ವೀರಶೈವರು ಒಂದಾದ್ರೆ ರಾಜ್ಯ ಆಳಬಹುದು


Team Udayavani, Mar 27, 2017, 1:05 PM IST

dvg1.jpg

ದಾವಣಗೆರೆ: ವೀರಶೈವ ಸಮಾಜ ಒಂದಾದರೆ ಇಡೀ ರಾಜ್ಯವನ್ನು ಆಳಲಿದೆ. ಆದರೆ, ನಾವು ನಮ್ಮ ಒಳಪಂಗಡಗಳ ಹೆಸರಲ್ಲಿ ಒಡೆದುಹೋಗಿ ಅವಕಾಶ ತಪ್ಪಿಸಿಕೊಂಡಿದ್ದೇವೆ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಜ್ಯೋತಿ ಪ್ರಕಾಶ್‌ ಮಿರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅಭಿನವ ರೇಣುಕಾ ಮಂದಿರಲ್ಲಿ ಭಾನುವಾರ ವೀರಶೈವ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.

ವೀರಶೈವ ಸಮಾಜದಲ್ಲಿನ ಎಲ್ಲಾ ಒಳಪಂಡಗಳು ಒಂದಾದರೆ ನಮ್ಮದೇ ಸರ್ಕಾರವನ್ನು  ರಚಿಸಬಹುದಾಗಿದೆ. ಆದರೆ, ಇಡೀ ಸಮಾಜ ಒಳಪಂಗಡಗಳಲ್ಲಿ ಹರಿದುಹೋಗಿವೆ ಎಂದರು. ನಮ್ಮ ಸಮಾಜ ರಾಜ್ಯದಲ್ಲಿಯೇ ಅತಿದೊಡ್ಡ ಸಮಾಜವಾಗಿದೆ. ನಮ್ಮಲ್ಲಿನ ಒಳಪಂಗಡಗಳ ಕಲಹ, ವೈಯಕ್ತಿಕ ಆಸಕ್ತಿಗಳಿಂದ ಇಂದಿಗೂ ನಮಗೆ ಸಿಗಬೇಕಾದ ಹಕ್ಕು, ಸವಲತ್ತು ಸಿಗುತ್ತಿಲ್ಲ. ಹಕ್ಕಿಗಾಗಿ ಹೋರಾಟ ಮಾಡುವ ಸ್ಥಿತಿ ಇದೆ.

ನಮ್ಮ ಸಮಾಜದ ನಾಯಕರು ನಾವು ಹೇಳಿದಂತೆ ಕೇಳಬೇಕು. ಆದರೆ, ಇಂದು ಅವರು ತಮ್ಮ ಹಿತಾಸಕ್ತಿಗೆ ಸಮಾಜದ ಹಿತವನ್ನು ಬಲಿ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಸಮಾಜದ ಆಶಯ ಧಿಕ್ಕರಿಸುವ ಯಾವುದೇ ನಾಯಕರನ್ನು ನಾವು ತಿರಸ್ಕಾರ ಮನೋಭಾವದಿಂದ ನೋಡಬೇಕಿದೆ. ವೀರಶೈವ ಸಮಾಜಕ್ಕೆ ಇರುವ ಪ್ರಬಲ ಶಕ್ತಿಯನ್ನು ನಾವು ಮನದಟ್ಟು ಮಾಡಿಕೊಡಬೇಕು.

ಹೀಗೆ ಆಗಬೇಕಾದರೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಿದೆ. ದೃಢ ನಿರ್ಧಾರ ಕೈಗೊಳ್ಳುವ ಶಕ್ತಿ ಸಮಾಜಕ್ಕೆ ಬರಬೇಕಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಹೆಚ್ಚಿನ ಮಟ್ಟದಲ್ಲಿ ಸಂಘಟನೆ ಆಗಬೇಕು. ವೀರಶೈವ ಸಂಘರ್ಷ ಸಮಿತಿ ಇಂದು ಉತ್ತಮ ಕಾರ್ಯ ಮಾಡುತ್ತಿದೆ. ಸಮಾಜದ ಎಲ್ಲಾ ಬಾಂಧವರು ಅವರ ಜೊತೆ ಕೈ ಜೋಡಿಸಿ. ಸಮಾಜ ಯಾವ ದಿಕ್ಕಿಗೆ ಸಾಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಘಟನೆಯ ವರಿಷ್ಠರಿಗೆ ಬಿಟ್ಟುಬಿಡಿ.

ಆದರೆ, ಪ್ರತೀ ನಿರ್ಧಾರ ತೆಗೆದುಕೊಂಡಾಗಲೂ ಅವರೊಂದಿಗೆ ಕೈ ಜೋಡಿಸಿ. ಯಾವುದೇ ಕರೆಕೊಟ್ಟಾಗ ಒಟ್ಟಾಗಿ ಕೆಲಸಮಾಡಿ ಎಂದು ಹೇಳಿದರು.ಸಮಾಜದ ಮುಖಂಡ ಎಚ್‌.ಎಸ್‌. ನಾಗರಾಜ್‌ ಮಾತನಾಡಿ, ವೀರಶೈವರು ಎಂದರೆ ವಿಶಾಲ ಮನೋಭಾವದಿಂದ ಎಲ್ಲರನ್ನೂ ಅಪ್ಪಿಕೊಂಡು ಯಶಸ್ಸು ಗಳಿಸುವವರಾಗಿದ್ದಾರೆ. ಆದರೆ, ಇಂದು ನಮ್ಮ ಸಮಾಜದ ಮುಖಂಡರು ಮಾಡುವ ತಪ್ಪಿಗೆ ಇಡೀ ಸಮಾಜ ಸಮಸ್ಯೆಗೆ ತುತ್ತಾಗಿದೆ.

ಇದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ನಮ್ಮ ಯುವ ಸಮೂಹದಿಂದ ನಮ್ಮಲ್ಲಿರುವ ಒಳಪಂಡಗಳು ದೂರ ಆಗುವಂತೆ ನಾವು ಮಾಡಬೇಕಿದೆ ಎಂದರು. ಇಂದಿನ ಕಾರ್ಯಕ್ರಮಕ್ಕೆ ಅನೇಕ ಮುಖಂಡರು ಗೈರಾಗಿದ್ದಾರೆ. ಇದಕ್ಕೆ ಕಾರಣ ಅನೇಕ ಇವೆ. ಆದರೆ, ಅವರೆಲ್ಲರ ಬೆಂಬಲ ನಿಮಗೆ ಮುಂದೆ ಸಿಕ್ಕೇ ಸಿಗಲಿದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಹೊಂದಿದವರ ಬೆಂಬಲಕ್ಕೆ ಸಮಾಜ ಸದಾ ನಿಲ್ಲುತ್ತದೆ.

ಇದನ್ನು ಯುವ ಸಮೂಹ ಮನಗಾಣಬೇಕು. ಮುಂದಿನ ವರ್ಷದ ವೇಳೆಗೆ ಸಮಿತಿಯ ಧ್ಯೇಯೋದ್ದೇಶಗಳ ಪೈಕಿ ಕೆಲವನ್ನಾದರೂ ಈಡೇರಿಸಿಕೊಂಡು ಸಮಾವೇಶ ಮಾಡುವಂತೆ ಆಗಬೇಕು ಎಂದು ತಿಳಿಸಿದರು. ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಬಿರಾದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಸಂಘರ್ಷ ಸಮಿತಿ ಕಟ್ಟಿಕೊಂಡಿರುವುದು ಇತರೆ ಯಾವುದೋ ಸಮಾಜದ ಜೊತೆ ಸಂಘರ್ಷ ಕಟ್ಟಿಕೊಳ್ಳಲಲ್ಲ.

ಆದರೆ, ನಮ್ಮ ಸಮಾಜಕ್ಕೆಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು. ಮುಂದೆ ನಮ್ಮ ಸಮಿತಿ ಸಮಾಜದ ಯಾವುದೇ ವ್ಯಕ್ತಿ, ಸಮುದಾಯಕ್ಕೆ ಅನ್ಯಾಯವಾದರೂ ಅವರ ಪರ ನಿಲ್ಲಲಿದೆ ಎಂದರು. ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಧ್ಯಕ್ಷೆ ವೀಣಾ ಕಾಶಪ್ಪನವರ್‌, ದಾವಣಗೆರೆ  ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಹೈಕೋಟ್‌ ವಕೀಲ ಅಮೃತೇಶ್‌, ಸಹಕಾರಿ ಧುರೀಣ ಎನ್‌.ಎಂ.ಜೆ.ಬಿ. ಆರಾಧ್ಯ, 

ಕೈಗಾರಿಕೋದ್ಯಮಿ ಡಿ.ವಿ. ಪ್ರಶಾಂತ್‌,ನಗರಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌, ಸಮಿತಿಯ ದೇವರಮನಿ ಶಿವಕುಮಾರ್‌, ಒಣರೊಟ್ಟಿ ಮಹಾಂತೇಶ್‌, ಬೂಸನೂರು ವಿಶ್ವನಾಥ್‌, ಉಮೇಶ್‌ ಕತ್ತಿ, ಜಿ. ಶಿವಯೋಗಪ್ಪ, ಕಿರುವಾಡಿ ಸೋಮಶೇಖರ್‌, ದೇವರಮನಿ ಶಿವಕುಮಾರ್‌, ಗಣೇಶ ಹಾದಿಮನಿ, ಅಜಯ್‌, ಸಿದ್ದೇಶಪ್ಪ ಇತರರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮದ ಮುನ್ನ ಜಯದೇವ ವೃತ್ತದಿಂದ ಮೆರವಣಿಗೆ ನಡೆಯಿತು.  

ಟಾಪ್ ನ್ಯೂಸ್

mamata

BSF ಒಳನುಸುಳುಕೋರರು ಪ್ರವೇಶಿಸಲು ನೆರವಾಗುತ್ತಿದೆ: ಮಮತಾ ಬ್ಯಾನರ್ಜಿ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

1-gil

450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mamata

BSF ಒಳನುಸುಳುಕೋರರು ಪ್ರವೇಶಿಸಲು ನೆರವಾಗುತ್ತಿದೆ: ಮಮತಾ ಬ್ಯಾನರ್ಜಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

ನನ್ನ ನಾಯಿಗಳಿಗೆ ಕ್ರಾಸಿಂಗ್‌ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್‌‌ ಏನೇನು ಗೊತ್ತಾ?

ನನ್ನ ನಾಯಿಗಳಿಗೆ ಕ್ರಾಸಿಂಗ್‌ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್‌‌ ಏನೇನು ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.