ಇನ್ನು ನಗರದಲ್ಲಿ  ವಿದ್ಯುತ್‌ ತಂತಿ ಭೂಗತ


Team Udayavani, Jul 4, 2017, 2:30 PM IST

davngere-5.jpg

ದಾವಣಗೆರೆ: ವಿದ್ಯುತ್‌ ತಂತಿಗಳನ್ನು ಭೂಗತಗೊಳಿಸುವ ಕಾಮಗಾರಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಆರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

ಸೋಮವಾರ ರಾಜ್ಯ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್‌ ತಂತಿ ಭೂಗತಗೊಳಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, ಸುಮಾರು 82 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ
ಕೈಗೊಳ್ಳಲಾಗುತ್ತಿದೆ. ಇದು ಸ್ಮಾರ್ಟ್‌ ಸಿಟಿಯ ಕಾಮಗಾರಿ ಅಲ್ಲ. ರಾಜ್ಯ ಸರ್ಕಾರ ನೀಡಿದ ಹಣದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆರಂಭದಲ್ಲಿ ಪಿಬಿ ರಸ್ತೆಯ ಕೇಬಲ್‌ ಭೂಗತಗೊಳಿಸಲಿದ್ದು, ಇನ್ನೂ 450 ಕೋಟಿ ರೂ. ಬರಲಿದ್ದು, ಅದರಲ್ಲಿ ನಗರದ ಎಲ್ಲಾ ಭಾಗದ ಪ್ರಮುಖ ರಸ್ತೆಗಳ ತಂತಿ ಭೂಗತಗೊಳಿಸಲಾಗುವುದು. ಒಟ್ಟು 532 ಕೋಟಿ ರೂ.ನ ಕಾಮಗಾರಿ ನಡೆಯಲಿದೆ ಎಂದರು.

ರಾಜ್ಯ ಸಾರಿಗೆ ಬಸ್‌ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ, ಎವಿಕೆ ಕಾಲೇಜು ರಸ್ತೆ, ಬೈಪಾಸ್‌ನಿಂದ ಅರಳಿಮರ ವೃತ್ತ, ವಿದ್ಯಾರ್ಥಿ ಭವನದಿಂದ ಶಾಮನೂರು ಬೈಪಾಸ್‌ವರೆಗೆ ಇರುವ ರಸ್ತೆಗಳಲ್ಲಿನ ಕೇಬಲನ್ನು ಸಹ ಯುಜಿ ಕೇಬಲ್‌ ಆಗಿ ಪರಿವರ್ತಿಸಲಾಗುವುದು. ನೆಲ ಅಗೆಯದೇ ಕೇಬಲ್‌ ಅಳವಡಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಇದಲ್ಲದೆ ನಿರಂತರ ನೀರು ಒದಗಿಸಲು 450 ಕೋಟಿ ರೂ.ಗಳಲ್ಲಿ ಜಲಸಿರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುವುದು. ಅದಕ್ಕೂ ಸಹ ಶೀಘ್ರ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಹೀಗೆ ಸಿಮೆಂಟ್‌ ರಸ್ತೆ, ಕುಡಿಯುವ ನೀರು ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಒಟ್ಟು 1600 ಕೋಟಿ ರೂ. ಕಾಮಗಾರಿ ನಡೆಯುತ್ತಿವೆ. ಒಟ್ಟು
180 ಕಿಮೀ ರಸ್ತೆ ಕಾಂಕೀಟ್‌ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ, ಎಪಿಎಂಸಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಬಂದ ಅನುದಾನದಲ್ಲಿ ನಗರವನ್ನು ಸುಂದರಗೊಳಿಸಲಾಗುತ್ತಿದೆ. ಪಿಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಿದೇಶದಿಂದ ತರಿಸಿದ ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ಹೇಳಿದರು.

ಇನ್ನು ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನೂ ಸಿಮೆಂಟೀಕರಣಕ್ಕೆ ಕ್ರಮ ವಹಿಸಲಾಗಿದೆ. ಸದ್ಯ ಬಂದಿರುವ 1600 ಕೋಟಿ ರೂ.ನ ಅನುದಾನದ ಜೊತೆಗೆ ಇನ್ನೂ 120 ಕೋಟಿ ರೂ. ಬಿಡುಗಡೆ ಆಗಲಿದೆ. ಇದಲ್ಲದೆ, ಬೇರೆ ಬೇರೆ ಅನುದಾನ ತಂದು ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಗ್ರಾಮೀಣ ರಸ್ತೆಗಳನ್ನು ಕಾಂಕೀಟ್‌ ಮಾಡಲಾಗುವುದು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ನಾನು ನಗರ ಸಭೆ ಅಧ್ಯಕ್ಷನಾಗಿದ್ದಾಗ 1975ರಲ್ಲೇ ಈ ಯುಜಿ ಕೇಬಲಿಂಗ್‌ ಪ್ರಸ್ತಾವನೆ ಬಂದಿತ್ತು. ಆಗ 9 ಕೋಟಿ ರೂ. ಅಂದಾಜು ಪಟ್ಟಿ ಮಾಡಲಾಗಿತ್ತು. ಆದರೆ, ಆಗ ಇಷ್ಟು ಅನುದಾನ ಕೊಡಲು ಸಾಧ್ಯವಿದ್ದಿಲ್ಲ. ಈಗ 600 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲು ನಮ್ಮ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದರು. ಮೇಯರ್‌ ಅನಿತಾಬಾಯಿ, ಪಾಲಿಕೆ ಸದಸ್ಯರಾದ ಎಂ. ಬಸಪ್ಪ,
ದಿನೇಶ್‌ ಕೆ. ಶೆಟ್ಟಿ,ಶಿವನಹಳ್ಳಿ ರಮೇಶ್‌, ಎಂ. ಹಾಲೇಶ್‌, ಚಂದ್ರಶೇಖರ್‌, ಸುರೇಂದ್ರ ಮೊಯಿಲಿ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ ವೇದಿಕೆಯಲ್ಲಿದ್ದರು.

ಬಾತಿಕೆರೆ ಅಭಿವೃದ್ಧಿ
ಬಾತಿ ಕೆರೆಯನ್ನು ಬೋಟಿಂಗ್‌ ಸ್ಪಾಟ್‌ ಮಾಡಿ, ಪಕ್ಕದಲ್ಲೊಂದು ಬೊಟಾನಿಕಲ್‌ ಗಾರ್ಡನ್‌ ನಿರ್ಮಾಣ ಮಾಡಲು
ನಿರ್ಧರಿಸಲಾಗಿದೆ. ಕೆ.ಆರ್‌. ಮಾರುಕಟ್ಟೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರದಲ್ಲಿ ಈ ಎಲ್ಲಾ ಕಾಮಗಾರಿ ಕೈಗೊಳ್ಳಲಾಗುವುದು. ಇದರ ಜೊತೆಗೆ ಪಿಬಿ ರಸ್ತೆಗೆ ಎರಡೂ ಕಡೆ ಫುಟ್‌ಪಾತ್‌ 
ನಿರ್ಮಿಸಲಾಗುವುದು. ಲೋಕಿಕೆರೆ ರಸ್ತೆ ಅಗಲೀಕರಿಸಿ, ಅಲ್ಲಿಯೂ ಪಾದಾಚಾರಿ ರಸ್ತೆ ನಿರ್ಮಿಸಲಾಗುವುದು.
ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ ಡೂಡಾದಿಂದ ಬಡಾವಣೆ ಡೂಡಾದಿಂದ 400-500 ಎಕರೆ ಜಮೀನು ಖರೀದಿಸಿ, ಬಡ, ಮಧ್ಯಮ ವರ್ಗದ ಜನರಿಗಾಗಿ ಬಡಾವಣೆ ನಿರ್ಮಿಸಲಾಗುವುದು. ಈ ಹಿಂದೆ ಬಿಜೆಪಿಯವರು
ಮಾಡಿದಂತೆ ನಾವು 25 ಸಾವಿರ ಕಮೀಷನ್‌ ಇಸ್ಕೊಂಟು ಸೈಟು ಹಂಚಲ್ಲ, ಅರ್ಹರನ್ನು ಆಯ್ಕೆಮಾಡಿ, ಅವರಿಗೆ 
ನಿವೇಶನ ಕೊಡ್ತೇವೆ ಎಂದು ಮಲ್ಲಿಕಾರ್ಜುನ್‌ ಭಾಷಣದಲ್ಲಿ ತಿಳಿಸಿದರು.

ಟಾಪ್ ನ್ಯೂಸ್

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.