ಯುವಜನ ಮೇಳದಲ್ಲಿ ಜಾನಪದ ಪ್ರಕಾರಗಳ ಅನಾವರಣ


Team Udayavani, Feb 16, 2017, 1:10 PM IST

dvg3.jpg

ದಾವಣಗೆರೆ: ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜನಪದ ನೃತ್ಯ, ಗಾಯನ ಲೋಕವೇ ಅನಾವರಣಗೊಂಡು, ಭಾವಗೀತೆ, ಗೀಗೀ ಪದ, ಲಾವಣಿ, ಕೋಲಾಟ, ವೀರಗಾಸೆ, ಡೊಳ್ಳುಕುಣಿತ, ರಂಗಗೀತೆ, ಏಕಪಾತ್ರಾಭಿನಯ ಅಲ್ಲಿದ್ದವರ ಕಣ್ಮನ ಸೆಳೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳ ಕನ್ನಡದ ನೆಲ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಅನೇಕ ಕಲಾ ಪ್ರಕಾರಗಳಿಗೆ ಸಾಕ್ಷಿಯಾಯಿತು. 

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕ, ಯುವತಿ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮಲ್ಲಿನ ಕಲಾ ಪ್ರತಿಭೆ ಪ್ರದರ್ಶಿಸಿದರು. ಕನ್ನಡದ ಸಾರಸ್ವತ ಲೋಕದ ಖ್ಯಾತಿವೆತ್ತ ದರಾ ಬೇಂದ್ರೆ, ಕುವೆಂಪು, ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ, ಡಾ| ಕೆ.ಎಸ್‌. ನರಸಿಂಹಸ್ವಾಮಿ ಮುಂತಾದ ಮೇರು ಕವಿಗಳ ಕವನಗಳಿಗೆ ಮೇಳದಲ್ಲಿನ ಸ್ಪರ್ಧಿಗಳು ಧ್ವನಿಯಾದರು.  

ಕನ್ನಡ ನೆಲದ ಸಾಂಸ್ಕೃತಿಕ ಬೇರಿನ ಜನಪದ, ಗೀಗೀಪದ, ಧಾನ್ಯಗಳ ಕುಟ್ಟಿ, ಹಸನು ಮಾಡುವ ಹೊತ್ತನ್ನು ಕಳೆಯಲಿಕ್ಕೆ ಹಾಡಲ್ಪಡುತ್ತಿದ್ದ ಹಾಡುಗಳು, ಮದುವೆ ಮುಂತಾದ ಶುಭ ಸಂದರ್ಭದಲ್ಲಿನ ಸೋಬಾನೆ ಪದ…ಹೀಗೆ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸ್ಪರ್ಧಿಗಳು ಗಮನ ಸೆಳೆದರು. ದಾವಣಗೆರೆಯ ದವನ ಫೋಕ್‌ ಆರ್ಟ್ಸ್ನ ವಿದ್ಯಾರ್ಥಿನಿಯ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದಿತು.

ಧ್ವನಿಮುದ್ರಿತ ಹಾಡಿನ ಬದಲಾಗಿ ಕಲಾವಿದರು ಹಾಡಿದಂಥಹ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಜಾನಪದ ಲೋಕವನ್ನೇ ತೆರೆದಿಟ್ಟರು. ವೇಷಭೂಷಣ ಒಪ್ಪಓರಣವಾಗಿತ್ತು. ಹರಪನಹಳ್ಳಿಯ ಸೇವಾಲಾಲ್‌ ಗ್ರಾಮೀಣ ಅಭಿವೃದ್ಧಿ ಸಂಘದ ಪದಾಧಿಕಾರಿಗಳ ಲಂಬಾಣಿ ನೃತ್ಯ ಆಕರ್ಷಕವಾಗಿತ್ತು.

ಲಂಬಾಣಿ ಸಮಾಜದ ಸಂಪ್ರದಾಯದ ಉಡುಪಿನೊಂದಿಗೆ ಕಂಗೊಳಿಸಿದ ಯುವತಿಯರು ಡುಂ ಡುಂ ಡುಮುಕಿ… ಹಾಡಿಗೆ ಅತ್ಯಾಕರ್ಷಕದ ನೃತ್ಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಇಲ್ಲಿಯೂ ಧ್ವನಿಮುದ್ರಿಯ ಹಾಡಿ ಇರಲಿಲ್ಲ ಎಂಬುದು ವಿಶೇಷ. ಯುವಜನ ಮೇಳದ ಸ್ಪರ್ಧಿಯಾಗಿರದಿದ್ದರೂ ಬಾಲಕಿ ಕೆ. ಸಿಂಚನಾ ತನ್ನ ತೊದಲು ನುಡಿಗಳಿಂದ ನಡೆಸಿಕೊಟ್ಟ ಬಬ್ರುವಾಹನ… ಏಕಪಾತ್ರಾಭಿನಯಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. 

ಎರಡು ದಿನಗಳ ಕಾಲ ನಡೆಯುವ ಯುವಜನ ಮೇಳದಲ್ಲಿ ಮೊದಲ ದಿನ ದಾವಣಗೆರೆ ತಾಲೂಕಿನ 82, ಹರಿಹರದ 25, ಹೊನ್ನಾಳಿಯ 39, ಹರಪನಹಳ್ಳಿಯ 20, ಚನ್ನಗಿರಿಯ 10 ಕಲಾವಿದರು ನೋಂದಣಿ ಮಾಡಿಕೊಂಡಿದ್ದರು. ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲಿನಲ್ಲಿ ಫೆ. 17 ರಿಂದ 19ರ ವರೆಗೆ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು. 

ಮಾರ್ಚ್‌ನಲ್ಲಿ ಉಡುಪಿಯಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್‌. ಶ್ರೀನಿವಾಸ್‌ ತಿಳಿಸಿದರು. ಯುವಜನ ಮೇಳದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಮಾತ್ರವೇ ನೀಡಲಾಗುತ್ತದೆ. ಇತರೆ ವೆಚ್ಚವನ್ನು ತಗ್ಗಿಸಿ, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ತಾವು ಈವರೆಗೆ ಸೇವೆ ಸಲ್ಲಿಸಿರುವ ಕಡೆ ನಗದು ಬಹುಮಾನ ನೀಡಲಾಗುತ್ತಿತ್ತು. ನಗದು ಬಹುಮಾನ ನೀಡಿದಲ್ಲಿ  ಸ್ಪರ್ಧಿಗಳಿಗೆ ಉತ್ತೇಜನ ದೊರೆತಂತಾಗುತ್ತದೆ ಎಂದು ತಿಳಿಸಿದರು. ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ್‌, ರಾಜ್ಯ ಪ್ರಶಸ್ತಿ ಪಡೆದಿರುವ ಎಂ. ಯೋಗೇಶ್‌, ಡಿ.ಎಲ್‌. ಜಯರಾಜನಾಯ್ಕ, ಆರ್‌. ಶಿವಾನಂದನಾಯ್ಕ ಇತರರು ಇದ್ದರು.  

ಟಾಪ್ ನ್ಯೂಸ್

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.