ದೇವಸ್ಥಾನ ಹುಂಡಿ ಕಳ್ಳತನಕ್ಕೆ ವಿಫಲ ಯತ್ನ
Team Udayavani, Apr 7, 2017, 1:02 PM IST
ಹರಿಹರ: ರಾಮನವಮಿ ದಿನ ಮತ್ತಷ್ಟು ದೇಣಿಗೆ ತುಂಬಿರುತ್ತದೆ ಎಂಬ ದುರಾಸೆಯಿಂದ ದೇವಸ್ಥಾನದ ಹುಂಡಿಗೆ ಕನ್ನ ಹಾಕಲು ಬಂದಿದ್ದ ಕಳ್ಳನೊಬ್ಬನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆಹಿಡಿದ ಘಟನೆ ನಗರದ ಹರ್ಲಾಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಹರ್ಲಾಪುರದ ನಗರಸಭೆ ಉದ್ಯಾನವನದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ರಾತ್ರಿ 12ರ ವೇಳೆಗೆ ವ್ಯಕ್ತಿಯೊಬ್ಬ ಬಾಗಿಲ ಬೀಗ ಮುರಿದು ನೋಡನೋಡುತ್ತಲೇ ದೇವಸ್ಥಾನದ ಒಳಗೆ ತೆರಳಿದ್ದು, ಸುತ್ತಲಿನ ಕೆಲ ನಿವಾಸಿಗಳ ಗಮನಕ್ಕೆ ಬಂದಿದೆ. ಕೂಡಲೆ ಅವರು ಪೊಲೀಸರಿಗೆ ಕರೆ ಮಾಡಿ, ದೂರದಿಂದ ಕಳ್ಳನ ಚಲನವಲ ಗಮನಿಸುತ್ತಿದ್ದರೆ.
ತಾನು ತಂದಿದ್ದ ಹಾರೆ ಮತ್ತಿತರೆ ಸಲಕರಣೆಗಳಿಂದ ಆತ ಹುಂಡಿಯನ್ನು ತೆರೆಯಲು ಪ್ರಯತ್ನ ಮಾಡುತ್ತಿದ್ದಾಗ ಪೊಲೀಸ್ ವಾಹನ ಸ್ಥಳಕ್ಕೆ ಆಗಮಿಸಿದ್ದು, ಈ ಶಬ್ದ ಕೇಳಿದ ಆರೋಪಿ ದೇವಸ್ಥಾನ ಒಳಗೆ ಬಚ್ಚಿಟ್ಟುಕೊಂಡಿದ್ದಾನೆ. ದೇವಸ್ಥಾನ ಸುತ್ತುವರಿದ ಪೊಲೀಸರು ಹೊರಬರುವಂತೆ ಆತನನ್ನು ಕರೆದರೂ ಆತ ಹೊರಬರದಿದ್ದಾಗ ಪೊಲೀಸರೆ ಒಳಗೆ ತೆರಳಿ ಆರೋಪಿಯನ್ನು ಬಂಧಿಸಿದರು.
ಕೆಲ ಹೊತ್ತಿನವರೆಗೆ ನಡೆದ ಈ ಕಳ್ಳಾ-ಪೊಲೀಸ್ ಆಟವನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಸೆರೆಯಾಗಿರುವ ಆರೋಪಿತ ನಗರ ವಾಸಿ ಮೇಘರಾಜ್, ದೂರು ದಾಖಲಿಸಿಕೊಂಡಿರುವ ನಗರಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೀದಿ ದೀಪಕ್ಕೆ ಆಗ್ರಹ: ಸಮೀಪದ ವಿಜಯನಗರ ಬಡಾವಣೆಯ ಗಣೇಶ ದೇವಸ್ಥಾನದಲ್ಲೂ ಇತ್ತೀಚೆಗೆ ಕಳ್ಳತನ ನಡೆದಿತ್ತು.
ಕಳ್ಳರ ಗುಂಪೊಂದು ನಗರದಲ್ಲಿ ಸಕ್ರೀಯವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಉದ್ಯಾನವನದ ಪಕ್ಕದ ರಸ್ತೆಯಲ್ಲಿ ರಾತ್ರಿ ಬೆಳಕಿಲ್ಲದಾಗಿದೆ. ಬೀದಿ ದೀಪ ಹಾಕಲು ವಾರ್ಡ್‌ನ ನಗರಸಭಾ ಸದಸ್ಯರಿಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.