ಧರ್ಮ-ಜಾತಿ ಹೆಸರಿನಲ್ಲಿ ಸಮಾಜ ಛಿದ್ರ ಸಲ್ಲ


Team Udayavani, May 10, 2017, 12:42 PM IST

dvg3.jpg

ಹರಪನಹಳ್ಳಿ: ಧರ್ಮ, ಜಾತಿ, ಪ್ರಾಂತ್ಯ, ಭಾಷೆ ಹೆಸರಿನಲ್ಲಿ ಸಮಾಜ ಛಿದ್ರಗೊಳಿಸುವ ಕೆಲಸ ಆಗಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಮಂಗಳವಾರ ವೀರಭದ್ರೇಶ್ವರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಜನ ಜಾಗೃತಿ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಅಶೀವರ್ಚನ ನೀಡಿದರು. 

ಸ್ವಧರ್ಮದ ನಿಷ್ಠೆಯೊಂದಿಗೆ ಪರಧರ್ಮ ಸಹಿಷ್ಣುತೆ ಇದ್ದರೆ ಬದುಕಿದಲ್ಲಿ-ಸಮಾಜದಲ್ಲಿ ಶಾಂತಿ, ಸಾಮರಸ್ಯ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಪಂಚಪೀಠಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಆಧುನಿಕ ಜಗತ್ತಿನಲ್ಲಿ ಹಳೆಯದನ್ನು ಮರೆತು ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದೇವೆ. ಹಳೆಯದನ್ನು ಮರೆತರೆ ಹೊಸತನಕ್ಕೆ ಬೆಲೆಯಿಲ್ಲ.

ಮನುಷ್ಯನಿಗೆ ಸ್ವಾಭಿಮಾನದ ಆಚರಣೆ ಪರಿಕಲ್ಪನೆ ಇಲ್ಲದ ಕಾರಣ ತಳಮಳ, ಅಶಾಂತಿ ತಾಂಡವಾಡುತ್ತಿದೆ. ಯುವ ಜನಾಂಗಕ್ಕೆ ಧಾರ್ಮಿಕ ಸಂಸ್ಕಾರ, ಸದ್ವಿಚಾರಗಳನ್ನು ತಿಳಿಸಲು ಮಠಾಧೀಶರು, ಅಧ್ಯಾತ್ಮಿಕ ಕೇಂದ್ರಗಳ ಅವಶ್ಯಕತೆ ಹೆಚ್ಚಿದೆ ಎಂದರು. ಹಣ, ಅಧಿಕಾರದ ಬೆನ್ನು ಹತ್ತಿ ಹೊರಟವರ ಕಥೆ ಮುಗಿದಿದೆ.

ಬದುಕಿನಲ್ಲಿ ಧರ್ಮದ ತಳಹದಿಯಲ್ಲಿ ನಡೆದಾಗ ಜೀವನ ಸಾರ್ಥಕವಾಗಲಿದೆ. ದೇವರು, ಧರ್ಮ, ಗುರುವನ್ನು ಜೀವನದಲ್ಲಿ ಮರೆಯಬಾರದು. ದೇವನೊಬ್ಬ ನಾಮ ಹಲವು ಎನ್ನುವುದನ್ನು ಅರಿತಲ್ಲಿ ಮಾತ್ರ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಉಂಟಾಗುತ್ತದೆ. ಧರ್ಮದ ಆಚರಣೆ ಇಲ್ಲವಾದಲ್ಲಿ ಮನುಷ್ಯನಿಗೆ ಶ್ರೇಯಸ್ಸು, ಉನ್ನತಿ ಸಾಧ್ಯವಿಲ್ಲ.

ಇಂದು ಮನುಷ್ಯನ ನುಡಿಯಲ್ಲಿ ಜಾಣ್ಮೆ ಕಾಣುತ್ತೇವೆ, ಆದರೆ ನಡೆಯಲ್ಲಿ ವಿಫಲರಾಗಿದ್ದೇವೆ. ವಿಶ್ವ ಬಂಧುತ್ವದ ಮೌಲ್ಯಗಳನ್ನು ರೇಣುಕಾಚಾರ್ಯರು ವಿಶ್ವಕ್ಕೆ ಸಾರಿದ್ದಾರೆ ಎಂದು ಹೇಳಿದರು. ರೇಣುಕಾಚಾರ್ಯರರ ದಶಸೂತ್ರಗಳಾದ ಅಹಿಂಸಾ, ಸತ್ಯ, ಅಸಹ್ಯ, ಬ್ರಹ್ಮಚರ್ಯ, ದಯಾ, ಕ್ಷಮಾ, ಪೂಜಾ, ರಸ, ಜಪ, ಧ್ಯಾನ ಇವು ಎಲ್ಲಾ ಜನಾಂಗದವರ ಧರ್ಮದ ದಾರಿದೀಪಗಳಾಗಿವೆ. 

ರೇಣುಕಾಚಾರ್ಯರ “ಮಾನವ ಧರ್ಮಕ್ಕೆ ಜಯವಾಗಲಿ’ ಎನ್ನುವ ಮಾತು ಎಲ್ಲಾ ಧರ್ಮದ ಶಾಂತಿ ಸೇತುವೆಗೆ ದಾರಿಯಾಗಿದೆ. ವೀರಶೈವ ಧರ್ಮದ ಪರಂಪರೆ ಇಂದು ಹುಟ್ಟಿ, ನಾಳೆ ಕಣ್ಮರೆಯಾಗುವಂತಹ ಇತಿಹಾಸವಲ್ಲ. ಅನಾದಿಕಾಲದ ಭವ್ಯ ಪರಂಪರೆ ಹೊಂದಿದೆ. ವಿಜ್ಞಾನ ಯುಗದಲ್ಲಿಯೂ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಮರೆಯುತ್ತಿರುವುದು ಶ್ಲಾಘನೀಯ ಎಂದರು.

ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ರಂಭಾಪುರಿ ಪೀಠಕ್ಕೆ ರಂಭಾಫಲವಾಗಿ ಬಂದು, ಪಂಚಪೀಠಗಳ ಗಣನಾಯಕರಾಗಿ ಡಾಕ್ಟರೆಟ್‌ ಪದವಿಗೆ ಭಾಜನರಾಗಿ ಪಂಚಪೀಠ ಪರಂಪರೆಯಲ್ಲಿ ಮತ್ತೆ ಅವತರಿಸಿ ಬಂದ ಜಗದ್ಗುರು ರೇಣುಕಾರೇ ತಾವೆಂದು ಸಾಬೀತುಪಡಿಸಿದ್ದೀರಿ. ಸಾಧನೆ ಕೆಲವರಿಗೆ ವೇದನೆಯಾದರೆ ಸಾಧನೆಗೇನೆ ವೇದನೆ ತಂದ ಸಾಧಕ ಜಗದ್ಗುರುಗಳು ತಾವು ಎಂದು ರಂಭಾಪುರಿ ಶ್ರೀಗಳ ಸಾಧನೆ ಸ್ಮರಿಸಿದರು. 

ರೂಪಸಿಂಗ್‌ಲಾಡ್‌ ಮಾತನಾಡಿ, ಜಾತಿ, ಕುಲ ಮನುಷ್ಯರನ್ನು ದೂರ ಮಾಡಿದರೆ ಧರ್ಮ ಕೂಡಿಸುತ್ತದೆ. ಧರ್ಮ, ಪಂಪರೆ, ಸಂಸ್ಕೃತಿ ಉಳಿದಿರುವುದು ಮಠಾಧೀಶರು, ಸಂತರಿಂದ ಮಾತ್ರ. ಡಚ್ಚರು, ಬ್ರಿಟಿಷರು, ಮೊಗಲರು ಸೇರಿದಂತೆ ಅನೇಕರ ಅಕ್ರಮಣದ ನಡುವೆಯೂ ಹಿಂದೂ ಧರ್ಮ ಉಳಿದಿದೆ ಎಂದರು. ಮಾನಿಹಳ್ಳಿ ಮಠದ ಮಳೆಯೋಗಿ ಸ್ವಾಮೀಜಿ, ಕೊಟ್ಟೂರು ಯೋಗಿರಾಜೇಂದ್ರ ಸ್ವಾಮೀಜಿ, ಜಿಪಂ ಸದಸ್ಯ ಉತ್ತಂಗಿ ಡಾ| ಮಂಜುನಾಥ್‌ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಕೆ.ಎನ್‌. ರವಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡ ಎಸ್‌. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಮಘಟ್ಟ ರೇವಣಸಿದ್ದೇಶ್ವರ ಸ್ವಾಮೀಜಿ, ವಿಭೂತಿಪುರ ಮಠದ ಮಹಾಂತಲಿಂಗ ಸ್ವಾಮೀಜಿ, ತಾಪಂ ಸದಸ್ಯ ಎಸ್‌. ಬಸವನಗೌಡ, ಬಿಜೆಪಿ ಮುಖಂಡ ಎನ್‌. ಕೊಟ್ರೇಶ್‌, ಕೆ. ರಾಜೇಶ್ವರಿ, ಟಿ.ಎಂ. ಚಂದ್ರಶೇಖರಯ್ಯ, ಎಂ.ಎಂ. ನೀಲಪ್ಪ, ಕೆ. ದ್ಯಾಮನಗೌಡ, ಸಾಬಳ್ಳಿ ಜಂಬಣ್ಣ ಮತ್ತಿತರರು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.