ಕಾರ್ಮಿಕರು ಸ್ವತ್ಛತೆಯ ಹರಿಕಾರರು


Team Udayavani, Mar 12, 2019, 10:16 AM IST

dvg-4.jpg

ದಾವಣಗೆರೆ: ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರು ನಿಜವಾಗಿಯೂ ಸ್ವತ್ಛತೆಯ ಹರಿಕಾರರು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಬಣ್ಣಿಸಿದ್ದಾರೆ.

ಸೋಮವಾರ ರೇಣುಕಾ ಮಂದಿರದಲ್ಲಿ ಜಿಲ್ಲಾ ಸರ್‌.ಎಂ. ವಿಶ್ವೇಶ್ವರಾಯ ಕಟ್ಟಡ, ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರ
ಸಂಘದ 6ನೇ ವಾರ್ಷಿಕೋತ್ಸವ, ವಿಶ್ವ ಪ್ಲಂಬರ್‌ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪ್ಲಂಬರ್‌ ಮೇಸ್ತ್ರಿಗಳಿಗೆ
ಗೌರವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನೆ, ಕಚೇರಿ ಎಲ್ಲಾ ಕಡೆ ಸ್ವತ್ಛತೆಯ ವಾತಾವರಣಕ್ಕೆ ಪ್ಲಂಬರ್‌ ಅವಶ್ಯಕತೆ ಇದೆ. ಪ್ಲಂಬರ್‌ಗಳು ಇರದಿದ್ದರೇ ದೇಶವೇ ಅಸ್ವತ್ಛತೆಯಿಂದ ಕೂಡಿರುತ್ತಿತ್ತು ಎಂದರು.

ಜಗತ್ತಿನಲ್ಲಿ ಯಾವಾಗಲೂ ನಿಜವಾದ ಕಾಯಕ ಯೋಗಿಗಳು ಎಂದರೆ ಕಾರ್ಮಿಕರು. ಮಹಾನ್‌ ದಾರ್ಶನಿಕ ಬಸವಣ್ಣನವರು
ಹೇಳಿದಂತೆ ಕಾಯಾ, ವಾಚಾ, ಮನಸಾ ಯಾರು ಪರಿಶುದ್ಧ, ಪ್ರಾಮಾಣಿಕ ಕಾಯಕ ಮಾಡುವರೋ ಅವರೇ ನಿಜವಾದ ಕಾಯಕ ಜೀವಿಗಳು, ದೇವರು, ಕರ್ಮಯೋಗಿಗಳು. ಸತ್ಯ ಶುದ್ಧತೆಯಿಂದ ಯಾರು ಕಾಯಕ ಮಾಡುತ್ತಾರೋ ಅಂತಹವರು 100 ವರ್ಷಗಳ ಕಾಲ ಆರೋಗ್ಯಪೂರ್ಣರಾಗಿ ಬಾಳುತ್ತಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರು ಪ್ಲಂಬರ್‌ಗಳೇ. ನಿತ್ಯವೂ ಎಲ್ಲರೂ ಯಾವುದಾದರೂ ಜೋಡಣೆ ಕಾರ್ಯದಲ್ಲಿಯೇ ತೊಡಗಿಕೊಂಡಿರುತ್ತಾರೆ. ಇತರರಿಗೂ ಪ್ಲಂಬರ್‌ಗಳಿಗೆ ಯಾವುದೇ ವ್ಯತ್ಯಾಸ ಇಲ್ಲ. ಮುಂದಿನ ವರ್ಷ ಹರಿಹರ ಪೀಠದಲ್ಲಿ ವಿಶ್ವ ಪ್ಲಂಬರ್‌ ದಿನದ ಆಚರಣೆ ಮಾಡುವಂತೆ ತಿಳಿಸಿದರು. ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಮಾತನಾಡಿ, ಕಟ್ಟಡ ಕಾರ್ಮಿಕ ಸಂಘಕ್ಕೆ ವರ್ಷಕ್ಕೆ 275 ರೂ. ಶುಲ್ಕ ಪಾವತಿಸುವ ಮೂಲಕ ಕಾರ್ಡ್‌ ಪಡೆಯುವುದರಿಂದ ಮಕ್ಕಳ ಶಿಕ್ಷಣ, ಯಾವುದಾದರೂ ಅವಘಡ ಸಂಭವಿಸಿದಲ್ಲಿ ಪರಿಹಾರ, ವಿವಾಹ ಪ್ರೋತ್ಸಾಹಧನ ನೀಡಲಾಗುತ್ತದೆ. ವಿವಿಧ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ 220 ಕೋಟಿ ಕಲ್ಯಾಣ ಮಂಡಳಿಯಿಂದ ಕಾರ್ಮಿಕರು ಸದ್ವಿನಿಯೋಗ ಪಡಿಸಿಕೊಂಡಿದ್ದರು ಎಂದು ತಿಳಿಸಿದರು.

ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆವರಗೆರೆ ಎಚ್‌.ಜಿ.ಉಮೇಶ್‌ ಮಾತನಾಡಿ, ಮನೆ, ಮಂದಿರ, ಚರ್ಚ್‌ಗಳ ನಿರ್ಮಾಣ ಕಾಯಕ ಮಾಡುವರನ್ನು ಸದಾ ಸ್ಮರಿಸಬೇಕಾಗಿದೆ. ಕಟ್ಟಡ ಕಾರ್ಮಿಕರು, ಪ್ಲಂಬರ್‌ಗಳ ಸಾಕಷ್ಟು ಶ್ರಮವಿದೆ. ಕಟ್ಟಡ ಕಾರ್ಮಿಕರಿಗೆ ಸರ್ಕಾರ ಏನು ಕೊಡುತ್ತಿದೆ ಎನ್ನುವುದಕ್ಕಿಂತ ಏನನ್ನು ಪಡೆದಿದ್ದೇನೆ ಎನ್ನುವುದನ್ನು ತಿಳಿಯಬೇಕಾಗಿದೆ ಎಂದು ಸಲಹೆ ನೀಡಿದರು.

ಕಟ್ಟಡ ಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವ ಜ್ಞಾನದ ಕೊರತೆ ಇದೆ. ಕಟ್ಟಡ ಕಾರ್ಮಿಕರ ಶ್ರಮದ ಶೇ.1 ಪಾಲನ್ನು ಕಲ್ಯಾಣ ಮಂಡಳಿಗೆ ನೀಡುವುದರಿಂದ ಮಂಡಳಿಯಲ್ಲಿ 7.500 ಕೋಟಿ ರೂಪಾಯಿ ಇದೆ. ಅದು ಕಾರ್ಮಿಕರಿಗೆ ಸದ್ಬಳಕೆಯಾಗಬೇಕು.
 
ಜಿಲ್ಲೆಯ 46 ಸಾವಿರ ಕಟ್ಟಡ ಕಾರ್ಮಿಕರಲ್ಲಿ ಎಷ್ಟು ನಿಷ್ಠಾವಂತರು, ಮೋಸಗಾರರು ಎನ್ನುವುದು ತಿಳಿಯಬೇಕಾಗಿದೆ. ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ದೊರಕಬೇಕು. ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾ.18 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎನ್‌. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ದೇವಮನೆ ಶಿವಕುಮಾರ್‌, ಎಚ್‌.ಬಿ. ಮಂಜುನಾಥ್‌, ಅರವಿಂದ್‌ ಎಲ್‌.ಬದ್ಧಿ, ಶಿವಕುಮಾರ್‌ ಡಿ. ಶೆಟ್ಟರ್‌, ಜಿ.ಬಿ. ಸುರೇಶ್‌ಕುಮಾರ್‌, ಎಚ್‌.ವಿ. ಮಂಜುನಾಥ್‌ಸ್ವಾಮಿ, ಸಿ.ಎಂ. ರವಿ, ಎಸ್‌. ಎಸ್‌. ರಮೇಶ್‌, ಎ.ಆರ್‌. ಶರಣಕುಮಾರ್‌, ಡಿ. ನವೀನ್‌ಕುಮಾರ್‌ ಇತರರು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ಪ್ಲಂಬರ್‌ ಮೇಸ್ತ್ರಿಗಳಿಗೆ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಮುನ್ನ ಬೈಕ್‌ ರ್ಯಾಲಿ ನಡೆಯಿತು.

ಟಾಪ್ ನ್ಯೂಸ್

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.