಂಡಂತೆ ಒಟ್ಟು ಇದ್ದಂತಹ ಜನಸಂಖ್ಯೆ 2,68,793. 2011 ರ ಜನಗಣತಿ ಪ್ರಕಾರ ಇರುವ ಒಟ್ಟು ಜನಸಂಖ್ಯೆ 3,02,003. ಅವರಲ್ಲಿ 1,54,289 ಪುರುಷರು, 1,47,714 ಮಹಿಳೆಯರಿದ್ದಾರೆ.
498.66 ಚದುರ ಕಿಲೋ ಮೀಟರ್ ವಿಸ್ತಿರ್ಣ ಹೊಂದಿರುವ ಜಿಲ್ಲೆಯ ಚಿಕ್ಕ ತಾಲೂಕು ಹರಿಹರದಲ್ಲಿ 2001ರ ಜನಗಣತಿ ಪ್ರಕಾರ 2,45,654. ಅವರಲ್ಲಿ 1,26,128 ಪುರುಷರು, 1,19,526 ಮಹಿಳೆಯರಿದ್ದರು. 2011ರ ಜನಗಣತಿ ಪ್ರಕಾರ 1,29,336 ಪುರುಷರು, 1,24,834 ಮಹಿಳೆಯರು ಒಳಗೊಂಡಂತೆ 2,54,170 ಜನಸಂಖ್ಯೆ ಇದೆ.
887.94 ಚದುರ ಕಿಲೋ ಮೀಟರ್ ವಿಸ್ತಿರ್ಣ ಹೊಂದಿರುವ ಅರೆ ಮಲೆನಾಡು ಹೊನ್ನಾಳಿ ತಾಲೂಕಿನಲ್ಲಿ 2001ರ ಜನಗಣತಿ
ಪ್ರಕಾರ ಇದ್ದ ಜನಸಂಖ್ಯೆ ಪ್ರಮಾಣ 2,22,592. ಅವರಲ್ಲಿ 1,13,577 ಪುರುಷರು, 1,09,015 ಮಹಿಳೆಯರಿದ್ದರು. 2011 ರ ಜನಗಣತಿ ಪ್ರಕಾರ 1,18,152 ಪುರುಷರು, 1,15,054 ಮಹಿಳೆಯರು ಸೇರಿ ಒಟ್ಟಿರುವ ಜನಸಂಖ್ಯೆ 3,02,003. 955.27 ಚದುರ ಕಿಲೋ ಮೀಟರ್ ವಿಸ್ತಿರ್ಣ ಹೊಂದಿರುವ ಬಯಲುಸೀಮೆ ಜಗಳೂರು ತಾಲೂಕಿನಲ್ಲಿ 2001 ರ ಜನಗಣತಿ ಪ್ರಕಾರ 80,954
ಪುರುಷರು, 77,929 ಮಹಿಳೆಯರು ಒಳಗೊಂಡಂತೆ 1,58,883 ಜನರಿದ್ದರು. 2011 ರ ಜನಗಣತಿ ಪ್ರಕಾರ 86,981 ಪುರುಷರು, 84,841 ಮಹಿಳೆಯರು ಒಳಗೊಂಡಂತೆ 1,71,822 ಜನಸಂಖ್ಯೆ ಇದೆ. 972 ಮಹಿಳೆಯರು.
ನಡು ಕರ್ನಾಟಕದ ಕೇಂದ್ರ ಬಿಂದು
ದಾವಣಗೆರೆಯಲ್ಲಿ ಸಾವಿರ ಪುರುಷರಿಗೆ 972 ಮಹಿಳೆಯರಿದ್ದಾರೆ. ರಾಜ್ಯ ಮಟ್ಟದಲ್ಲಿ 973 ಇದ್ದರೆ. ರಾಷ್ಟ್ರ ಮಟ್ಟದಲ್ಲಿ ಲಿಂಗಾನುಪಾತ 943 ಇದೆ ಎಂಬುದು ಗಮನಾರ್ಹ. 2001 ಮತ್ತು 2011ರ ಜನಗಣತಿಗೆ ಹೋಲಿಕೆ ಮಾಡಿದರೆ 85,850 ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. 2001ರ ಜನಗಣತಿ ಪ್ರಕಾರ 8,73,247 ಮಹಿಳೆಯರಿದ್ದರೆ, 2011 ರ ಜನಗಣತಿ ಪ್ರಕಾರ 9,59,097 ಇದೆ. ಒಂದು
ದಶಕದಲ್ಲಿ 2001 ರಿಂದ 2011 ರವರೆಗೆ ಪುರುಷರ ಜನಸಂಖ್ಯೆ ಬೆಳವಣಿಗೆ ಪ್ರಮಾಣ ಮಹಿಳೆಯರಗಿಂತ ಕಡಿಮೆ ಇದೆ. 2001ರ ಜನಗಣತಿ ಪ್ರಕಾರ ಪುರುಷರ ಸಂಖ್ಯೆ 9,17,705. 2011ರ ಜನಗಣತಿ ಪ್ರಕಾರ 9,86,400. ಒಂದು ದಶಕದಲ್ಲಿ 68,695 ಪುರುಷರು ಹೆಚ್ಚಾಗಿದ್ದಾರೆ.
ಒಂದು ದಶಕದ ಅಂತರದಲ್ಲಿ 85,850 ರಷ್ಟು ಮಹಿಳೆಯರು ಹೆಚ್ಚಾಗಿದ್ದರೆ. ಪುರುಷರು 68,695 ರಷ್ಟು ಹೆಚ್ಚಾಗಿದ್ದಾರೆ. ಆದರೂ, 2011 ರ ಜನಗಣತಿ ಪ್ರಕಾರ ಲಿಂಗಾನುಪಾತದಲ್ಲಿ 1 ಸಾವಿರಕ್ಕೆ 28 ಮಹಿಳೆಯರು ಕಡಿಮೆ ಇದ್ದಾರೆ.
ಇಂದು ಜನಜಾಗೃತಿ ಜಾಥಾ…
ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಜಾಥಾ ಇಂದು ಶುಕ್ರವಾರ (ಜು. 21) ನಡೆಯಲಿದೆ. ಬೆಳಗ್ಗೆ 9ಕ್ಕೆ ಬಾಷಾನಗರದಲ್ಲಿರುವ ಪ್ರಸೂತಿ ಕೇಂದ್ರದಿಂದ ಪ್ರಾರಂಭವಾಗುವ ಜಾಥಾ ಬಾಷಾ ನಗರ ಇತರೆ ಪ್ರಮುಖ ರಸ್ತೆಯಲ್ಲಿ
ಸಂಚರಿಸಲಿದೆ. ಈ ಬಾರಿ ಹೊಸ ಅಲೆ… ಹೊಸ ವಿಶ್ವಾಸ… ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬದ ವಿಕಾಸ… ಎಂಬ ಧ್ಯೇಯ
ಘೋಷಣೆಯೊಂದಿಗೆ ಜಾಥಾ ನಡೆಯಲಿದೆ. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಜಾಥಾ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ಜನಪ್ರತಿನಿಧಿಗಳು, ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ
ಕಾರ್ಯಕರ್ತೆಯರು ಇನ್ನಿತರರು ಭಾಗವಹಿಸುವರು.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.