ಮೌಡ್ಯತೆ ಮೆಟ್ಟಿ ನಿಲ್ಲುವುದೇ ನಿಜವಾದ ಧರ್ಮಾಚರಣೆ
Team Udayavani, Feb 10, 2019, 6:05 AM IST
ಹರಿಹರ: ಮೌಡ್ಯತೆ ಮೆಟ್ಟಿ ನಿಂತು ವೈಚಾರಿಕ, ವೈಜ್ಞಾನಿಕ ತಳಹದಿಯಲ್ಲಿ ಬದುಕು ನಡೆಸುವುದೇ ನಿಜವಾದ ಧರ್ಮಾಚರಣೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶರಣರು ಹೇಳಿದರು.
ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಶನಿವಾರ ಎರಡನೇ ದಿನದ ವಾಲ್ಮೀಕಿ ಜಾತ್ರೆಯಲ್ಲಿ ಧರ್ಮಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಆದರೆ ಕೆಲವರು ಮೌಡ್ಯ, ಕಂದಾಚಾರಗಳನ್ನೇ ಧರ್ಮವೆಂದು ಬಿಂಬಿಸುತ್ತಾರೆ. ಮೂಢನಂಬಿಕೆಗಳು ಧರ್ಮ ವಿರೋಧಿ ಎಂದರು.
ಈ ಪೀಠದ ಬಲವರ್ಧನೆಗಾಗಿ ತಾವು ಮಾಜಿ ಸಚಿವ ದಿ| ತಿಪ್ಪೇಸ್ವಾಮಿ, ಲಿಂ| ಪುಣ್ಯಾನಂದಪುರಿ ಶ್ರೀ ಹಾಗೂ ಇತರರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾಗಿ ತಿಳಿಸಿದ ಶರಣರು, ಮಠ ಹಾಗೂ ಸಮಾಜ ಕಟ್ಟುವ ಅರ್ಧ ಕೆಲಸ ಪುಣ್ಯಾನಂದಪುರಿ ಶ್ರೀಗಳಿಂದಾಗಿತ್ತು. ಉಳಿದರ್ಧ ಕೆಲಸ ಪ್ರಸನ್ನಾನಂದ ಶ್ರೀಗಳು ಮಾಡುತ್ತಿದ್ದಾರೆ. 21 ವರ್ಷಗಳಲ್ಲಿ ಶ್ರೀಮಠವು ಸಕ್ರಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದುರ್ಗ ಕುಂಚಿಟಿಗ ಗುರುಪೀಠದ ಶಾಂತವೀರ ಶ್ರೀಗಳು ಮಾತನಾಡಿ, ದುಶ್ಚಟಗಳಿಗೆ ದಾಸರಾಗಿರುವುದು ಹಾಗೂ ಜಾಗೃತಿ ಕೊರತೆಯೇ ಶೋಷಿತರ ಹಿಂದುಳಿಯುವಿಕೆಗೆ ಕಾರಣ ಹೊರತು ಬೇರಾರಲ್ಲ. ಮುಖಂಡರು ಉದ್ಧಾರವಾದರೆ ಸಾಲದು, ಸಮಾಜದ ಜನಸಾಮಾನ್ಯರು ಉದ್ಧಾರವಾಗುವತ್ತ ಚಿತ್ತ ಹರಿಸಬೇಕೆಂದರು. ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ, ಪ್ರಾಣಿಬಲಿ ನೀಡುವ ಜಾತ್ರೆಗಳು ಶೋಷಿತ ವರ್ಗದವರನ್ನು ಸಾಲಗಾರರನ್ನಾಗಿ ಮಾಡುತ್ತವೆ. ಅಂತಹ ಜಾತ್ರೆಗಳ ಸಾಲ ತೀರಿಸಲು ವರ್ಷಗಟ್ಟಲೆ ದುಡಿಮೆ ಮಾಡಬೇಕು. ವಾಲ್ಮೀಕಿ ಜಾತ್ರೆ ಅಧ್ಯಾತ್ಮ, ಅಕ್ಷರ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ಬ್ರಿಟೀಷರಿಗೆ ಮೈನಡುಕ ಉಂಟು ಮಾಡಿದ್ದ ಸಿಂಧೂರ ಲಕ್ಷ್ಮಣನಂತೆ ಈ ಸಮಾಜದವರು ಹೋರಾಟಗಾರರಾಗಬೇಕು. ಆ ಮೂಲಕ ವಾಲ್ಮೀಕಿ ಸಮಾಜದವರು ಮುಖ್ಯವಾಹಿನಿಗೆ ಬರಬೇಕು ಎಂದರು.
ಜೇವರ್ಗಿ ಸಿದ್ಧ ಬಸವ ಕಬೀರ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿ ಯಾರಿಂದಲೂ ಏನನ್ನೂ ಬೇಡದ ಬೇಡ ಸಮಾಜದವರು ಶ್ರೀಗಳ ಮಾರ್ಗದರ್ಶನದಲ್ಲಿ ಸಂಘಟಿತರಾಗುತ್ತಿರುವುದು ಸಂತಸದ ವಿಷಯ. ಈ ಹಿಂದೆ ಪಾಳೇಗಾರರು ಹಲವು ಮಠ, ಮಾನ್ಯಗಳ ಅಭಿವೃದ್ಧಿಗೆ ಬೆನ್ನುಲುಬಾಗಿ ನಿಂತಿದ್ದರು ಎಂದು ಸ್ಮರಿಸಿದರು.
ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಶ್ರೀ, ಬೆಂಗಳೂರಿನ ಚಂದ್ರಶೇಖರ ಶ್ರೀ, ಮಳವಳ್ಳಿ ಬಸವಾನಂದ ಶ್ರೀಗಳು ಹಾಗೂ ನಾಡಿನ ವಿವಿಧ ಮಠಾಧಿಧೀಶರು ಆಶೀರ್ವಚನ ನೀಡಿದರು. ಮಠಾಧೀಶರನ್ನು ಪ್ರಸನ್ನಾನಂದ ಶ್ರೀಗಳು ಹಾಗೂ ಧರ್ಮದರ್ಶಿಗಳು ಸತ್ಕರಿಸಿದರು. ಜಾತ್ರಾ ಸಮಿತಿ ಅಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಶ್ರೀರಾಮುಲು, ಡಾ| ಶಾಮನೂರು ಶಿವಶಂಕರಪ್ಪ, ಎಸ್.ರಾಮಪ್ಪ, ಎಸ್.ವಿ. ರಾಮಚಂದ್ರಪ್ಪ, ರೇಣುಕಾಚಾರ್ಯ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.